ದೆಹಲಿ : ಗ್ರೇಟರ್ ನೊಯಿಡಾದಲ್ಲಿ ತಾಯಿಯೊಬ್ಬರ ಬೇಜವಾಬ್ದಾರಿತನದಿಂದ ಭಾರಿ ಅನಾಹುತವೊಂದು ಸಂಭವಿಸಿದೆ. ಚಾಲನಾ ಪರವಾನಗಿ ಇಲ್ಲದ ತಮ್ಮ ಅಪ್ರಾಪ್ತ ಮಗನಿಗೆ ಕಾರಿನ ಕೀ ನೀಡಿ ಡ್ರೈವ್ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಆ ಬಾಲಕ ಕಾರನ್ನು ಚಾಲನೆ ಮಾಡುವಾಗ ಪುಟ್ಟ ಮಗುವಿನ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆ ಸ್ಥಳೀಯರಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ನೀಡುವುದು ಕೇವಲ ನಿರ್ಲಕ್ಷ್ಯವಲ್ಲ, ಬದಲಿಗೆ ರಸ್ತೆಯಲ್ಲಿ ಸಂಚರಿಸುವ ಇತರ ಜನರ ಪ್ರಾಣದ ಜೊತೆ ಆಟವಾಡಿದಂತೆ. ಮಗುವಿನ ಸುರಕ್ಷತೆ ಹಾಗೂ ಸಮಾಜದ ಬಗ್ಗೆ ಕನಿಷ್ಠ ಕಾಳಜಿಯಿಲ್ಲದ ಇಂತಹ ತಾಯಿಗೆ ಮಗುವನ್ನು ಸಾಕುಬೆಳೆಸುವ ಅರ್ಹತೆ (Parental Custody) ಇದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರರು ಒತ್ತಾಯಿಸಿದ್ದಾರೆ. ಮೋಟಾರು ವಾಹನ ಕಾಯ್ದೆಯಡಿ ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಅವಕಾಶವಿದ್ದು, ಈ ಪ್ರಕರಣದಲ್ಲಿ ತಾಯಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.
Delhi NCR Shocker: A mother in Noida handed her car keys to her minor son, allowing him to drive, and he then hits a toddler’s vehicle. The authorities should seriously review whether she is fit to have custody of the child. Handing a car to a minor isn’t just reckless- it puts… pic.twitter.com/ozEnleoGHu
— Meru (@MeruOnX) September 24, 2026

