ಮಲೆನಾಡಿನ ಹಸಿರು, ಧುಮ್ಮಿಕ್ಕುವ ಜಲಧಾರೆಗಳ ವೈಭವ ಬಣ್ಣಿಸಿದ ಸಿಎಂ ಡಿಕೆಶಿ

ಬೆಂಗಳೂರು: ಕರುನಾಡಿನ ಪ್ರಕೃತಿ ಸೌಂದರ್ಯ ಮತ್ತು ಪ್ರವಾಸೋದ್ಯಮದ ವೈಭವವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ಮನಸಾರೆ ಕೊಂಡಾಡಿದ್ದಾರೆ. ರಾಜ್ಯದಲ್ಲಿರುವ 540ಕ್ಕೂ ಹೆಚ್ಚು ಮನಮೋಹಕ ಜಲಪಾತಗಳು ಕರ್ನಾಟಕದ ಪ್ರಕೃತಿ ಸೌಂದರ್ಯದ ಪ್ರತಿಬಿಂಬ ಹಾಗೂ ನಮ್ಮೆಲ್ಲರ ಹೆಮ್ಮೆ ಎಂದು ಅವರು ಬಣ್ಣಿಸಿದ್ದಾರೆ. ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ರಾಜ್ಯದ ಜಲಪಾತಗಳ ವೈಭವದ ಕುರಿತು ಪೋಸ್ಟ್ ಹಂಚಿಕೊಂಡಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರು, ಕರುನಾಡಿನ ಪ್ರಕೃತಿ ಶ್ರೀಮಂತಿಕೆಯನ್ನು ವಿವರಿಸಿದ್ದಾರೆ:

“ನಮ್ಮ ಮೋಡಿಮಾಡುವ ಜಲಪಾತಗಳು ಕರ್ನಾಟಕದ ಪ್ರಕೃತಿ ಸೌಂದರ್ಯದ ಮತ್ತೊಂದು ಪ್ರತಿಬಿಂಬವಾಗಿದೆ. ವಿಶ್ವಪ್ರಸಿದ್ಧ ಜೋಗ ಜಲಪಾತದಿಂದ ಹಿಡಿದು ಒಟ್ಟು 540ಕ್ಕೂ ಹೆಚ್ಚು ಜಲಪಾತಗಳನ್ನು ಹೊಂದಿರುವ ಕರ್ನಾಟಕ ನಮ್ಮ ಹೆಮ್ಮೆ” ಎಂದು ಸಿಎಂ ಸಂತಸ ವ್ಯಕ್ತಪಡಿಸಿದ್ದಾರೆ. “ಗಗನಚುಕ್ಕಿ ಮತ್ತು ಭರಚುಕ್ಕಿಯ ಭವ್ಯತೆ ಹಾಗೂ ಮಲೆನಾಡಿನ ಹಚ್ಚಹಸಿರಿನ ನಡುವೆ ಧುಮ್ಮಿಕ್ಕುವ ನೂರಾರು ಜಲಧಾರೆಗಳು ನಮ್ಮ ಕರ್ನಾಟಕದ ಜಲಪಾತಗಳ ನಿಜವಾದ ಸಾರವಾಗಿವೆ” ಎಂದು ಅವರು ಬರೆದುಕೊಂಡಿದ್ದಾರೆ.

Advertisement

ಇದನ್ನೂ ಓದಿ: ನನ್ನನ್ನ ಟಚ್ ಮಾಡೋಕಾಗಲ್ಲ, ಬನ್ನಿ ನನ್ನ ಮನೆ ಮೇಲೆ ದಾಳಿ ಮಾಡಿ: ಡಿಕೆಶಿ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರೊಚ್ಚಿಗೆದ್ದು ವಾಗ್ದಾಳಿ

ಡಿಕೆಶಿ ಹಂಚಿಕೊಂಡ ಎಕ್ಸ್​ ಪೋಸ್ಟ್​​:

Advertisement


ಪ್ರವಾಸೋದ್ಯಮಕ್ಕೆ ಉತ್ತೇಜನ: ನೆಟ್ಟಿಗರಿಂದ ಮೆಚ್ಚುಗೆ

ಮುಖ್ಯಮಂತ್ರಿಗಳ ಈ ಪೋಸ್ಟ್ ರಾಜ್ಯದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವಂತಿದ್ದು, ಕರುನಾಡಿನ ಪ್ರಕೃತಿ ಸೊಬಗನ್ನು ಕೊಂಡಾಡಿರುವ ಸಿಎಂ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹಾಗೂ ಪ್ರವಾಸಿ ಪ್ರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ