Breaking News

WPL MI vs UPW: ಮುಂಬೈ ಇಂಡಿಯನ್ಸ್‌ ವಿರುದ್ಧ ವಾರಿಯರ್ಸ್‌ಗೆ ಗೆಲುವು

Warriors beat Mumbai Indians by 22 runs

ನವಿ ಮುಂಬೈ: ಇಲ್ಲಿನ ಡಾ.ಡಿ.ವೈ.ಪಾಟೀಲ್‌ ಸ್ಪೋರ್ಟ್ಸ್‌ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್)‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ಯುಪಿ ವಾರಿಯರ್ಸ್‌ ತಂಡ 22 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್‌ ಸೋತು ಬ್ಯಾಟ್‌ ಮಾಡಿದ ವಾರಿಯರ್ಸ್‌, 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತು. ತಂಡದ‌ ನಾಯಕಿ ಮೆಗ್‌ ಲ್ಯಾನಿಂಗ್ ಅವರು 45 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಸಿಡಿಸಿ ಒಟ್ಟು 70 ರನ್‌ ಬಾರಿಸಿ ಔಟ್‌ ಆದರು. ಫೋಬೆ ಲಿಚ್‌ಫೀಲ್ಡ್‌ ಅವರು 37 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸ್‌ಗಳ ನೆರವಿನೊಂದಿಗೆ 61 ರನ್‌ ಬಾರಿಸಿದರು.

Advertisement

ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ಗೆ ಗ್ರೀನ್ ಸಿಗ್ನಲ್

ಹರ್ಲೀನ್‌ ಡಿಯೋಲ್‌ 25, ಕ್ಲೋಯ್‌ ಟ್ರಯಾನ್‌ 21 ರನ್‌ ಗಳಿಸಿದರೆ, ಕಿರಣ ನವಗಿರೆ, ದೀಪ್ತಿ ಶರ್ಮಾ ಹಾಗೂ ಶ್ವೇತಾ ಸೆಹ್ರಾವತ್ ಶೂನ್ಯಕ್ಕೆ ಔಟ್‌ ಆದರೆ,‌ ಸೋಫಿ ಎಕ್ಲೆಸ್ಟೋನ್‌ ಮತ್ತು ಆಶಾ ಸೋಭಾನ ತಲಾ ಒಂದು ರನ್‌ ಬಾರಿಸಿದರು. ಮುಂಬೈ ಇಂಡಿಯನ್ಸ್‌ ಪರ ಅಮೆಲಿಯಾ ಕೆರ್‌ 3 ವಿಕೆಟ್‌ ಕಬಳಿಸಿದರೆ, ನ್ಯಾಟ್‌ ಸ್ಕಿವರ್-ಬ್ರಂಟ್‌ 2 ವಿಕೆಟ್‌ ಕಿತ್ತರು. ಅಮನ್ಜೋತ್‌ ಕೌರ್‌, ಹೇಲಿ ಮ್ಯಾಥ್ಯೂಸ್‌, ನಿಕೋಲಾ ಕ್ಯಾರಿ ತಲಾ 1 ವಿಕೆಟ್‌ ಪಡೆದರು.

188 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌, 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 165 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ತಂಡದ ಪರ ಅಮೆಲಿಯಾ ಕೆರ್‌ 49 (ಅಜೇಯ), ಅಮನ್‌ಜೋತ್‌ ಕೌಟ್‌ 41 ರನ್‌ ಬಾರಿಸಿದರು.

ಇನ್ನುಳಿದಂತೆ, ಹೇಲಿ ಮ್ಯಾಥ್ಯೂಸ್‌ 13, ಸಜೀವನ್‌ ಸಜನಾ 10, ನ್ಯಾಟ್‌ ಸಿವರ್-ಬ್ರಂಟ್‌ 15, ಹರ್ಮನ್‌ಪ್ರೀತ್‌ ಕೌರ್‌ 18, ನಿಕೋಲಾ ಕ್ಯಾರಿ 6, ಗುಣಲನ್‌ ಕಮಲಿನಿ 9 ರನ್‌ ಬಾರಿಸಿದರು. ಮುಂಬೈ ಪರ ಶಿಖಾ ಪಾಂಡೆ 2 ವಿಕೆಟ್‌ ಪಡೆದರೆ, ಸೋಫಿ ಎಕ್ಲೆಸ್ಟೋನ್‌, ಕ್ರಾಂತಿ ಗೌಡ್‌, ಕ್ಲೋಯ್‌ ಟ್ರಯಾನ್‌ ಹಾಗೂ ದೀಪ್ತಿ ಶರ್ಮಾ ತಲಾ 1 ವಿಕೆಟ್‌ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು