ಬೆಂಗಳೂರು: ರಾಜಧಾನಿ ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶವಾದ ಇಂದಿರಾನಗರದಲ್ಲಿ ಸಾರ್ವಜನಿಕರು ಬೆಚ್ಚಿಬೀಳುವಂತಹ ಭೀಕರ ಘಟನೆಯೊಂದು ನಡೆದಿದೆ. ಬಂಗಾರದ ಸರ ದೋಚುವ ಯತ್ನದಲ್ಲಿದ್ದ ದುಷ್ಕರ್ಮಿಯೊಬ್ಬ, ಹಗಲು ಹೊತ್ತಿನಲ್ಲೇ ನಡುರಸ್ತೆಯಲ್ಲಿ ಮಹಿಳೆಯೊಬ್ಬರ ಕೊರಳಿಗೆ ಚಾಕು ಇಟ್ಟು ಒತ್ತೆಯಾಳಾಗಿ (Hostage) ಇರಿಸಿಕೊಂಡ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ 100 ಫೀಟ್ ರಸ್ತೆಯಲ್ಲಿ (100 Feet Road) ಈ ಘಟನೆ ನಡೆದಿದ್ದು, ಸದ್ಯ ಸಂತ್ರಸ್ತ ಮಹಿಳೆ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.
ಮಹಿಳೆಯ ಕೊರಳಿಗೆ ಚಾಕು ಹಿಡಿದು ದರೋಡೆಗೆ ಯತ್ನಿಸಿದ ಆರೋಪಿಯನ್ನು 40 ವರ್ಷದ ಪ್ರಭುರಾಜ್ ಎಂದು ಗುರುತಿಸಲಾಗಿದೆ. ಬಿಜಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಆರೋಪಿ, ಏಕಾಏಕಿ ಆಕೆಯ ಕೊರಳಿಗೆ ಚಾಕು ಇಟ್ಟು ಸರ ಬಿಚ್ಚಿಕೊಡುವಂತೆ ಬೆದರಿಸಿದ್ದಾನೆ. ಸರ ನೀಡದಿದ್ದರೆ ತಕ್ಷಣವೇ ಇರಿದು ಕೊಲೆ ಮಾಡುವುದಾಗಿ ರಸ್ತೆಯಲ್ಲೇ ಬೆದರಿಕೆ ಹಾಕಿದ್ದಾನೆ. ದಿನಬೆಳಗಾಗುವುದರೊಳಗೆ ನಡೆದ ಈ ಭೀಕರ ದೃಶ್ಯ ಕಂಡು ಹೌಹಾರಿದ ಸಾರ್ವಜನಿಕರು ಹಾಗೂ ಸ್ಥಳೀಯ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ್ ಎಐ ಅಶ್ಲೀಲ ವಿಡಿಯೋ ಕೇಸ್: ಮೂವರು ಕಿಡಿಗೇಡಿಗಳನ್ನು ಬಂಧಿಸಿದ ಸೈಬರ್ ಕ್ರೈಂ ಪೊಲೀಸರು
ಇಲ್ಲಿದೆ ನೋಡಿ ವಿಡಿಯೋ:
#Bengaluru
A woman was held hostage at knifepoint during an attempted gold chain snatching in Indiranagar, Bengaluru. 😳
The accused, identified as 40-year-old Prabhuraj, allegedly threatened to stab her if she did not hand over her chain.
The incident took place in broad daylight on the busy 100 Feet Road within the limits of Indiranagar police station.
The women escaped safely. 🙏🏻
— Mahua Moitra Fans (@MahuaMoitraFans) November 3, 2026
ಆರೋಪಿಯ ಬೆದರಿಕೆಯಿಂದ ಮಹಿಳೆ ತೀವ್ರ ಆತಂಕಕ್ಕೊಳಗಾಗಿದ್ದರೂ, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಸಮಯಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಸುರಕ್ಷಿತವಾಗಿ ಪಾರಾಗಿದ್ದಾರೆ ಘಟನೆ ಸಂಬಂಧ ಇಂದಿರಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪ್ರಭುರಾಜ್ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಸಿಲಿಕಾನ್ ಸಿಟಿಯ ಜನನಿಬಿಡ ರಸ್ತೆಯಲ್ಲೇ ನಡೆದ ಈ ಸರಗಳ್ಳತನ ಹಾಗೂ ಒತ್ತೆಯಾಳು ಯತ್ನದ ಘಟನೆ ನಗರದ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

