ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಮತ್ತು ಬಾಹ್ಯ ರಾಜಕೀಯ ಕಾವು ಏರುತ್ತಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದ ಕಾಂಪೌಂಡ್ ಗೋಡೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವ್ಯಂಗ್ಯಾತ್ಮಕ ಪೋಸ್ಟರ್ಗಳನ್ನು ಅಂಟಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಿವಾಸದ ಪ್ರಮುಖ ಕಾಂಪೌಂಡ್ಗೆ ಅಂಟಿಸಲಾಗಿದ್ದ ಪೋಸ್ಟರ್ಗಳು ಸಾರ್ವಜನಿಕರ ಹಾಗೂ ಮಾಧ್ಯಮಗಳ ಗಮನ ಸೆಳೆಯುತ್ತಿದ್ದಂತೆಯೇ, ಯಡಿಯೂರಪ್ಪ ಅವರ ಭದ್ರತಾ ಸಿಬ್ಬಂದಿಗಳು ತಕ್ಷಣವೇ ಜಾಗೃತರಾಗಿ ಪೋಸ್ಟರ್ಗಳನ್ನು ಹರಿದು ತೆರವುಗೊಳಿಸಿದ್ದಾರೆ.
ಕಾಂಪೌಂಡ್ಗೆ ಅಂಟಿಸಲಾಗಿದ್ದ ಪೋಸ್ಟರ್ಗಳಲ್ಲಿ “ಹೇಡಿ ವಿಜಯೇಂದ್ರ, RTGS ಕೇಡಿ” ಎಂದು ಕಟುವಾಗಿ ಬರೆಯಲಾಗಿತ್ತು. ಎರಡು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿದ್ದ ಭಾರಿ ವಾಗ್ದಾಳಿ ಮತ್ತು ಹೇಳಿಕೆಗಳ ಹಿನ್ನೆಲೆಯಲ್ಲಿ ಈ ಪೋಸ್ಟರ್ಗಳನ್ನು ಅಂಟಿಸಲಾಗಿದೆ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಡೀಸೆಲ್ ಹಾಕಿಸಲೂ ದುಡ್ಡಿರಲಿಲ್ಲ, ಆದ್ರೂ ದುಡ್ಡು ಕೊಟ್ಟಿದ್ದೇನೆ: ಮುಂದಿನ 2 ವರ್ಷ ಹೊಸ ಕೆಲಸ ತೆಗೆದುಕೊಳ್ಳಬೇಡಿ
ಮುಂಜಾನೆ ವೇಳೆಗೆ ಈ ಪೋಸ್ಟರ್ಗಳು ಪ್ರತ್ಯಕ್ಷವಾಗಿದ್ದು, ಕೃತ್ಯ ಎಸಗಿದ ಕಿಡಿಗೇಡಿಗಳು ಯಾರು ಎಂಬ ಬಗ್ಗೆ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸುವ ಸಾಧ್ಯತೆಯಿದೆ. ಮಾಜಿ ಸಿಎಂ ಹಾಗೂ ಪ್ರಭಾವಿ ನಾಯಕರ ನಿವಾಸದ ಕಾಂಪೌಂಡ್ಗೇ ಪೋಸ್ಟರ್ ಅಂಟಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

