ಮಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿರುವ ‘ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ’ದ (Soujanya Case) ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಲ್ಲಿ (SIT) ದಿಢೀರ್ ಪ್ರಮುಖ ಬದಲಾವಣೆಗಳಾಗಿವೆ. ಎಸ್ಐಟಿ ತಂಡದ ಮುಖ್ಯಸ್ಥರಾಗಿದ್ದ ಐಜಿಪಿ ಎನ್. ಶಶಿಕುಮಾರ್ (IGP N. Shashi Kumar) ಅವರನ್ನು ಆ ಹುದ್ದೆಯಿಂದ ರಿಲೀವ್ ಮಾಡಲಾಗಿದ್ದು, ನೂತನ ತನಿಖಾ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್ (Chetan Singh Rathore) ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ.
ಇಂದಿನಿಂದಲೇ (ಅಕ್ಟೋಬರ್ 30) ಚೇತನ್ ಸಿಂಗ್ ರಾಥೋಡ್ ಅವರು ಎಸ್ಐಟಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡು ಪ್ರಕರಣದ ತನಿಖೆಯನ್ನು ಮುಂದುವರೆಸಲಿದ್ದಾರೆ.
ಇದನ್ನೂ ಓದಿ: ಕುಸುಮಾವತಿ ನಿಜವಾಗಿಯೂ ಸೌಜನ್ಯ ಅವರ ಹೆತ್ತ ತಾಯಿಯೇ: ಎಸ್ಐಟಿಗೆ ದೂರು
SIT ತಂಡಕ್ಕೆ ಹೊಸ ಆಫೀಸರ್ಗಳ ಎಂಟ್ರಿ:
ಕೇವಲ ಮುಖ್ಯಸ್ಥರು ಮಾತ್ರವಲ್ಲದೆ ತನಿಖಾ ತಂಡದ ಇತರ ಅಧಿಕಾರಿಗಳ ಮಟ್ಟದಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ: ಐಜಿಪಿ ಎನ್. ಶಶಿಕುಮಾರ್ ಅವರ ಬದಲಿಗೆ ಇನ್ಮುಂದೆ ಐಪಿಎಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್ ತನಿಖೆಯ ನಾಯಕತ್ವ ವಹಿಸಲಿದ್ದಾರೆ. ಎಎಸ್ಪಿ ವೆಂಕಟೇಶ್ ಪ್ರಸನ್ನ ಅವರ ಬದಲಿಗೆ ಎಸಿಪಿ ಶ್ರೀನಿಧಿ (ACP Srinidhi) ಅವರನ್ನು ಹೊಸದಾಗಿ ಎಸ್ಐಟಿ ತನಿಖಾ ತಂಡಕ್ಕೆ ನೇಮಕಗೊಳಿಸಲಾಗಿದೆ. ಸೌಜನ್ಯ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪುತ್ತಿರುವ ಬೆನ್ನಲ್ಲೇ ತನಿಖಾ ತಂಡದ ಉನ್ನತಾಧಿಕಾರಿಗಳನ್ನು ಬದಲಾಯಿಸಿರುವುದು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

