ನವದೆಹಲಿ (ಅಕ್ಟೋಬರ್ 26, 2026): ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ’ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗೂ ವಿರೋಧಗಳು ಹೆಚ್ಚಾಗಿದೆ. ಬಿಜೆಪಿ ಅಕ್ರೋಶಕ್ಕೂ ಕಾರಣವಾಗಿದೆ. ಬಿಹಾರದ ಮೊದಲ ಮಾಜಿ ಮುಖ್ಯಮಂತ್ರಿ ಶ್ರೀ ಕೃಷ್ಣ ಸಿಂಗ್ ಅವರ 139ನೇ ಜಯಂತಿ ಉದ್ಘಾಟನಾ ಸಮಾರಂಭದಲ್ಲಿ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ್ದ ಹೇಳಿಕೆಗೆ ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಖಡಕ್ ಆಗಿ ಪ್ರತ್ರಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಈ ಶೈಲಿಯು ರಾಜಕೀಯ ಸೌಹಾರ್ದತೆಯನ್ನು ಕೆಡಿಸುತ್ತಿದ್ದು, ಅವರ ವೈಚಾರಿಕ ದಿವಾಳಿತನವನ್ನು ಎತ್ತಿ ತೋರಿಸುತ್ತಿದೆ ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ವೈಚಾರಿಕ ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ವಿರೋಧವನ್ನು ವೈಯಕ್ತಿಕ ನಿಂದನೆಗೆ ಇಳಿಸುವುದು ಹಾಗೂ ದೇಶದ ಪ್ರಧಾನಿಯವರ ಕುಟುಂಬವನ್ನು ಗುರಿಯಾಗಿಸಿ ಕೆಳಮಟ್ಟದ ಭಾಷೆ ಬಳಸುವುದು ಕಾಂಗ್ರೆಸ್ನ ತೀವ್ರ ನಿರಾಶೆಯನ್ನು ತೋರಿಸುತ್ತದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಅಪಮಾನ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಂಸದ ಕ್ಯಾ. ಬ್ರಿಜೇಶ್ ಚೌಟ ವಾಗ್ದಾಳಿ
“ಇದು ಕೇವಲ ಒಬ್ಬ ವ್ಯಕ್ತಿಗೆ ಅಥವಾ ಒಂದು ಕುಟುಂಬಕ್ಕೆ ಮಾಡಿದ ಅಪಮಾನವಲ್ಲ; ಬದಲಿಗೆ ಇದು ಭಾರತೀಯ ರಾಜಕೀಯ ವ್ಯವಸ್ಥೆಯ ಘನತೆಯ ಮೇಲೆಯೇ ನಡೆದ ದಾಳಿಯಾಗಿದೆ” ಎಂದು ರಾಜ್ನಾಥ್ ಸಿಂಗ್ ಕಿಡಿಕಾರಿದರು. ಕಾಂಗ್ರೆಸ್ ಪಕ್ಷವು ಕೇವಲ ರಾಜಕೀಯವಾಗಿ ಅಷ್ಟೇ ಅಲ್ಲ, ವೈಚಾರಿಕವಾಗಿಯೂ ಸಂಪೂರ್ಣವಾಗಿ ಪತನಗೊಂಡಿದೆ ಎಂಬುದಕ್ಕೆ ಈ ರೀತಿಯ ಹೇಳಿಕೆಗಳು ಸಾಕ್ಷಿ ಎಂದು ಅವರು ಚಾಟ ಬೀಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

