2026ರ ಎಂಎಲ್‌ಸಿ ಚುನಾವಣೆ ಫಲಿತಾಂಶ: ಕರ್ನಾಟಕದಲ್ಲಿ NDA ಕ್ಲೀನ್ ಸ್ವೀಪ್, ಬಿಹಾರದಲ್ಲಿ RJD ಬಿಗ್ ಶಾಕ್!; UPಯಲ್ಲಿ BJP-SP ನಡುವೆ ರೋಚಕ ಹಣಾಹಣಿ

ನವದೆಹಲಿ: ಉತ್ತರ ಪ್ರದೇಶ, ಬಿಹಾರ, ಕರ್ನಾಟಕ ಮತ್ತು ಮಹಾರಾಷ್ಟ್ರದ ಒಟ್ಟು 28 ಶಾಸನ ಪರಿಷತ್ (MLC) ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಹೊರಬಿದ್ದಿದ್ದು, ಪ್ರಮುಖ ರಾಜಕೀಯ ಪಕ್ಷಗಳಿಗೆ ಮಿಶ್ರ ಫಲಿತಾಂಶ ಲಭಿಸಿದೆ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ (NDA) ಮೈತ್ರಿಕೂಟ ನಾಲ್ಕೂ ಸ್ಥಾನಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿದ್ದರೆ, ಬಿಹಾರದಲ್ಲಿ 3 ದಶಕಗಳಿಂದ ಬಿಜೆಪಿ ವಶದಲ್ಲಿದ್ದ ಪಟ್ನಾ ಶಿಕ್ಷಕರ ಕ್ಷೇತ್ರವನ್ನು ಆರ್‌ಜೆಡಿ ವಶಪಡಿಸಿಕೊಂಡಿದೆ.

1. ಕರ್ನಾಟಕ MLC ರಿಸಲ್ಟ್: ಕಾಂಗ್ರೆಸ್‌ಗೆ ಮುಖಭಂಗ, NDA ಕ್ಲೀನ್ ಸ್ವೀಪ್!

ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ (2 ಪದವೀಧರ, 2 ಶಿಕ್ಷಕರ) ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಎಲ್ಲಾ 4 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.

ಗೆದ್ದ ಅಭ್ಯರ್ಥಿಗಳ ಪಟ್ಟಿ (Karnataka Winners):

  • ಬೆಂಗಳೂರು ಶಿಕ್ಷಕರ ಕ್ಷೇತ್ರ: ಎ.ಪಿ. ರಂಗನಾಥ್ (ಜೆಡಿಎಸ್) – (ಕಾಂಗ್ರೆಸ್‌ನ ಪುಟ್ಟಣ್ಣ ವಿರುದ್ಧ 908 ಮತಗಳ ಅಂತರದಿಂದ ಜಯ)

  • ಈಶಾನ್ಯ ಶಿಕ್ಷಕರ ಕ್ಷೇತ್ರ: ಶಶೀಲ್ ಜಿ. ನಮೋಶಿ (ಬಿಜೆಪಿ) – (ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ್ ವಿರುದ್ಧ 3,297 ಮತಗಳ ಅಂತರದಿಂದ ಜಯ)

  • ಪಶ್ಚಿಮ ಪದವೀಧರ ಕ್ಷೇತ್ರ: ಎಸ್.ವಿ. ಸಂಕನೂರ (ಬಿಜೆಪಿ) – ಜಯ

  • ಆಗ್ನೇಯ ಪದವೀಧರ ಕ್ಷೇತ್ರ: ಕೆ.ಎಂ. ಸುರೇಶ್ (ಬಿಜೆಪಿ) – ಜಯ

2. ಉತ್ತರ ಪ್ರದೇಶ MLC ರಿಸಲ್ಟ್: ವಾರಾಣಸಿಯಲ್ಲಿ ಎಸ್‌ಪಿಗೆ ಬಿಗ್ ಗೆಲುವು!

ಉತ್ತರ ಪ್ರದೇಶದ 11 ಶಾಸನ ಪರಿಷತ್ (5 ಪದವೀಧರ ಹಾಗೂ 6 ಶಿಕ್ಷಕರ) ಕ್ಷೇತ್ರಗಳ ಪೈಕಿ ಮೀರತ್ ಮತ್ತು ಬರೇಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿ ಶಿಕ್ಷಕರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ (SP) ಲಾಲ್‌ ಬಿಹಾರಿ ಯಾದವ್ ಐತಿಹಾಸಿಕ ಜಯಗಳಿಸಿದ್ದಾರೆ.

ಗೆದ್ದ ಅಭ್ಯರ್ಥಿಗಳ ಪಟ್ಟಿ (UP Winners):

  • ಮೀರತ್-ಸಹಾರನ್‌ಪುರ ಪದವೀಧರ ಕ್ಷೇತ್ರ: ದಿನೇಶ್ ಗೋಯಲ್ (ಬಿಜೆಪಿ)

  • ಮೀರತ್ ಶಿಕ್ಷಕರ ಕ್ಷೇತ್ರ: ಶ್ರೀಚಂದ್ ಶರ್ಮಾ (ಬಿಜೆಪಿ)

  • ಬರೇಲಿ-ಮೊರಾದಾಬಾದ್ ಶಿಕ್ಷಕರ ಕ್ಷೇತ್ರ: ಹರಿ ಸಿಂಗ್ ಧಿಲ್ಲೋನ್ (ಬಿಜೆಪಿ)

  • ಲಕ್ನೋ ಶಿಕ್ಷಕರ ಕ್ಷೇತ್ರ: ಉಮೇಶ್ ದ್ವಿವೇದಿ (ಬಿಜೆಪಿ)

  • ವಾರಾಣಸಿ ಶಿಕ್ಷಕರ ಕ್ಷೇತ್ರ: ಲಾಲ್ ಬಿಹಾರಿ ಯಾದವ್ (ಎಸ್‌ಪಿ)

  • ಆಗ್ರಾ ಶಿಕ್ಷಕರ ಕ್ಷೇತ್ರ: ಆಕಾಶ್ ಅಗರ್ವಾಲ್ (ಎಸ್‌ಪಿ)

3. ಬಿಹಾರ MLC ರಿಸಲ್ಟ್: 30 ವರ್ಷದ ಬಿಜೆಪಿ ಕೋಟೆ ಧರಾಶಾಹಿ!

ಬಿಹಾರದ 8 ಶಾಸನ ಪರಿಷತ್ ಕ್ಷೇತ್ರಗಳಲ್ಲಿ  ಭಾರಿ  ಪೈಪೋಟಿ ನಡೆದಿದೆ. ಕಳೆದ 30 ವರ್ಷಗಳಿಂದ ಪಟ್ನಾ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿಯ ನವಲ್ ಕಿಶೋರ್ ಯಾದವ್ ಅವರನ್ನು ಆರ್‌ಜೆಡಿಯ (RJD) ಡಾ. ಸಂಜೀವ್ ಸಿಂಗ್ ಸೋಲಿಸಿದ್ದಾರೆ.

ಗೆದ್ದ ಅಭ್ಯರ್ಥಿಗಳ ಪಟ್ಟಿ 

  • ಪಟ್ನಾ ಶಿಕ್ಷಕರ ಕ್ಷೇತ್ರ: ಡಾ. ಸಂಜೀವ್ ಸಿಂಗ್ (ಆರ್‌ಜೆಡಿ)

  • ದರ್ಭಾಂಗ ಶಿಕ್ಷಕರ ಕ್ಷೇತ್ರ: ಡಾ. ಸುರೇಶ್ ರೈ (ಜನ್ ಸುರಾಜ್)

  • ಸಾರಣ್ ಶಿಕ್ಷಕರ ಕ್ಷೇತ್ರ: ರಾಹುಲ್ ರಾಜ್ (ಪಕ್ಷೇತರ – ಬಿಜೆಪಿ ಬಂಡಾಯ ಅಭ್ಯರ್ಥಿ)

  • ತಿರ್ಹುತ್ ಶಿಕ್ಷಕರ ಕ್ಷೇತ್ರ: ನರೇಂದ್ರ ಪ್ರಸಾದ್ ಸಿಂಗ್ (ಬಿಜೆಪಿ)

ಇದನ್ನೂ ಓದಿ: ಬ್ಯಾಲೆಟ್ ಪೇಪರ್​​​ನಲ್ಲೇ ಚುನಾವಣೆಯನ್ನು ನಡೆಸಿ ಎಂದು ಹಠ ಹಿಡಿದ ಕಾಂಗ್ರೆಸ್​​ಗೆ ಹೀನಾಯ ಸೋಲು: ಸೋಲಿಗೆ ಮೂರು ಕಾರಣ

4. ಮಹಾರಾಷ್ಟ್ರ MLC ರಿಸಲ್ಟ್: ಮತ ಎಣಿಕೆ ಪ್ರಗತಿಯಲ್ಲಿ!

ಮಹಾರಾಷ್ಟ್ರದ 5 ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದ್ದು, ಮಹಾಯುತಿ ಮೈತ್ರಿಕೂಟ 3 ಕ್ಷೇತ್ರಗಳಲ್ಲಿ ಹಾಗೂ ಎಂವಿಎ (MVA) 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ