ಪವನ್ ಕಲ್ಯಾಣ್-ಅನ್ನಾ ಲೆಜ್ನೆವಾ ವಿಚ್ಛೇದನ: 4ನೇ ಮದುವೆ ಆಗ್ತರಾ ಆಂಧ್ರ ಡಿಸಿಎಂ?

ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ (Pawan Kalyan) ಮತ್ತು ಅವರ ಪತ್ನಿ ಅನ್ನಾ ಲೆಜ್ನೆವಾ (Anna Lezhneva) ತಮ್ಮ ಸುದೀರ್ಘ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ ಇಡುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಪರಸ್ಪರ ಒಪ್ಪಿಗೆ ಹಾಗೂ ಗೌರವದೊಂದಿಗೆ ತಾವಿಬ್ಬರೂ ಬೇರ್ಪಡುವ ಜಂಟಿ ನಿರ್ಧಾರಕ್ಕೆ ಬಂದಿರುವುದಾಗಿ ಅಧಿಕೃತ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ತೆಲುಗು ಚಿತ್ರರಂಗ, ರಾಜಕೀಯ ವಲಯ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

“ನಮ್ಮ ಮದುವೆಯ ಬಂಧ ಮುಕ್ತಾಯಗೊಂಡಿದ್ದರೂ, ನಾವಿಬ್ಬರೂ ಮುಂದೆಯೂ ಉತ್ತಮ ಸ್ನೇಹಿತರಾಗಿ ಮುಂದುವರಿಯುತ್ತೇವೆ” ಎಂದು ಪವನ್-ಅನ್ನಾ ಸ್ಪಷ್ಟಪಡಿಸಿದ್ದಾರೆ.  ತಮ್ಮ ನಿರ್ಧಾರದಿಂದ ಮಕ್ಕಳ ಮಾನಸಿಕ ನೆಮ್ಮದಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಮತ್ತು ಅವರ ಉತ್ತಮ ಭವಿಷ್ಯಕ್ಕಾಗಿ ಜವಾಬ್ದಾರಿಯುತ ತಂದೆ-ತಾಯಿಯಾಗಿ ಉಂಟಾಗುವ ಕರ್ತವ್ಯಗಳನ್ನು ಇಬ್ಬರೂ ಜಂಟಿಯಾಗಿ ನಿರ್ವಹಿಸುವುದಾಗಿ ತಿಳಿಸಿದ್ದಾರೆ.

Advertisement

2011ರಲ್ಲಿ ಬಿಡುಗಡೆಯಾದ ‘ತೀನ್ ಮಾರ್’ (Teen Maar) ಸಿನಿಮಾ ಚಿತ್ರಿಕರಣದ ವೇಳೆ ಪರಿಚಯವಾದ ಪವನ್ ಕಲ್ಯಾಣ್ ಮತ್ತು ರಷ್ಯಾದ ಅನ್ನಾ ಲೆಜ್ನೆವಾ 2013ರ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು. ಪವನ್ ಅವರ ರಾಜಕೀಯ ಹಾಗೂ ವೈಯಕ್ತಿಕ ಜೀವನದ ಹಲವು ಕಷ್ಟದ ದಿನಗಳಲ್ಲಿ ಅನ್ನಾ ಸಾಥ್ ನೀಡಿದ್ದರು.

ಪವನ್ ಕಲ್ಯಾಣ್ ವಿಚ್ಛೇದನದ ಸುದ್ದಿ ಹೊರಬಿದ್ದ ಬೆನ್ನಲ್ಲೇ ತೆಲುಗಿನ ಪ್ರಸಿದ್ಧ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಈ ಹಿಂದೆ ಮಾಡಿದ್ದ ಭವಿಷ್ಯದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತಿವೆ.  “ಪವನ್ ಕಲ್ಯಾಣ್ ಅವರಿಗೆ ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಅತ್ಯುನ್ನತ ಯಶಸ್ಸು ಸಿಗುವ ಸಮಯದಲ್ಲಿಯೇ ಅವರ ವೈಯಕ್ತಿಕ ಜೀವನದಲ್ಲಿ ಸವಾಲುಗಳು ಮತ್ತು ಮಾನಸಿಕ ಸಂಕಷ್ಟ ಎದುರಾಗಲಿದೆ” ಎಂದು ವೇಣು ಸ್ವಾಮಿ ಯೂಟ್ಯೂಬ್ ಇಂಟರ್ವ್ಯೂಗಳಲ್ಲಿ ಭವಿಷ್ಯ ನುಡಿದಿದ್ದರು.

Advertisement

ಇದನ್ನೂ ಓದಿ: ‘ಕಾಂತಾರ’ ಸಿನಿಮಾ ತೆರೆಕಂಡು 4 ವರ್ಷ!: ಜಗತ್ತಿನಾದ್ಯಂತ ಪ್ರೀತಿ ತೋರಿದ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ

 “ಪವನ್ ಜಾತಕದಲ್ಲಿ ಗುರು ನೀಚ ಸ್ಥಾನದಲ್ಲಿದ್ದಾನೆ. ಹಾಗಾಗಿ ಅವರ ಜೀವನದಲ್ಲಿ ಮದುವೆಗಳ ಸಂಖ್ಯೆ ಹೆಚ್ಚಾಗುವ ಹಾಗೂ 4ನೇ ಮದುವೆಯಾಗುವ ಸಾಧ್ಯತೆಗಳಿವೆ” ಎಂದು ಅವರು ಹೇಳಿದ್ದರು. ಈ ಹಿಂದೆ ಸಮಂತಾ-ನಾಗಚೈತನ್ಯ ವಿಚ್ಛೇದನದ ಭವಿಷ್ಯ ನಿಜವಾಗಿದ್ದಂತೆ, ಈಗ ಪವನ್ ವಿಷಯದಲ್ಲೂ ಭವಿಷ್ಯ ನಿಜವಾಗಿದೆ ಎಂದು ವೇಣು ಸ್ವಾಮಿ ತಮ್ಮ ವೀಡಿಯೊಗಳನ್ನು ಮರು-ಹಂಚಿಕೊಂಡಿದ್ದಾರೆ. ಆದರೆ ನೆಟ್ಟಿಗರ ತೀವ್ರ ಆಕ್ರೋಶ ಮತ್ತು ಟ್ರೋಲ್‌ಗೆ ಹೆದರಿ ಕಾಮೆಂಟ್ ಸೆಕ್ಷನ್ ಅನ್ನು ಆಫ್ (Disable) ಮಾಡಿರುವುದು ಗమనಾರ್ಹ.

Advertisement

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ