ಯೋಗಿ ಮೂರನೇ ಬಾರಿ ಸಿಎಂ ಆಗುವುದು ಬೇಡ: ಇದರಿಂದ ಮುಸ್ಲಿಂ ಜನರಿಗೆ ಮತ್ತಷ್ಟು ಸಂಕಷ್ಟ ಎಂದ ಮುಸ್ಲಿಂ ನಾಯಕ

ಲಖನೌ: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (UP Assembly Elections 2027) ಮುನ್ನವೇ ರಾಜ್ಯ ರಾಜಕೀಯದಲ್ಲಿ ಮೈತ್ರಿ ಲೆಕ್ಕಾಚಾರಗಳು ತೀವ್ರಗೊಂಡಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚಿಸುವುದನ್ನು ತಡೆಯಲು ತಮ್ಮ ಪಕ್ಷವು ಯಾವಾಗಲೂ ಒಂದು ಬಲವಾದ ಮೈತ್ರಿಕೂಟವನ್ನು ಬಯಸಿದೆ ಎಂದು ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ಶೌಕತ್ ಅಲಿ (Shaukat Ali) ಸ್ಪಷ್ಟಪಡಿಸಿದ್ದಾರೆ. ಲಖನೌನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತ ಹಾಗೂ ವಿಪಕ್ಷಗಳ ಧೋರಣೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸುವುದನ್ನು ತಡೆಯಲು ನಮಗೆ ಯಾವಾಗಲೂ ಬಲವಾದ ಮೈತ್ರಿಕೂಟದ ಅಗತ್ಯವಿತ್ತು. ‘ಬಾಬಾ’ (ಯೋಗಿ ಆದಿತ್ಯನಾಥ್) ಅವರು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವುದನ್ನು ನಾವು ಬಯಸುವುದಿಲ್ಲ. ಏಕೆಂದರೆ ಬಿಜೆಪಿ ಆಳ್ವಿಕೆಯಲ್ಲಿ ಮುಸ್ಲಿಮರು ಅತಿ ಹೆಚ್ಚು ಸಂಕಷ್ಟ ಅನುಭವಿಸಿದ್ದಾರೆ” ಎಂದು ಶೌಕತ್ ಅಲಿ ಆರೋಪಿಸಿದ್ದಾರೆ.

Advertisement

ಚುನಾವಣಾ ಮೈತ್ರಿ ಕುರಿತು ವಿರೋಧ ಪಕ್ಷಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಅಲಿ. “ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಮಾಜವಾದಿ ಪಕ್ಷ (SP), ಬಹುಜನ ಸಮಾಜ ಪಕ್ಷ (BSP) ಮತ್ತು ‘ಇಂಡಿಯಾ’ (INDIA) ಒಕ್ಕೂಟದೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಐಎಂಐಎಂ ಪ್ರಯತ್ನಿಸಿತ್ತು. ಆದರೆ ಆ ಪಕ್ಷಗಳು ನಮ್ಮ ಪ್ರಸ್ತಾಪಕ್ಕೆ ಒಪ್ಪಲಿಲ್ಲ” ಎಂದರು.

ಇದನ್ನೂ ಓದಿ: ದೀಪಾವಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್: ಉ.ಪ್ರದೇಶದ 1.86 ಕೋಟಿ ಕುಟುಂಬಗಳಿಗೆ ಯೋಗಿ ಸರ್ಕಾರದಿಂದ ಬಂಪರ್ ಉಡುಗೊರೆ

Advertisement

 “ನಾವು ಮೈತ್ರಿಗಾಗಿ ಕೈಚಾಚಿದರೂ, ಈ ಪಕ್ಷಗಳು ಈಗ ಅಹಂಕಾರದಿಂದ ತುಂಬಿವೆ” ಎಂದು ಶೌಕತ್ ಅಲಿ ವಾಗ್ದಾಳಿ ನಡೆಸಿದ್ದಾರೆ. (ಈ ಬೆಳವಣಿಗೆಯ ನಡುವೆಯೇ ಯುಪಿಯಲ್ಲಿ ಎಐಎಂಐಎಂ ಮತ್ತು ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ ಪಕ್ಷದ ನಡುವೆ ಮೈತ್ರಿ ಮಾತುಕತೆ ಚುರುಕುಗೊಂಡಿದೆ).

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement