ಪುಣೆ ನ್ಯಾಯಾಲಯದ ಮುಂದೆಯೇ ಲಾಂಗ್, ಕೊಡಲಿಯಿಂದ ಕೊಚ್ಚಿ ಹಾಕಿದ ಗ್ಯಾಂಗ್ : ರಕ್ತದ ಮಡುವಿನಲ್ಲೂ ಎದ್ದುನಿಂತ ವ್ಯಕ್ತಿ

ಪುಣೆ: ಇಲ್ಲಿನ ನ್ಯಾಯಾಲಯದ ಮುಂದೆಯೇ ದುಷ್ಕರ್ಮಿಗಳ ಗ್ಯಾಂಗ್ ಅಟ್ಟಹಾಸ ಮೆರೆದಿರುವ ಭಯಾನಕ ಘಟನೆ ಆತಂಕ ಮೂಡಿಸಿದೆ. ವ್ಯಕ್ತಿಯೊಬ್ಬನ ಮೇಲೆ ಮನಬಂದಂತೆ ಲಾಂಗ್ (ಮಚ್ಚು) ಮತ್ತು ಕೊಡಲಿಯಿಂದ ಕೊಚ್ಚಿ ಮಾರಣಾಂತಿಕ ದಾಳಿ ನಡೆಸಲಾಗಿದೆ.

ತೀವ್ರ ರಕ್ತಸ್ರಾವವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ, ಆ ವ್ಯಕ್ತಿ ಮತ್ತೆ ಎದ್ದುನಿಂತಿರುವ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

Advertisement

ಕೋರ್ಟ್ ಎದುರೇ ಮಾರಕಾಸ್ತ್ರಗಳಿಂದ ದಾಳಿ – ಬೆಚ್ಚಿಬೀಳಿಸಿದ ದೃಶ್ಯ:

ಪುಣೆ ಕೋರ್ಟ್ ಆವರಣದ ಎದುರಲ್ಲೇ ಗುಂಪಾಗಿ ಬಂದ ದುಷ್ಕರ್ಮಿಗಳು, ವ್ಯಕ್ತಿಯ ಮೇಲೆ ಲಾಂಗ್ ಮತ್ತು ಕೊಡಲಿಯಿಂದ ಮನಬಂದಂತೆ ಹಲ್ಲೆ ನಡೆಸಿ ಕೊಚ್ಚಿ ಹಾಕಿದ್ದಾರೆ. ಮಾರಕಾಸ್ತ್ರಗಳ ದಾಳಿಯಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿ, ನೋವಿನ ನಡುವೆಯೂ ಮತ್ತೆ ಎದ್ದುನಿಂತಿರುವುದು ಸಾರ್ವಜನಿಕರನ್ನು ದಿಗ್ಭ್ರಮೆಗೊಳಿಸಿದೆ.

Advertisement

ಕಾನೂನು ರಕ್ಷಣೆ ಇರುವ ನ್ಯಾಯಾಲಯದ ಎದುರಲ್ಲೇ ಇಂತಹ ಕೃತ್ಯ ನಡೆದಿರುವುದು ಕಾನೂನು ಸುವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Advertisement