ವಡೋದರಾ: ಇಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಏಕಪಕ್ಷೀಯವಾಗಿ ಗೆದ್ದು ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಈ ಸೀಸನ್‌ನಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ.
ಟಾಸ್ ಸೋತು ಬ್ಯಾಟ್ ಮಾಡಿದ ಆರ್‌ಸಿಬಿ, 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಬಾರಿಸಿತು. ತಂಡದ ಪರ ಗೌತಮಿ ನಾಯ್ಕ್ 55 ಬಾಲ್‌ಗಳಲ್ಲಿ 73 ರನ್ ಸಿಡಿಸುವ ಮೂಲಕ ಪ್ಲೇಯರ್ ಆಫ್ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು. 73 ರನ್‌ಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸ್ ಒಳಗೊಂಡಿದೆ.

ಇನ್ನುಳಿದಂತೆ, ಸ್ಮೃತಿ ಮಂಧಾನ 26, ರಿಚಾ ಘೋಷ್ 27, ನಾಡಿನ್ ಡಿ ಕ್ಲರ್ಕ್ 4, ರಾಧಾ ಯಾದವ್ 17, ಶ್ರೇಯಂಕಾ ಪಾಟೀಲ್ 8 (ಅಜೇಯ) ರನ್ ಬಾರಿಸಿದರೆ, ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೋಲ್ ತಲಾ 1 ರನ್ ಬಾರಿಸಿದರು. ಜೈಂಟ್ಸ್ ಪರ, ರೇಣುಕಾ ಸಿಂಗ್, ಸೋಫಿ ಡಿವೈನ್ ತಲಾ 1 ವಿಕೆಟ್ ಪಡೆದರೆ, ಆಶ್ಲೀ ಗಾರ್ಡ್ನರ್, ಕಾಶ್ವೀ ಗೌತಮ್ ತಲಾ 2 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: IND vs NZ: ಮಿಚೆಲ್, ಫಿಲಿಪ್ಸ್ ಆರ್ಭಟ, ಭಾರತದ ವಿರುದ್ಧ ಸರಣಿ ಗೆದ್ದ ನ್ಯೂಜಿಲ್ಯಾಂಡ್

179 ರನ್‌ಗಳ ಗುರಿ ಬೆನ್ನಟ್ಟಿದ ಜೈಂಟ್ಸ್, 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 117 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಆಶ್ಲೀ ಗಾರ್ಡ್ನರ್ ಅರ್ಧ ಶತಕ ಸಿಡಿಸಿದರು. 43 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸ್‌ನ ನೆರವಿನೊಂದಿಗೆ 54 ರನ್ ಬಾರಿಸಿದರು.
ಇನ್ನುಳಿದಂತೆ ಅನುಷ್ಕಾ ಬ್ರಿಜ್‌ಮೋಹನ್ ಶರ್ಮಾ 18, ಬೆತ್ ಮೂನಿ 3, ಕಾಶ್ವೀ ಗೌತಮ್ 4, ಜಾರ್ಜಿಯಾ ವೇರ್‌ಹ್ಯಾಮ್ 2, ಭಾರ್ತಿ ಫುಲ್ಮಾಲಿ 14, ತನುಜಾ ಕನ್ವರ್ 11, ರೇಣುಕಾ ಸಿಂಗ್ 6 ರನ್ ಬಾರಿಸಿದರೆ, ಕನಿಕಾ ಅಹುಜಾ ಮತ್ತು ಸೋಫಿ ಡಿವೈನ್ ಶೂನ್ಯ ಸುತ್ತಿದರು. ಆರ್‌ಸಿಬಿ ಪರ, ಸಯಾಲಿ ಸತ್ವರೆ 3, ನಾಡಿನ್ ಡಿ ಕ್ಲರ್ಕ್ 2, ಶ್ರೇಯಂಕಾ ಪಾಟೀಲ್, ಲಾರೆನ್ ಬೆಲ್, ರಾಧಾ ಯಾದವ್ ತಲಾ 1 ವಿಕೆಟ್ ಪಡೆದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

