Breaking News

ಫೋಶನ್ ಶಾಲೆಯ 103 ವಿದ್ಯಾರ್ಥಿಗಳಲ್ಲಿ ನೊರೊವೈರಸ್ ಪತ್ತೆ!

103 students infected with norovirus at Foshan school in China

ಫೋಶನ್: ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಫೋಶನ್‌ನಲ್ಲಿರುವ ಕ್ಸಿಂಘುಯಿ ಮಿಡಲ್ ಶಾಲೆಯ ಒಟ್ಟು 103 ವಿದ್ಯಾರ್ಥಿಗಳಲ್ಲಿ ನೊರೊವೈರಸ್ ಪತ್ತೆಯಾಗಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಗಂಭೀರ ಪ್ರಕರಣಗಳು ದಾಖಲಾಗಿಲ್ಲ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಶನಿವಾರ ವರದಿ ಮಾಡಿದ್ದಾರೆ.

ತೀವ್ರವಾದ ಜಠರದುರಿತಕ್ಕೆ ಕಾರಣವಾಗುವ ಅತ್ಯಂತ ಸಾಂಕ್ರಾಮಿಕ ವೈರಸ್ ನೊರೊವೈರಸ್ ಸಾಮಾನ್ಯವಾಗಿ ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗುತ್ತದೆ. ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಈ ರೋಗ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ನೊರೋ ವೈರಸ್‌ ಪತ್ತೆಯಾಗಿದೆ.

Advertisement

ಇದನ್ನೂ ಓದಿ:  ಹವಾಯಿಯ ಒಹು ದ್ವೀಪದಲ್ಲಿ ಜಿಕಾ ವೈರಸ್ ಪ್ರಕರಣ ಪತ್ತೆ

ಇದರ ಬೆನ್ನೆಲ್ಲೆ, ಶಾಲಾ ಆವರಣವನ್ನು ಸ್ಯಾನಿಟೈಸರ್‌ ಮಾಡಲಾಗಿದ್ದು, ಪ್ರಾಥಮಿಕ ಸಂಪರ್ಕಿತ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಸೋಂಕು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಫೋಶನ್‌ನಲ್ಲಿರುವ ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಜಾಗತಿಕವಾಗಿ, ನೊರೊವೈರಸ್ ಆಹಾರದಿಂದ ಹರಡುವ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ. ವಾರ್ಷಿಕವಾಗಿ ಅಂದಾಜು 685 ಮಿಲಿಯನ್ ಸೋಂಕುಗಳು ಕಂಡುಬರುತ್ತಿವೆ. ಈ ಪೈಕಿ 200 ಮಿಲಿಯನ್ ಪ್ರಕರಣಗಳು ಐದು ವರ್ಷದೊಳಗಿನ ಮಕ್ಕಳಲ್ಲಿ ಕಂಡುಬಂದಿವೆ.  ಸುಮಾರು 2 ಲಕ್ಷ ಮಂದಿ ಸಾವನ್ನಪ್ಪಿದ್ದು, ಈ ಪೈಕಿ 50 ಸಾವಿರ ಮಕ್ಕಳು ಸೇರಿದ್ದಾರೆ. 1968 ರಲ್ಲಿ ಓಹಿಯೋದ ನಾರ್ವಾಕ್‌ನಲ್ಲಿ ನೊರೊವೈರಸ್ ಮೊದಲು ಪತ್ತೆಯಾಗಿತ್ತು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು