ಬೆಂಗಳೂರು: ಕರುನಾಡಿನ ಪ್ರಕೃತಿ ಸೌಂದರ್ಯ ಮತ್ತು ಪ್ರವಾಸೋದ್ಯಮದ ವೈಭವವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ಮನಸಾರೆ ಕೊಂಡಾಡಿದ್ದಾರೆ. ರಾಜ್ಯದಲ್ಲಿರುವ 540ಕ್ಕೂ ಹೆಚ್ಚು ಮನಮೋಹಕ ಜಲಪಾತಗಳು ಕರ್ನಾಟಕದ ಪ್ರಕೃತಿ ಸೌಂದರ್ಯದ ಪ್ರತಿಬಿಂಬ ಹಾಗೂ ನಮ್ಮೆಲ್ಲರ ಹೆಮ್ಮೆ ಎಂದು ಅವರು ಬಣ್ಣಿಸಿದ್ದಾರೆ. ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ರಾಜ್ಯದ ಜಲಪಾತಗಳ ವೈಭವದ ಕುರಿತು ಪೋಸ್ಟ್ ಹಂಚಿಕೊಂಡಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರು, ಕರುನಾಡಿನ ಪ್ರಕೃತಿ ಶ್ರೀಮಂತಿಕೆಯನ್ನು ವಿವರಿಸಿದ್ದಾರೆ:
“ನಮ್ಮ ಮೋಡಿಮಾಡುವ ಜಲಪಾತಗಳು ಕರ್ನಾಟಕದ ಪ್ರಕೃತಿ ಸೌಂದರ್ಯದ ಮತ್ತೊಂದು ಪ್ರತಿಬಿಂಬವಾಗಿದೆ. ವಿಶ್ವಪ್ರಸಿದ್ಧ ಜೋಗ ಜಲಪಾತದಿಂದ ಹಿಡಿದು ಒಟ್ಟು 540ಕ್ಕೂ ಹೆಚ್ಚು ಜಲಪಾತಗಳನ್ನು ಹೊಂದಿರುವ ಕರ್ನಾಟಕ ನಮ್ಮ ಹೆಮ್ಮೆ” ಎಂದು ಸಿಎಂ ಸಂತಸ ವ್ಯಕ್ತಪಡಿಸಿದ್ದಾರೆ. “ಗಗನಚುಕ್ಕಿ ಮತ್ತು ಭರಚುಕ್ಕಿಯ ಭವ್ಯತೆ ಹಾಗೂ ಮಲೆನಾಡಿನ ಹಚ್ಚಹಸಿರಿನ ನಡುವೆ ಧುಮ್ಮಿಕ್ಕುವ ನೂರಾರು ಜಲಧಾರೆಗಳು ನಮ್ಮ ಕರ್ನಾಟಕದ ಜಲಪಾತಗಳ ನಿಜವಾದ ಸಾರವಾಗಿವೆ” ಎಂದು ಅವರು ಬರೆದುಕೊಂಡಿದ್ದಾರೆ.

ಡಿಕೆಶಿ ಹಂಚಿಕೊಂಡ ಎಕ್ಸ್ ಪೋಸ್ಟ್:

ಕರುನಾಡಿನ ಪ್ರಾಕೃತಿಕ ಸೌಂದರ್ಯಕ್ಕೆ ಮತ್ತೊಂದು ಕನ್ನಡಿ ಅಂದ್ರೆ ಅದು ನಮ್ಮ ನಯನಮನೋಹರ ಜಲಪಾತಗಳು. ವಿಶ್ವವಿಖ್ಯಾತ ಜೋಗದಿಂದ ಹಿಡಿದು ಬರೋಬ್ಬರಿ 540ಕ್ಕೂ ಹೆಚ್ಚು ಜಲಪಾತಗಳಿರೋ ಕರುನಾಡು ನಮ್ಮ ಹೆಮ್ಮೆ. ಗಗನಚುಕ್ಕಿ-ಭರಚುಕ್ಕಿಯ ಭವ್ಯತೆ ಮತ್ತು ಮಲೆನಾಡಿನ ಹಸಿರ ನಡುವೆ ಧುಮ್ಮಿಕ್ಕುವ ನೂರಾರು ಜಲಧಾರೆಗಳೇ ನಮ್ಮ ಕರ್ನಾಟಕದ ಅಪ್ಪಟ ಜಲಸಿರಿ. https://t.co/73yL4lxWu3
— DK Shivakumar (@DKShivakumar) November 12, 2026
ಪ್ರವಾಸೋದ್ಯಮಕ್ಕೆ ಉತ್ತೇಜನ: ನೆಟ್ಟಿಗರಿಂದ ಮೆಚ್ಚುಗೆ
ಮುಖ್ಯಮಂತ್ರಿಗಳ ಈ ಪೋಸ್ಟ್ ರಾಜ್ಯದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವಂತಿದ್ದು, ಕರುನಾಡಿನ ಪ್ರಕೃತಿ ಸೊಬಗನ್ನು ಕೊಂಡಾಡಿರುವ ಸಿಎಂ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹಾಗೂ ಪ್ರವಾಸಿ ಪ್ರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


