ಮನಿಲಾದಲ್ಲಿ ಜಪಾನ್ ಪ್ರಧಾನಿ ಸನೇ ತಕೈಚಿ ಅವರಿಗೆ ವಿಶೇಷ ಉಡುಗೊರೆ ನೀಡಿದ ಪ್ರಧಾನಿ ಮೋದಿ

ಮನಿಲಾ: ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ನಡೆಯುತ್ತಿರುವ ಕ್ವಾಡ್ ಹಾಗೂ ಪೂರ್ವ ಏಷ್ಯಾ ಶೃಂಗಸಭೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಸನೇ ತಕೈಚಿ (Sanae Takaichi) ಅವರನ್ನು ಭೇಟಿಯಾಗಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಭಾರತದ ಶ್ರೀಮಂತ ಪರಂಪರೆ ಮತ್ತು ಕರಕುಶಲ ಕಲೆಯನ್ನು ಬಿಂಬಿಸುವ ವಿಶೇಷ ಉಡುಗೊರೆಯಾಗಿ ಸಧೇಲಿ (Sadheli) ಪೆಟ್ಟಿಗೆಯಲ್ಲಿ ಇರಿಸಲಾದ ರಾಯಲ್ ಬ್ಲೂ ಬನಾರಸಿ ಕತಾನ್ ಸಿಲ್ಕ್ ಸ್ಟೋಲ್ (Royal Blue Banarasi Katan Silk Stole) ಅನ್ನು ಜಪಾನ್ ಪ್ರಧಾನಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್​:

Advertisement

Advertisement

ಪ್ರಧಾನಿ ಮೋದಿ ನೀಡಿದ ಈ ವಿಶೇಷ ಉಡುಗೊರೆಯ ಮಹತ್ವವೇನು?

ಅತ್ಯುತ್ತಮ ಗುಣಮಟ್ಟದ ‘ಕತಾನ್ ರೇಷ್ಮೆ’ಯಿಂದ (Katan silk) ನೇಯ್ದ ಈ ಸ್ಟೋಲ್, ವಾರಾಣಸಿಯ (ಬನಾರಸ್) ಶತಮಾನಗಳಷ್ಟು ಹಳೆಯದಾದ ಜವಳಿ ಕಲೆಯನ್ನು ಪ್ರದರ್ಶಿಸುತ್ತದೆ. ತಲೆಮಾರುಗಳ ನೇಕಾರರ ನಿಖರತೆ ಮತ್ತು ಸೂಕ್ಷ್ಮ ಕರಕುಶಲತೆಯನ್ನು ಪ್ರತಿಬಿಂಬಿಸುವ ಸಂಕೀರ್ಣ ವಿನ್ಯಾಸಗಳನ್ನು ಇದು ಒಳಗೊಂಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ – “ಮೋದಿ ಬಹಳ ಗಟ್ಟಿ ಮನುಷ್ಯ” ಎಂದು ಹಾಡಿಹೊಗಳಿದ ಟ್ರಂಪ್

 ಈ ರೇಷ್ಮೆ ಸ್ಟೋಲ್‌ನ ಆಕರ್ಷಕ ‘ರಾಯಲ್ ಬ್ಲೂ’ (Royal Blue) ಬಣ್ಣವು ಘನತೆ, ಬುದ್ಧಿವಂತಿಕೆ ಮತ್ತು ಸಾಮರಸ್ಯವನ್ನು (Dignity, Wisdom, and Harmony) ಸಂಕೇತಿಸುತ್ತದೆ. ಅತ್ಯಂತ ಸುಂದರವಾದ ಹಾಗೂ ಸಾಂಪ್ರದಾಯಿಕ ಸಧೇಲಿ ಪೆಟ್ಟಿಗೆಯಲ್ಲಿ (Sadheli box) ಇರಿಸಿ ನೀಡಲಾದ ಈ ಉಡುಗೊರೆಯು ಭಾರತದ ನಿರಂತರ ಸ್ನೇಹ, ಆತ್ಮೀಯತೆ ಮತ್ತು ಸಾಂಸ್ಕೃತಿಕ ಗೌರವದ ಸಂಕೇತವಾಗಿದೆ. ವಿದೇಶಿ ಗಣ್ಯರ ಭೇಟಿಯ ವೇಳೆ ಭಾರತದ ಸ್ಥಳೀಯ ಕಲೆ ಮತ್ತು ಕುಶಲಕರ್ಮಿಗಳ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ತಮ್ಮ ಸಂಪ್ರದಾಯವನ್ನು ಪ್ರಧಾನಿ ಮೋದಿ ಮನಿಲಾದಲ್ಲೂ ಮುಂದುವರಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ