71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 71 ಸಾಧಕರಿಗೆ ಒಲಿದ ಅತ್ಯುನ್ನತ ಪುರಸ್ಕಾರ

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಸಂಭ್ರಮದ ಬೆನ್ನಲ್ಲೇ ರಾಜ್ಯ ಸರ್ಕಾರವು 71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಅಧಿಕೃತವಾಗಿ ಘೋಷಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 71 ಮಂದಿ ಸಾಧಕರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ, ಯಾವುದೇ ಅರ್ಜಿಗಳನ್ನು ಸ್ವೀಕರಿಸದೆ, ಕೇವಲ ಅರ್ಹತೆ ಮತ್ತು ಸಾಧನೆಯ ಆಧಾರದ ಮೇಲೆ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿರುವುದು ಈ ಬಾರಿಯ ಪ್ರಮುಖ ವಿಶೇಷತೆಯಾಗಿದೆ.

ಆಯ್ಕೆಯಾದ 71 ಸಾಧಕರ ಪಟ್ಟಿಯಲ್ಲಿ 12 ಮಂದಿ ಮಹಿಳಾ ಸಾಧಕರು, ಕರಾವಳಿ-ಮಲೆನಾಡಿನ ಪ್ರಮುಖರು ಹಾಗೂ ಹೊರನಾಡು/ಹೊರದೇಶದ ಗಣ್ಯರು ಸೇರಿದ್ದಾರೆ.

71ನೇ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ (ಕ್ಷೇತ್ರವಾರ):

ಜಾನಪದ:

  • ದಾವಲಸಾಬ ಅತ್ತಾರ (ಕೊಪ್ಪಳ)

  • ಗೌರಮ್ಮ (ಚಾಮರಾಜನಗರ)

  • ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ)

  • ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ)

  • ಈರಣ್ಣ ರುದ್ರಕ್ಷಿ (ರಾಯಚೂರು)

  • ಶಿವಲಿಂಗಪ್ಪ ಎಂ. (ಕೊಪ್ಪಳ)

  • ಸುರೇಶ್ ರಾಮಚಂದ್ರ ಜೋಶಿ (ವಿಜಯಪುರ)

ಸಂಗೀತ ಹಾಗೂ ನೃತ್ಯ:

  • ಸಂಗೀತ: ಡಾ. ಸಿ.ಎ. ಶ್ರೀಧರ್ (ಮೈಸೂರು), ಡಾ. ಎ. ನಾರಾಯಣ ಸ್ವಾಮಿ (ಹಾಸನ), ವಿ. ಮುರಳಿ (ಬೆಂಗಳೂರು ಗ್ರಾಮಾಂತರ)

  • ನೃತ್ಯ: ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ)

ಚಲನಚಿತ್ರ / ಕಿರುತೆರೆ, ಯಕ್ಷಗಾನ ಹಾಗೂ ಬಯಲಾಟ:

  • ಚಲನಚಿತ್ರ / ಕಿರುತೆರೆ: ಕೆ. ವೆಂಕಟರಮಣ (ಬಾಬುಜಿ – ಧಾರವಾಡ), ಅಶೋಕ್ (ಬೆಂಗಳೂರು ಗ್ರಾಮಾಂತರ), ಕೆ.ಎಸ್. ರವೀಂದ್ರನಾಥ್ (ಬೆಂಗಳೂರು ನಗರ)

  • ಯಕ್ಷಗಾನ: ಗೋಪಾಲ ಗಾಣಿಗ (ಉಡುಪಿ)

  • ಬಯಲಾಟ: ಹುಲಿಗಮ್ಮ (ಬಳ್ಳಾರಿ)

ರಂಗಭೂಮಿ:

  • ಡಿ. ಕಂಪಣ್ಣ (ಬೆಂಗಳೂರು ಗ್ರಾಮಾಂತರ), ಕೆ. ಜಯಲಕ್ಷ್ಮೀ ಪಾಟೀಲ್ (ಧಾರವಾಡ), ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ), ಕೆ.ಆರ್. ಸುಮತಿ (ಮೈಸೂರು), ಹೆಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ), ಯೊನ್ನ ನಾಯಕ (ಮೈಸೂರು)

ಶಿಲ್ಪಕಲೆ, ಚಿತ್ರಕಲೆ ಹಾಗೂ ಕರಕುಶಲ:

  • ಶಿಲ್ಪಕಲೆ: ಜಿ.ಬಿ. ಹಂಸಾನಂದ ಆಚಾರ್ಯ (ವಿಜಯನಗರ), ರಾಮಪ್ಪ ಪರಶುರಾಮ ಗಾಡಿವಡ್ಡರ್ (ಬೆಳಗಾವಿ)

  • ಚಿತ್ರಕಲೆ: ಸಿ.ಬಿ. ಸೋಮಶೆಟ್ಟಿ (ಬೀದರ್)

  • ಕರಕುಶಲ: ಶಾಂತಾಬಾಯಿ (ಬೀದರ್)

ಸಾಹಿತ್ಯ ಹಾಗೂ ಮಾಧ್ಯಮ:

  • ಸಾಹಿತ್ಯ: ಡಾ. ಇಂದಿರಾ ಹೆಗಡೆ (ದಕ್ಷಿಣ ಕನ್ನಡ), ವೀರಹನುಮಾನ್ (ರಾಯಚೂರು), ನಾರಾಯಣಘಟ್ಟೆ / ‘ನಾಹೋಗ’ (ತುಮಕೂರು), ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು), ಡಾ. ಕರಿಗೌಡ ಬೀಚನಹಳ್ಳಿ (ತುಮಕೂರು), ಡಾ. ಸಿದ್ಧರಾಮ ಹೊನ್ನೂಲ್ (ಯಾದಗಿರಿ)

  • ಮಾಧ್ಯಮ: ಡಿ. ಉಮಾವತಿ (ಚಿತ್ರದುರ್ಗ), ಎಂ.ವಿ. ಸುಶೀಲ (ಬೆಂಗಳೂರು ನಗರ)

  • ಮಾಧ್ಯಮ / ಛಾಯಾಚಿತ್ರ: ವಿಶ್ವನಾಥ್ ಸುವರ್ಣ (ದಕ್ಷಿಣ ಕನ್ನಡ)

ಸಮಾಜಸೇವೆ:

  • ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಸ್ವಾಮಿಗಳು (ಗದಗ)

  • ಕಾಗೋಡು ತಿಮ್ಮಪ್ಪ (ಹಿರಿಯ ರಾಜಕಾರಣಿ – ಶಿವಮೊಗ್ಗ)

  • ಬಸವರಾಜು (ಮಂಡ್ಯ)

  • ಡಾ. ಎಸ್.ಎಂ. ಎಲಿ (ದಾವಣಗೆರೆ)

  • ಡಾ. ಜಿ.ಎಸ್. ಚಂದ್ರಶೇಖರ್ – ಆದರ್ಶ ಚಾರಿಟಬಲ್ ಟ್ರಸ್ಟ್ (ಉತ್ತರ ಕನ್ನಡ)

  • ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ)

  • ಕೃಷ್ಣೇಗೌಡ ಬಿನ್ ವೆಂಕಟರಾಯಪ್ಪ (ಚಿಕ್ಕಬಳ್ಳಾಪುರ)

  • ಎ.ಸಿ. ಭಂಡಾರಿ – ಅಖಿಲ ಭಾರತ ತುಳು ಒಕ್ಕೂಟ (ದಕ್ಷಿಣ ಕನ್ನಡ)

  • ಗುರುಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ)

ಶಿಕ್ಷಣ, ನ್ಯಾಯಾಂಗ, ಆಡಳಿತ ಹಾಗೂ ಇಂಜಿನಿಯರಿಂಗ್:

  • ಶಿಕ್ಷಣ: ಡಾ. ಫಾ|| ಜೋಸೆಫ್. ಸಿ. ಸಿ (ಉಪಕುಲಪತಿಗಳು, ಕ್ರೈಸ್ಟ್ ವಿವಿ – ಬೆಂಗಳೂರು), ಶಾಂತಪ್ಪ ಪರಿ ದಶವಂತ (ವಿಜಯಪುರ), ಸಂಗೀತಾ ಎನ್. ಕಟ್ಟಿಮನಿ (ಕಲಬುರಗಿ), ಪ್ರೊ. ಎನ್.ಎಸ್. ರಂಗರಾಜು (ಮೈಸೂರು)

  • ನ್ಯಾಯಾಂಗ: ಬಿ.ವಿ. ಆಚಾರ್ಯ (ಹಿರಿಯ ನ್ಯಾಯವಾದಿಗಳು – ಉಡುಪಿ)

  • ಆಡಳಿತ: ತೆರೇಸಾ ಭಟ್ಟಾಚಾರ್ಯ (ಬೆಂಗಳೂರು), ಡಾ. ಕೆ.ಎಸ್. ಸೋಮಶೇಖರ್ (ನವದೆಹಲಿ)

  • ಇಂಜಿನಿಯರಿಂಗ್: ಡಾ. ಕೆ.ಎನ್. ವೆಂಕಟ್ ಕೃಷ್ಣಾರಾವ್ (ಚಿಕ್ಕಬಳ್ಳಾಪುರ)

ವೈದ್ಯಕೀಯ, ವಿಜ್ಞಾನ/ತಂತ್ರಜ್ಞಾನ, ಕೃಷಿ ಹಾಗೂ ಪರಿಸರ:

  • ವೈದ್ಯಕೀಯ: ಡಾ. ವಿಜಯೇಂದ್ರ ಹೊನ್ನೂರ್‌ಪ್ಪ (ಬೆಂಗಳೂರು), ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ (ಬೆಳಗಾವಿ)

  • ವಿಜ್ಞಾನ / ತಂತ್ರಜ್ಞಾನ: ಪ್ರೊ. ರಾಜಾಸಾಬ್ ಎ.ಹೆಚ್. (ಕಲಬುರಗಿ), ಡಾ. ರಾಜಶೇಖರ ಮೂರ್ತಿ (ಕೆನಡಾ)

  • ಕೃಷಿ: ಹೆಚ್. ಕೆ. ಶ್ರೀಕಂಠು (ಬೆಂಗಳೂರು ದಕ್ಷಿಣ), ಬಿ.ಎ. ಚನ್ನಪ್ಪಗೌಡ (ಬೆಂಗಳೂರು)

  • ಪರಿಸರ: ಡಾ. ಸ್ವಾಮಿ ಆನಂದ್ ಆರ್. (ಮೈಸೂರು)

ಸಂಕೀರ್ಣ ಹಾಗೂ ಹೊರನಾಡು/ಹೊರದೇಶ:

  • ಸಂಕೀರ್ಣ: ರುಕ್ಮಿಣಿ ಬಾಯಿ ನಾಗಪ್ಪ ವಾಷರ್ (ಬಾಗಲಕೋಟೆ), ಡಾ. ಡಿ.ಎಸ್. ಚೌಗಲೆ (ಬೆಳಗಾವಿ), ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ (ಬೆಂಗಳೂರು), ರವಿ ಪ್ರವೀಣ್ ನೊರೊನ್ಹೋ (ಚಿಕ್ಕಮಗಳೂರು), ಎಂ.ಆರ್. ಜೈಶಂಕರ್ (ಕೊಡಗು), ಪ್ರಸಾದ್ ಬಿಡಪ್ಪ (ಹಾವೇರಿ), ವಾಸಪ್ಪ ಯಲ್ಲಪ್ಪ ಕುಸಗೂರ (ಬೆಂಗಳೂರು ದಕ್ಷಿಣ), ಬಿ.ಪಿ. ಆರಾಧ್ಯ – ವಾಸ್ತುಶಾಸ್ತ್ರ (ಬೆಂಗಳೂರು ದಕ್ಷಿಣ)

  • ಹೊರನಾಡು / ಹೊರದೇಶ: ರಮೇಶ್ ಆರ್. ಗೌಡ (ಮಾಜಿ ಅಧ್ಯಕ್ಷರು, ‘ಅಕ್ಕ’ ಸಂಸ್ಥೆ – ಅಮೆರಿಕ)

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ