ಪೆರ್ನೆ: ವಡ್ಯದಗಯದಲ್ಲಿ 2.40 ಕೋಟಿ ರೂ ವೆಚ್ಚದ ನೂತನ ಸೇತುವೆಗೆ ಶಿಲಾನ್ಯಾಸ

ಪುತ್ತೂರು: ಗ್ರಾಮಗಳು ದೇಶದಬೆನ್ನೆಲುಬು ಇದ್ದಂತೆ , ಗ್ರಾಮೀಣ ಪ್ರದೇಶದ ಮೂಲಭೂತ ಬೇಡಿಕೆಗಳು ಈಡೇರಿದಾಗ ಮಾತ್ರ ದೇಶ ವಿಶ್ವಗುರುವಾಗಲು ಸಾಧ್ಯ, ಈ ನಿಟ್ಟಿನಲ್ಲಿ ಗ್ರಾಮಗಳ ಅಭಿವೃದ್ದಿಗೆ ಕರ್ನಾಟಕ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಮಂಗಳವಾರ ಪೆರ್ನೆ ಗ್ರಾಮದ ವಡ್ಯದ ಗಯ ಎಂಬಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

Advertisement

ವಡ್ಯದ ಗಯದಲ್ಲಿರುವ ಈ ಸೇತುವೆ ಈ ಭಾಗದ ಪ್ರಮುಖ ಸಂಪರ್ಕ ಸೇತುವಾಗಿದೆ. ಹಲವು ವರ್ಷಗಳ ಹಿಂದೆ ನಿರ್ಮಾಣವಾದ ಇಲ್ಲಿರುವ ಕಿರಿದಾದ ಸೇತುವೆ ಶಿಥಿಲಗೊಂಡು ವರ್ಷಗಳೇ ಕಳೇದರೂ ಇಲ್ಲಿ ಹೊಸ ಸೇತುವೆ ನಿರ್ಮಾಣವಾಗದೇ ಇರುವುದು ದುರಂತದ ಸಂಗತಿಯಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಈ ಭಾಗದ ಜನರು ಬಂದು ನನ್ನಲ್ಲಿ ಸೇತುವೆಯ ಬೇಡಿಕೆ ಬಗ್ಗೆ ಮನವಿ ಮಾಡಿದ್ದರು. ಗ್ರಾಮದ ಜನರ ಬೇಡಿಕೆ ಬಹುಪ್ರಮುಖವಾದದ್ದು ಎಂದು ಅರಿತುಕೊಂಡ ನಾನು ಹೊಸ ಸೇತುವೆ ನಿರ್ಮಾಣಕ್ಕೆ ೨.೪೦ ಕೋಟಿ ಅನುದಾನವನ್ನು ಸರಕಾರದ ಮೂಲಕ ಮಂಜೂರು ಮಾಡಿಸುವ ಮೂಲಕ ಇಲ್ಲಿನ ಜನರ ಕನಸನ್ನು ನನಸು ಮಾಡಿದ್ದೇನೆ ಎಂದು ಹೇಳಿದರು.

ಅಭಿವೃದ್ದಿ ಆಗಿಲ್ಲ ಎನ್ನುವವರು ಪರಿಶೀಲನೆ ಮಾಡಿ

Advertisement

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ವರ್ಷದಲ್ಲಿ ೩೦೦೦ ಕೋಟಿ ಅನುದಾನ ಬಂದಿದೆ. ಗ್ರಾಮಗಳ ರಸ್ತೆಗಳು ಅಭಿವೃದ್ದಿಯಾಗಿದೆ. ಇದುವರೆಗೂ ಆಗದ ಅನೇಕ ಅಭಿವೃದ್ದಿ ಕೆಲಸಗಳು ಆಗಿದೆ. ಇದರ ಬಗ್ಗೆ ಸಂಶಯ ಇದ್ದವರು ಪುತ್ತೂರಿನ ಗ್ರಾಮಗಳಿಗೊಮ್ಮೆ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರ ಜೊತೆ ವಿಚಾರಿಸಲಿ ಎಂದು ಹೇಳಿದ ಶಾಸಕರು ಸರಕಾರದ ಪಂಚ ಗ್ಯಾರಂಟಿಯಿಂದ ಅಭಿವೃದ್ದಿಗೆ ಅನುದಾನ ಬರುತ್ತಿಲ್ಲ ಎಂದು ಆರೋಪ ಮಾಡುವ ಬಿಜೆಪಿಯವರು ಸುಳ್ಳು ಆರೋಪವನ್ನು ಮಾಡುವ ಬದಲು ಸರಕಾರಕ್ಕೆ ಒತ್ತಡ ತಂದು ಅನುದಾನ ತರುವ ಕೆಲಸವನ್ನು ಮಾಡಬೇಕು ಆ ಇಚ್ಚಾಶಕ್ತಿ ಜನಪ್ರತಿನಿಧಿಗೆ ಇರಬೇಕಾಗುತ್ತದೆ ಎಂದು ಹೇಳಿದರು. ಈ ಬಾರಿ ಪಂಚ ಗ್ಯಾರಂಟಿಯ ಕಾರಣಕ್ಕೆ ಅನುದಾನ ಕೊಡುತ್ತಿಲ್ಲ ಎಂದು ಆರೋಪ ಮಾಡುವವರು ಈ ಹಿಂದೆಯೂ ಶಾಸಕರಾಗಿದ್ದಾಗ ಯಾಕೆ ಅಭಿವೃದ್ದಿ ಮಾಡಿಲ್ಲ? ಆವಾಗ ಯಾಕೆ ಅನುದಾನ ನೀಡಿಲ್ಲ ಅವರದ್ದೇ ಸರಕಾರ ಇರುವಾಗ ಯಾಕೆ ಗ್ರಾಮಕ್ಕೆ ಅನುದಾನ ನೀಡಿಲ್ಲ ಎಂದು ಶಾಸಕರು ಬಿಜೆಪಿ ಶಾಸಕರನ್ನು ಕುಟುಕಿದರು.

ರಾಂಭಟ್ರ ಕಾಲದಲ್ಲಿ ನಿರ್ಮಾಣವಾದ ಸೇತುವೆ: ವೆಂಕಟ್ರಮಣ ಭಟ್

Advertisement

ಇಲ್ಲಿನ ವಡ್ಯದ ಗಯದಲ್ಲಿರುವ ಸೇತುವೆ ಮಾಜಿ ಶಾಸಕ ರಾಂಭಟ್ರ ಕಾಲದಲ್ಲಿ ನಿರ್ಮಾಣವಾಗಿದ್ದು ಆ ಕಾಲದಲ್ಲಿ ಇದಕ್ಕೆ ೩೦ ಸಾವಿರ ಖರ್ಚಾಗಿತ್ತು. ಆ ಬಳಿಕ ಬಂದ ಎಲ್ಲಾ ಶಾಸಕರಲ್ಲಿಯೂ ನಾವು ಮನವಿ ಮಾಡಿದ್ದೆವೆ , ಕಳೆದ ಅವಧಿಯಲ್ಲಿದ್ದ ಮಾಜಿ ಶಾಸಕ ಸಂಜೀವ ಮಠಂದೂರಿಗೂ ಮನವಿ ಮಾಡಿದ್ದೆವು ಎಲ್ಲರೂ ಸೇತುವೆ ನಿರ್ಮಾಣದ ಭರವಸೆ ಕೊಟ್ಟಿದ್ದಾರೆ ವಿನಾ ಅನುದಾನ ನೀಡಿಲ್ಲ.ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದ್ದು ಇವತ್ತು ಶಿಲಾನ್ಯಾಸವೂ ಆಗಿದೆ ಅನುದಾನವೂ ಬಂದಿದೆ. ಅಶೋಕ್ ರೈ ಅವರು ಶಾಸಕರಾಗಿರುವಷ್ಟು ದಿನ ಪುತ್ತೂರು ಅಭಿವೃದ್ದಿಯಾಗುತ್ತದೆ ಎಂಬುದಕ್ಕೆ ನಮ್ಮ ಸೇತುವೆಯೇ ಸಾಕ್ಷಿಯಾಗಿದೆ ಎಂದು ನಿವೃತ್ತ ಅಧ್ಯಾಪಕ ವೆಂಕಟ್ರಮಣ ಭಟ್ ಹೇಳಿದರು.ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನ ಅಶೋಕ್ ರೈ ಅವರನ್ನು ಗೆಲ್ಲಿಸುವ ಮೂಲಕ ಋಣ ಸಂದಾಯ ಮಾಡಬೇಕಿದೆ ಎಂದು ಹೇಳಿದರು.

ನಾನು ಬಿಜೆಪಿ ಅಧ್ಯಕ್ಷನಾಗಿದ್ದೆ ಆದರೆ ವೋಟು ಹಾಕಿದ್ದು ಅಶೋಕ್ ರೈಗೆ

ನಾನು ಕಳೆದ ಚುನಾವಣೆಯ ವೇಳೆ ಬಿಜೆಪಿ ಅಧ್ಯಕ್ಷನಾಗಿದ್ದೆ ಆದರೆ ವೋಟು ಹಾಕಿದ್ದು ಅಶೋಕ್ ರೈಯವರಿಗೆ ಎಂದು ಗಂಗಾದರ ರೈ ಹೇಳಿದರು.

ಈ ಹಿಂದಿನ ಶಾಸಕರಿಗೆ ನಾವು ಮನವಿ ಮಾಡಿದ್ದೆವು ಆದರೆ ಬೇಡಿಕೆ ಈಡೇರಿರಲಿಲ್ಲ. ಅಶೋಕ್ ರೈ ಅವರಿಗೆ ಮನವಿ ಮಾಡುವಾಗಲೂ ನಮಗೆ ನಂಬಿಕೆ ಇರಲಿಲ್ಲ ಆದರೆ ನಮಗೇ ಆಶ್ಚರ್ಯವಾಗುವ ರೀತಿಯಲ್ಲಿ ಅನುದಾನ ಬಂದಿದೆ, ಮೊದಲಿಗೆ ನಮಗೆ ನಂಬಲೂ ಸಾಧ್ಯವಾಗಲಿಲ್ಲ. ಅಶೋಕ್ ರೈ ಅವಧಿಯಲ್ಲಿ ಕೆಲಸ ಆಗಿಲ್ಲ ಎಂದು ಹೇಳುವವರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನೋಡಲಿ, ಮೆಡಿಕಲ್ ಕಾಲೇಜು ನಿರ್ಮಾಣವಾಗಿವ ಸೇಡಿಯಾಪಿಗೆ ಒಮ್ಮ ಭೇಟಿ ಕೊಡಲಿ. ಅಶೋಕ್ ರೈ ಅವರು ಶಾಸಕರಾಗಿದ್ದು ಪುತ್ತೂರಿನ ಜನರ ಭಾಗ್ಯ ಇನ್ನೆಂದೂ ಇವರಂಥ ಶಾಸಕರು ಬರುವುದೇ ಇಲ್ಲ. ಮುಂದೆ ಅಶೋಕ್ ರೈ ಮುಖ್ಯಮಂತ್ರಿಯಾದರೂ ಅಚ್ಚರಿಯಿಲ್ಲ ಎಂದು ಹೇಳಿದರು. ಮುಂದಿನ ಎರಡು ಅವಧಿಯಲ್ಲಿ ಅಶೋಕ್ ರೈ ಅವರೇ ಪುತ್ತೂರಿನ ಶಾಸಕರಾಗಿ ಆಯ್ಕೆಯಾಗುತ್ತಾರೆ, ಅವರೇ ಶಾಸಕರಾಗಿ ಆಯ್ಕೆಯಾಗುವಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಒಟ್ಟಾಗಿ ಅಶೋಕ್ ರೈ ಅವರನ್ನು ಗೆಲ್ಲಿಸುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಪುತ್ತೂರು ಕ್ಷೇತ್ರದ ಪರಿಶಿಷ್ಟ ಜಾತಿ ಸಮುದಾಯದ ಮೂಲಭೂತ ಸೌಕರ್ಯ ಅಭಿವೃದ್ದಿಗೆ 3 ಕೋಟಿ ಅನುದಾನ ಬಿಡುಗಡೆ:ಅಶೋಕ್ ರೈ

ಪೆರ್ನೆಯಲ್ಲಿ ಕೈ ಗಟ್ಟಿ ಇದೆ; ಎಂ ಎಸ್ ಮಹಮ್ಮದ್

ಪೆರ್ನೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ. ಇಲ್ಲಿನ ಹಿರಿಯರು , ವಿದ್ಯಾವಂತರು ಕಾಂಗ್ರೆಸ್ ಕಡೆ ಬರುತ್ತಿದ್ದಾರೆ, ಅಶೋಕ್ ರಐ ಅಭಿವೃದ್ದಿ ಕೆಲಸ ಕಂಡು ಬಿಜೆಪಿಯ ಪ್ರಮುಖರು ಶಾಸಕರ ಜೊತೆ ಕೈ ಜೋಡಿಸುತ್ತಿದ್ದಾರೆ ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಅತ್ಯಧಿಕ ಬಹುಮತಗಳಿಂದ ಗೆದ್ದು ಬರಲಿದ್ದಾರೆ ಇದರಲ್ಲಿ ಅನುಮಾನವೇ ಇಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಹೇಳಿದರು. ಶಾಸಕರ ಅಭಿವೃದ್ದಿ ಕೆಲಸ ಕಂಡು ಸಹಿಸಲು ಆಗದೆ ವಿರೋಧ ಪಕ್ಷಗಳು ಚಡಪಡಿಸುತ್ತಿದೆ ಎಂದು ಎಂ ಎಸ್ ಆರೋಪಿಸಿದರು.

ವೇದಿಕೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು ಟಿ ತೌಸೀಫ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರೈ ಮಠಂತಬೆಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಲಯ ಅಧ್ಯಕ್ಷ ಅಬ್ದುಲ್ ಶಾಫಿ, ಉಪ್ಪಿನಂಗಡಿ ಬ್ಲಾಕ್ ಕಾಯಾಧ್ಯಕ್ಷ ವಿಕ್ರಂ ಶೆಟ್ಟಿ, ಕಾರ್ಯದರ್ಶಿ ಶಿವಪ್ರಸಾದ್ ಕೋಟಿಂಬಾಡಿ, ಪಕ್ಷದ ಪ್ರಮುಖರಾದ ರಾಜೇಶ್ ಶೆಟ್ಟಿ, ಸುಂದರ ಮಲ್ಲಡ್ಕ, ಅಬ್ದುಲ್ ರಝಾಕ್, ಮಿತ್ರದಾಸ್ ರಐ, ಬೂತ್ ಅಧ್ಯಕ್ಷ ಪುಷ್ಕರ ಪೂಜಾರಿ , ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಉದ್ಯಮಿ ರೋಶನ್ ರೈ ಬನ್ನೂರು ಗ್ಯಾರಂಟಿ ಸಮಿತಿ ಸದಸ್ಯ ಅಬ್ಬು ನವಗ್ರಾಮ ಮೊದಲಾದವರು ಉಪಸ್ಥಿತರಿದ್ದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ