Breaking News

ಬಂಗಾರ, ಬೆಳ್ಳಿ ಕೊಳ್ಳುವವರಿಗೆ ಸಿಹಿ ಸುದ್ದಿ: ಸೋಮವಾರ ಚಿನ್ನದ ದರ ಭರ್ಜರಿ ಕುಸಿತ

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆ ಭಾರತೀಯ ಚಿನ್ನಾಭರಣ ಮಾರುಕಟ್ಟೆಯಲ್ಲಿ ಸೋಮವಾರ ಹಳದಿ ಲೋಹ ಹಾಗೂ ಬೆಳ್ಳಿ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ದರ ಇಳಿಕೆ ಸಮಾಧಾನ ತಂದಿದ್ದು, ಚಿನ್ನದ ಬೆಲೆ ಗ್ರಾಮ್‌ಗೆ ಬರೋಬ್ಬರಿ 230 ರೂಪಾಯಿಗಳಷ್ಟು ಕಡಿಮೆಯಾಗಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ವಿವರ:

24 ಕ್ಯಾರಟ್ (ಅಪರಂಜಿ ಚಿನ್ನ): ₹15,267 (1 ಗ್ರಾಮ್) | ₹1,52,670 (10 ಗ್ರಾಮ್)

22 ಕ್ಯಾರಟ್ (ಆಭರಣ ಚಿನ್ನ): ₹13,995 (1 ಗ್ರಾಮ್) | ₹1,39,950 (10 ಗ್ರಾಮ್)

18 ಕ್ಯಾರಟ್ ಚಿನ್ನ: ₹11,450 (1 ಗ್ರಾಮ್) | ₹1,14,500 (10 ಗ್ರಾಮ್)

(ಗಮನಿಸಿ: ಜಿಎಸ್‌ಟಿ (GST) ಹಾಗೂ ಮೇಕಿಂಗ್ ಚಾರ್ಜ್‌ಗಳನ್ನು (ತಯಾರಿಕಾ ವೆಚ್ಚ) ಹೊರತುಪಡಿಸಿ ಈ ಬೆಲೆಯನ್ನು ನೀಡಲಾಗಿದೆ. ಆಭರಣ ಮಳಿಗೆಗಳಲ್ಲಿ ಅಂತಿಮ ದರದಲ್ಲಿ ಕೊಂಚ ವ್ಯತ್ಯಾಸವಿರಬಹುದು.)

ಇದನ್ನೂ ಓದಿ: ಬ್ಯಾಂಕ್ ಗ್ರಾಹಕರ ಗಮನಕ್ಕೆ: ಬ್ಯಾಂಕ್ ಉದ್ಯೋಗಿಗಳ ಮುಷ್ಕರ ವಾಪಸ್

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಮ್‌ಗೆ):

ಬೆಂಗಳೂರು: ₹13,765

ಚೆನ್ನೈ: ₹13,765

ಮುಂಬೈ: ₹13,765

ಕೋಲ್ಕತಾ: ₹13,765

ಕೇರಳ: ₹13,765

ಭುವನೇಶ್ವರ: ₹13,765

ಅಹ್ಮದಾಬಾದ್: ₹13,770

ದೆಹಲಿ, ಜೈಪುರ, ಲಕ್ನೋ: ₹13,780

ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ದರದಲ್ಲಿಯೂ ಭಾರಿ ಕುಸಿತ ಕಂಡುಬಂದಿದ್ದು, ಸುದೀರ್ಘ ದಿನಗಳ ಬಳಿಕ ಗ್ರಾಮ್‌ಗೆ 13,000 ರೂಪಾಯಿಗಿಂತ ಕೆಳಮಟ್ಟಕ್ಕೆ ಇಳಿಕೆಯಾಗಿದೆ.

ಭಾರತದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ (ಸೆಪ್ಟೆಂಬರ್ 28):

ದೇಶದಲ್ಲಿ ಪ್ರಮುಖ ಕ್ಯಾರಟ್‌ಗಳ ಚಿನ್ನ ಹಾಗೂ ಬೆಳ್ಳಿ ದರಗಳು ಈ ಕೆಳಗಿನಂತಿವೆ:

24 ಕ್ಯಾರಟ್ ಅಪರಂಜಿ ಚಿನ್ನ (1 ಗ್ರಾಮ್): ₹15,017 (10 ಗ್ರಾಮ್‌ಗೆ ₹1,50,170)

22 ಕ್ಯಾರಟ್ ಆಭರಣ ಚಿನ್ನ (1 ಗ್ರಾಮ್): ₹13,765 (10 ಗ್ರಾಮ್‌ಗೆ ₹1,37,650)

18 ಕ್ಯಾರಟ್ ಚಿನ್ನ (1 ಗ್ರಾಮ್): ₹11,263

ಬೆಳ್ಳಿ ದರ (1 ಗ್ರಾಮ್): ₹240 (100 ಗ್ರಾಮ್‌ಗೆ ₹24,000)

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಗ್ರಾಮ್‌ಗೆ):

ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ, ಲಕ್ನೋ ಮತ್ತು ಪುಣೆಯಲ್ಲಿ 1 ಗ್ರಾಮ್ ಬೆಳ್ಳಿ ಬೆಲೆ ₹240 ಇದ್ದರೆ, ಚೆನ್ನೈ, ಕೇರಳ ಹಾಗೂ ಭುವನೇಶ್ವರದಲ್ಲಿ ₹245 ರಷ್ಟಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ