ಪಾಟ್ನಾ: ಮೊಮ್ಮಗಳ ಭವಿಷ್ಯದ ಕನಸುಗಳನ್ನು ನನಸು ಮಾಡಲು, ಆಕೆಯನ್ನು ಪರೀಕ್ಷೆಗೆಂದು ಬಿಹಾರದ ಪ್ರಸಿದ್ಧ ಬಾರೌನಿ ಜಂಕ್ಷನ್ಗೆ (Barauni Junction) ಕರೆತಂದ ವೃದ್ಧ ತಾತನೊಬ್ಬ ಕಳೆದ 6 ದಿನಗಳಿಂದ ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಯಾರೂ ದಿಕ್ಕಿಲ್ಲದೆ ಏಕಾಂಗಿಯಾಗಿ ಸಿಲುಕಿಕೊಂಡಿರುವ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.
ವಯೋಸಹಜ ಅಸಹಾಯಕತೆ ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಈ ಅಜ್ಜನ ಸ್ಥಿತಿ ಕಂಡು ಕಣ್ಣೀರು ತರಿಸುವಂತಿದ್ದು, ಸಾರ್ವಜನಿಕರ ತುರ್ತು ನೆರವಿನ ಅಗತ್ಯವಿದೆ.
ವಯಸ್ಸಿನ ಭುಜಬಲವಿಲ್ಲದಿದ್ದರೂ ಮೊಮ್ಮಗಳ ಮೇಲಿನ ಪ್ರೀತಿಯಿಂದ ಆಕೆಗೆ ಪರೀಕ್ಷೆ ಬರೆಯಿಸಲು ಸಾಥ್ ನೀಡಿ ಬಾರೌನಿ ಜಂಕ್ಷನ್ಗೆ ಆಗಮಿಸಿದ್ದ ಈ ಹಿರಿಯ ಜೀವ, ಕಳೆದ ಆರು ದಿನಗಳಿಂದ ಅನ್ನ- ನೀರಿಲ್ಲದೆ ಪ್ಲಾಟ್ಫಾರ್ಮ್ನಲ್ಲೇ ಕಾಯುತ್ತ ಕುಳಿತಿದ್ದಾರೆ.
Heartbreaking: Elderly Man Stranded for Days at Bihar Station
This fragile grandfather traveled to Barauni Junction, Bihar, supporting his granddaughter’s exam dreams
Shockingly he has been left waiting alone on the platform for six agonizing days
Distressed frail and falling ill he desperately needs our help
Please share this widely to help locate his family immediately
— Ramesh Speaks (@rameshofficial0) October 7, 2026
ದಿನಗಳು ಕಳೆದಂತೆ ವೃದ್ಧಜ್ಜ ತೀವ್ರ ಅಸ್ವಸ್ಥರಾಗಿದ್ದು, ಅವರ ಕುಟುಂಬದವರು ಎಲ್ಲಿದ್ದಾರೆ ಅಥವಾ ಮೊಮ್ಮಗಳು ಎಲ್ಲಿದ್ದಾಳೆ ಎಂಬ ಮಾಹಿತಿ ಸಿಗದೆ ದಾರಿ ಕಾಣದಂತಾಗಿದ್ದಾರೆ. ಅಜ್ಜನ ಕಣ್ಣೀರು ಹಾಗೂ ಕರುಣಾಜನಕ ಪರಿಸ್ಥಿತಿಯನ್ನು ಕಂಡ ಪ್ರಯಾಣಿಕರು ಹಾಗೂ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಈ ಮಾಹಿತಿಯನ್ನು ಹಂಚಿಕೊಂಡು, ಅವರ ಕುಟುಂಬವನ್ನು ಪತ್ತೆ ಹಚ್ಚಲು ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸುಳ್ಯದಲ್ಲಿ ಚರಂಡಿಗೆ ಬಿದ್ದ ಮಗುವನ್ನು ತಕ್ಷಣವೇ ಮೇಲಕ್ಕೆತ್ತಿ ಜೀವ ಉಳಿಸಿದ ಸ್ಥಳೀಯರು
ಸ್ಥಳೀಯರು ಮತ್ತು ರೈಲ್ವೆ ಪೊಲೀಸರು (GRP/RPF) ಇವರನ್ನು ಗುರುತಿಸಿ ಅಗತ್ಯ ವೈದ್ಯಕೀಯ ನೆರವು ನೀಡಲು ಮುಂದಾಗಿದ್ದು, ಈ ವೃದ್ಧರ ಕುಟುಂಬದವರನ್ನು ತಕ್ಷಣವೇ ಪತ್ತೆಹಚ್ಚಬೇಕಿದೆ. ಈ ಸುದ್ದಿಯನ್ನು ಮತ್ತು ಅವರ ಫೋಟೋ ಹಾಗೂ ವಿವರಗಳನ್ನು ಸಾಧ್ಯವಾದಷ್ಟು ಹೆಚ್ಚಾಗಿ ಶೇರ್ ಮಾಡುವ ಮೂಲಕ ಅವರ ಕುಟುಂಬಸ್ಥರಿಗೆ ತಲುಪಿಸಲು ಸಹಕರಿಸಿ.

