ಬೆಂಗಳೂರು: ನಗರದ ವಸತಿ ಅಪಾರ್ಟ್‌ಮೆಂಟ್ ಸಮುದಾಯಗಳಲ್ಲಿ (Apartment Complexes) ಸಂಘ ಪರಿವಾರ ಹಾಗೂ ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಸಂಸ್ಥೆಗಳ ಪರಿಚಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹಾಗೂ ಯುವಜನರನ್ನು ತಲುಪುವ ಈ ರೀತಿಯ ಪ್ರಯತ್ನಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ ಎಂದು ಎಕ್ಸ್ನಲ್ಲಿ ರಾಜ್ಯದ ಗೃಹ ಸಚಿವ ಪ್ರಿಯಾಂಕ ಖರ್ಗೆ ಹಂಚಿಕೊಂಡಿದ್ದಾರೆ. ಆರ್‌ಎಸ್‌ಎಸ್ ಹಂಚಿಕೊಂಡಿರುವ ಪೋಸ್ಟ್ನ್ನು ಮರು ಹಂಚಿಕೊಂಡು ಗೃಹ ಸಚಿವರು ಆರ್‌ಎಸ್‌ಎಸ್ ವಿರುದ್ಧ ಕಿಡಿಕಾರಿದ್ದಾರೆ. ಕಾನೂನಾತ್ಮಕ ಹಾಗೂ ನಿಯಂತ್ರಣಾತ್ಮಕ ಸ್ಪಷ್ಟತೆ ಇಲ್ಲದ ಸಂಸ್ಥೆಗಳಿಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು ತಮ್ಮ ಬಾಗಿಲು ತೆರೆಯುತ್ತಿರುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಇತ್ತೀಚೆಗೆ ಕೆಲವು ಪ್ರಮುಖ ವಸತಿ ಸಮುದಾಯಗಳಲ್ಲಿ “ಆರ್‌ಎಸ್‌ಎಸ್ ಪರಿಚಯ: ಗುರಿಗಳು • ಚಟುವಟಿಕೆಗಳು • ಕಾರ್ಯವೈಖರಿ” ಎಂಬ ಶೀರ್ಷಿಕೆಯಡಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. “ಆರ್‌ಎಸ್‌ಎಸ್‌ನ ದೂರದೃಷ್ಟಿ ಮತ್ತು ಕಾರ್ಯಗಳನ್ನು ಅರ್ಥಮಾಡಿಕೊಳ್ಳಿ ಹಾಗೂ ಒಂದು ಬಲವಾದ, ಒಗ್ಗಟ್ಟಿನ ಮತ್ತು ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಸಂಸ್ಥೆಯು ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ತಿಳಿಯಿರಿ” ಎಂಬ ವಿಷಯದೊಂದಿಗೆ ನಿವಾಸಿಗಳಿಗೆ, ವಿಶೇಷವಾಗಿ ಯುವಕರು ಮತ್ತು ಮಕ್ಕಳಿಗೆ ಆಹ್ವಾನ ನೀಡಲಾಗುತ್ತಿದೆ ಎಂಬ ಪೋಸ್ಟ್ನ್ನು ಆರ್‌ಎಸ್‌ಎಸ್ ಹಂಚಿಕೊಂಡಿತ್ತು. ಯುವಜನರು ಹಾಗೂ ಮಕ್ಕಳನ್ನು ಗುರಿಯಾಗಿಸಿಕೊಂಡು ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮಗಳ ಕುರಿತು ನಿವಾಸಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಪ್ರಮುಖ ಪ್ರಶ್ನೆಗಳು ಎದ್ದಿವೆ ಎಂದು ಪ್ರಿಯಾಂಕ ಖರ್ಗೆ ಅವರು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ಗ್ರಾಹಕರ ಗಮನಕ್ಕೆ: ಬ್ಯಾಂಕ್ ಉದ್ಯೋಗಿಗಳ ಮುಷ್ಕರ ವಾಪಸ್
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
Interesting to see apartment communities opening their doors to organisations whose legal and regulatory status itself raises questions, especially when the outreach is aimed at influencing young minds.
The advertised session is:
“Introduction to RSS”
Goals • Activities •… pic.twitter.com/3z5BPmwaNt— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 27, 2026
ನಿವಾಸಿಗಳು ಶಾಂತಿಯುತವಾಗಿ ವಾಸಿಸಲು ಇರುವ ಅಪಾರ್ಟ್‌ಮೆಂಟ್ ಸಮುದಾಯಗಳನ್ನು ಸೈದ್ಧಾಂತಿಕ ಪ್ರಚಾರ, ಸಂಘಟನೆ ಹಾಗೂ ನಿರ್ದಿಷ್ಟ ಸಿದ್ಧಾಂತಗಳ ಬೋಧನೆಗಾಗಿ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಎಂದು ಖರ್ಗೆ ಎಕ್ಸ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಯಾವುದೇ ಸಂಸ್ಥೆಯು ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ಅವರ ಮಕ್ಕಳನ್ನು ತಲುಪಲು ಬಯಸಿದಾಗ, ಆ ಸಂಸ್ಥೆಯ ಕಾನೂನಾತ್ಮಕ ಅರ್ಹತೆ, ಹಣಕಾಸು ಮೂಲ, ಸಂಸ್ಥೆಯ ರಚನೆ ಮತ್ತು ಹೊಣೆಗಾರಿಕೆಯ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳುವುದು ಕನಿಷ್ಠ ಮಾನದಂಡವಲ್ಲವೇ? ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು ಇಂತಹ ಸಭೆ-ಸಮಾರಂಭಗಳಿಗೆ ಅನುಮತಿ ನೀಡುವ ಮುನ್ನ ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಹಾಗೂ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

