ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಚೊಚ್ಚಲ ಚುನಾವಣೆಗೆ ಮುಹೂರ್ತ ಫಿಕ್ಸ್

Date announced for Shri Saraswathi Credit Souharda Sahakari Limited elections

ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಚೊಚ್ಚಲ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಒಟ್ಟು 12 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 11 ಸ್ಥಾನಗಳಿಗೆ ಜ.25ರಂದು ಚುನಾವಣೆ ನಡೆಯಲಿದೆ. ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮತದಾನ‌ ಪ್ರಕ್ರಿಯೆ ನಡೆಯಲಿದ್ದು, ತ್ರಿವೇಣಿ ಚುನಾವಣಾಧಿಕಾರಿಯಾಗಿದ್ದಾರೆ.

2001ರಲ್ಲಿ ವಿವಿಧ ಸಂಘ ಸಂಸ್ಥೆಗಳು ಮತ್ತು ಹಿರಿಯರು ಕಟ್ಟಿಬೆಳೆಸಿದ ಈ ಸಹಕಾರಿ ಬ್ಯಾಂಕ್‌ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಅಲ್ಲದೆ, ಸಹಕಾರಿ ಬ್ಯಾಂಕ್‌ ಸ್ಥಾಪನೆಯಾದ ನಂತರದಿಂದ ಈವರೆಗೆ ಎಸ್‌.ಆರ್‌.ಸತೀಶ್ಚಂದ್ರ ಅವರೇ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಇದೀಗ 25 ವರ್ಷಗಳ ನಂತರ ಮೊದಲ ಬಾರಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಯುತ್ತಿದ್ದು, ಬಿರುಸಿನ ಸಿದ್ಧತೆಗಳು ನಡೆಯುತ್ತಿವೆ.

Advertisement

ಇದನ್ನೂ ಓದಿ: ಸುಳ್ಯ: ಪಡ್ಪಿನಂಗಡಿಯಲ್ಲಿ ಪ್ರತ್ಯಕ್ಷಗೊಂಡ ಚಿರತೆ

ಸಹಕಾರಿಯ ಒಟ್ಟು 12 ಸ್ಥಾನಗಳಿಗೆ ಒಂದು ಸ್ಥಾನಕ್ಕೆ ಸ್ಪರ್ಧಿಸಿದ್ದ ಉಮೇಶ್ ಪ್ರಭು ಕುಂಟಿಹಿತ್ಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸದ್ಯ  18 ಮಂದಿ ಕಣದಲಿದ್ದಾರೆ. ಎಸ್‌.ಆರ್.ಸತೀಶ್ಚಂದ್ರ, ಹರೀಶ್ ಬೋರ್ಕರ್ ಕತ್ತಲಕಾನ, ರಾಜಗೋಪಾಲ ಬಾಳೆಗುಳಿ, ರವೀಶ ಪೊಸವಳಿಕೆ, ಬಿ.ವಸಂತಶಂಕರ್, ವೇದವ್ಯಾಸ ಕಟ್ಟೆ, ಸಂಜೀವ ನಾಯಕ್ ಸುಳ್ಯ, ಚಂದ್ರಶೇಖರ್ ಭಟ್ ಮುಂಡುಗಾರು, ದಯಾನಂದ ನಾಯಕ್ ಕುಂಟಿಕಾನ, ದೇವಕಿ ಎಚ್‌ ನಾಯಕ್‌ ವಾಗ್ಲೆ ಸಂಟ್ಯಾರು, ರಂಜಿತಾ ಆರ್‌ ಪ್ರಭು ಗೋಳಿತ್ತಡಿ, ಜಯರಾಮ ಪಿ., ಪ್ರಕಾಶ್‌ ಚಂದ್ರ ಪಿ., ಶ್ರೀಧರ್‌ ಪಿ., ಸುಬ್ರಹ್ಮಣ್ಯ ಕುಳೆದು, ಸುಳ್ಳಿ ರಾಧಕೃಷ್ಣ ನಾಯಕ್, ಸುನಿಲ್‌ ಬೋರ್ಕರ್‌ ಮತ್ತು ಅರುಣ ಅವರು ಚುನಾವಣಾ ಕಣದಲ್ಲಿದ್ದಾರೆ.

Advertisement

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು