ಮೆಲ್ಬೋರ್ನ್ : ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಹಾಗೂ ಜಾಗತಿಕ ಕ್ರಿಕೆಟ್ನ ಅತ್ಯಂತ ಅಪಾಯಕಾರಿ ಬ್ಯಾಟರ್ಗಳಲ್ಲಿ ಒಬ್ಬರಾದ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ತಮ್ಮ 14 ವರ್ಷಗಳ ಭವ್ಯ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ.
ತಮ್ಮ ವಿಶಿಷ್ಟ ಬ್ಯಾಟಿಂಗ್ ಶೈಲಿ, ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ತೂರುವ ಸ್ಫೋಟಕ ಆಟ ಹಾಗೂ ಅಸಾಧಾರಣ ಫೀಲ್ಡಿಂಗ್ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ “ಮ್ಯಾಡ್ ಮ್ಯಾಕ್ಸ್” (Mad Max) ಎಂದೇ ಖ್ಯಾತರಾಗಿದ್ದ ಮ್ಯಾಕ್ಸ್ವೆಲ್, ಎಲ್ಲಾ ಸ್ವರೂಪದ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಪ್ರಕಟಿಸುವ ಮೂಲಕ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ಆಘಾತ ನೀಡಿದ್ದಾರೆ.
14 ವರ್ಷಗಳ ಸ್ಫೋಟಕ ಆಟ, ವಿಶ್ವಕಪ್ಗಳ ಸಾರಥಿ:
2012ರಲ್ಲಿ ಆಸ್ಟ್ರೇಲಿಯಾ ಪರ ಅಂತರರಾಷ್ಟ್ರೀಯ ಪಾದಾರ್ಪಣೆ ಮಾಡಿದ್ದ ಮ್ಯಾಕ್ಸ್ವೆಲ್, ಕಳೆದ 14 ವರ್ಷಗಳಲ್ಲಿ ಆಸೀಸ್ ಪಡೆಯ ಪ್ರಮುಖ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದರು.
2015 ಮತ್ತು 2023ರ ಏಕದಿನ ವಿಶ್ವಕಪ್ (ODI World Cup) ಹಾಗೂ 2021ರ ಟಿ20 ವಿಶ್ವಕಪ್ (T20 World Cup) ಗೆಲುವಿನಲ್ಲಿ ಆಸ್ಟ್ರೇಲಿಯಾ ತಂಡದ ಬೆನ್ನೆಲುಬಾಗಿ ನಿಂತಿದ್ದರು.
2023ರ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಕಾಲಿನ ತೀವ್ರ ಸೆಳೆತದ ನಡುವೆಯೂ ಅಜೇಯ 201 ರನ್ ಬಾರಿಸಿ ಆಸ್ಟ್ರೇಲಿಯಾಗೆ ತಂದುಕೊಟ್ಟ ಪವಾಡದ ಗೆಲುವು ಕ್ರಿಕೆಟ್ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ಗೆ ಹೊಸ ನಾಯಕಿ!: ಹರ್ಮನ್ಪ್ರೀತ್ ಕೌರ್ ರಾಜೀನಾಮೆ, ಸ್ಮೃತಿ ಮಂಧನ ಕ್ಯಾಪ್ಟನ್
ಅಭಿಮಾನಿಗಳಿಗೆ ಆಘಾತ ನೀಡಿದ ನಿವೃತ್ತಿ ನಿರ್ಧಾರ:
ತಮ್ಮ ವಿದಾಯದ ಕುರಿತು ಮಾತನಾಡಿದ ಮ್ಯಾಕ್ಸ್ವೆಲ್, “ಆಸ್ಟ್ರೇಲಿಯಾ ಕ್ರಿಕೆಟ್ ಜೆರ್ಸಿ ಧರಿಸಿ ಆಡಿದ್ದು ನನ್ನ ಜೀವಮಾನದ ದೊಡ್ಡ ಹೆಮ್ಮೆ. ಈ 14 ವರ್ಷಗಳ ಪಯಣ ಅತ್ಯಂತ ರೋಮಾಂಚನಕಾರಿಯಾಗಿತ್ತು. ನನಗೆ ಬೆಂಬಲ ನೀಡಿದ ಕುಟುಂಬ, ಸಹ ಆಟಗಾರರು ಹಾಗೂ ಪ್ರಪಂಚದಾದ್ಯಂತ ಇರುವ ಅಭಿಮಾನಿಗಳಿಗೆ ಧನ್ಯವಾದಗಳು,” ಎಂದು ಭಾವುಕರಾಗಿ ತಿಳಿಸಿದ್ದಾರೆ.
ಮ್ಯಾಕ್ಸ್ವೆಲ್ ವಿದಾಯದೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ನ ಒಂದು ಸುವರ್ಣ ಶಕಾಂತ್ಯವಾಗಿದ್ದು, ಜಾಗತಿಕ ಕ್ರಿಕೆಟ್ ಗಣ್ಯರು ಹಾಗೂ ಅಭಿಮಾನಿಗಳು ಈ ದಿಗ್ಗಜ ಆಲ್ರೌಂಡರ್ಗೆ ಶುಭಹಾರೈಸುತ್ತಿದ್ದಾರೆ. ಇನ್ನು ಇವರು ತಮಿಳುನಾಡಿನ ವಿನಿ ರಾಮನ್ ಅವರನ್ನು ವಿವಾಹವಾಗಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

