“ನಾನು ಪ್ರಧಾನಿಯಲ್ಲ, ಪ್ರಧಾನ ಸೇವಕ”: ಮೈಸೂರು ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ 70 ವರ್ಷದ ಹಿರಿಯ ಕಾರ್ಯಕರ್ತೆಯ ಆರೋಗ್ಯ ವಿಚಾರಿಸಿ ಮಾನವೀಯತೆ ಮೆರೆದ ಪ್ರಧಾನಿ ಮೋದಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮತ್ತೊಮ್ಮೆ ತಮ್ಮ ಸರಳತೆ ಹಾಗೂ ಬೃಹತ್ ಮಾನವೀಯತೆಯ ಮೂಲಕ ತಾವು ದೇಶದ ‘ಪ್ರಧಾನ ಸೇವಕ’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಾರ್ಯಕ್ರಮದ ನಡುವೆ ಏಕಾಏಕಿ ಅಸ್ವಸ್ಥಗೊಂಡು ಕುಸಿದುಬೀಳುವ ಸ್ಥಿತಿಯಲ್ಲಿದ್ದ 70 ವರ್ಷದ ಹಿರಿಯ ಮಹಿಳಾ ಕಾರ್ಯಕರ್ತೆಯ ನೆರವಿಗೆ ತಕ್ಷಣ ಧಾವಿಸಿದ ಪ್ರಧಾನಿ ಮೋದಿ, ಖುದ್ದಾಗಿ ಅವರ ಆರೋಗ್ಯ ವಿಚಾರಿಸಿ ವಿಶೇಷ ಕಾಳಜಿ ವಹಿಸಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡಿನ ನಿವಾಸಿಯಾಗಿರುವ 70 ವರ್ಷ ವಯಸ್ಸಿನ ಹಿರಿಯ ಬಿಜೆಪಿ ಮಹಿಳಾ ಕಾರ್ಯಕರ್ತೆ ಪ್ರೇಮಾ.ಕೆ ಅವರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವೃದ್ಧೆ ಪ್ರೇಮಾ ಅವರು ಹವಾಮಾನ ವೈಪರೀತ್ಯ ಅಥವಾ ಸುಸ್ತಿನಿಂದಾಗಿ ಏಕಾಏಕಿ ಅಸ್ವಸ್ಥಗೊಂಡು ಕುಸಿದುಬೀಳುವ ಹಂತಕ್ಕೆ ತಲುಪಿದ್ದಾರೆ. ವೃದ್ಧೆ ಅಸ್ವಸ್ಥರಾಗಿರುವುದನ್ನು ಗಮನಿಸಿದ ತಕ್ಷಣವೇ ಎಚ್ಚೆತ್ತ ಪ್ರಧಾನಿ ನರೇಂದ್ರ ಮೋದಿ ಅವರು ಪ್ರೋಟೋಕಾಲ್ ಬದಿಗಿಟ್ಟು ನೇರವಾಗಿ ಅವರ ಸಹಾಯಕ್ಕೆ ಧಾವಿಸಿದರು.

Advertisement

ಇದನ್ನೂ ಓದಿ: ಕರುನಾಡಿನ ರೈಲ್ವೆ ಕ್ರಾಂತಿಗೆ ಪ್ರಧಾನಿ ಮೋದಿ ಚಾಲನೆ!: ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್

 ಪ್ರೇಮಾ ಅವರ ಹತ್ತಿರ ತೆರಳಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ, ಕೂಡಲೇ ತಮ್ಮ ಜೊತೆಗಿದ್ದ ವಿಶೇಷ ವೈದ್ಯಕೀಯ ತಂಡಕ್ಕೆ (Personal Doctors) ಸೂಚನೆ ನೀಡಿ, ಹಿರಿಯ ಜೀವಕ್ಕೆ ಅಗತ್ಯವಿರುವ ತುರ್ತು ಚಿಕಿತ್ಸೆ ಹಾಗೂ ಸೂಕ್ತ ಆರೈಕೆ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಪ್ರಧಾನಿಯವರ ಈ ಹೃದಯಸ್ಪರ್ಶೀ ಮತ್ತು ಮಾನವೀಯ ನಡೆ ಕಂಡು ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಭಾವುಕರಾದರು. ಅಧಿಕಾರಕ್ಕಿಂತ ಜನರ ಮೇಲಿನ ಕಾಳಜಿಯೇ ಮುಖ್ಯ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿರುವ ಪ್ರಧಾನಿ ಮೋದಿಯವರ ಈ ಗುಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, “ನಾವೆಂದಿಗೂ ಪ್ರಧಾನಿಯಲ್ಲ, ದೇಶದ ಪ್ರಧಾನ ಸೇವಕ” ಎಂಬ ಅವರ ಮಾತು ಮತ್ತೊಮ್ಮೆ ನಿಜವಾಗಿದೆ ಎಂದು ಜನರು ಕೊಂಡಾಡುತ್ತಿದ್ದಾರೆ.

Advertisement

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement