Breaking News

UAE : ಬೃಹತ್ ವ್ಯಾಪಾರದ ಗುರಿಯೊಂದಿಗೆ ಭಾರತಕ್ಕೆ ಯುಎಇ ಅಧ್ಯಕ್ಷ ಭೇಟಿ, ಪ್ರಮುಖ ಒಪ್ಪಂದ ಅಂತಿಮ

ನವದೆಹಲಿ : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್ ಅವರು ಮೂರು ಗಂಟೆಗಳ ಸಂಕ್ಷಿಪ್ತ ಆದರೆ ಮಹತ್ವದ ಭಾರತ ಭೇಟಿಯನ್ನು ಪೂರ್ಣಗೊಳಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಕ್ಷಣೆ, ವ್ಯಾಪಾರ, ಇಂಧನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಹಲವು ಪ್ರಮುಖ ಒಪ್ಪಂದಗಳನ್ನು ಅಂತಿಮಗೊಳಿಸಿದರು.

ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಯುಎಇ ಅಧ್ಯಕ್ಷರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು ನನಗೆ ಸಂತೋಷ ನೀಡಿದೆ. ನಮ್ಮ ದೇಶಗಳ ನಡುವಿನ ಐತಿಹಾಸಿಕ ಹಾಗೂ ಗಾಢ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಸಿದ್ದೇವೆ. ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗಾಗಿ ಭಾರತ ಮತ್ತು ಯುಎಇ ಒಟ್ಟಾಗಿ ಕೆಲಸ ಮುಂದುವರಿಸುತ್ತವೆ, ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ನನ್ನ ಸಹೋದರ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್ ಅವರನ್ನು ಲೋಕ ಕಲ್ಯಾಣ್ ಮಾರ್ಗದಲ್ಲಿ ಆತಿಥ್ಯ ವಹಿಸಿದ್ದು ಸಂತೋಷ ತಂದಿದೆ. ಭಾರತ–ಯುಎಇ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಲವಾರು ವಿಷಯಗಳ ಕುರಿತು ನಾವು ಚರ್ಚೆ ನಡೆಸಿದ್ದೇವೆ, ಎಂದು ತಿಳಿಸಿದ್ದಾರೆ.

Advertisement

ಪ್ರಮುಖ ತಂತ್ರಜ್ಞಾನ ಮತ್ತು ಆರ್ಥಿಕ ಒಪ್ಪಂದಗಳು ;
ಮೂರು ಗಂಟೆಗಳ ಸಭೆಯಲ್ಲಿ, ಎರಡೂ ದೇಶಗಳು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲು ಮಹತ್ವಾಕಾಂಕ್ಷಿ ಕಾರ್ಯಯೋಜನೆ ರೂಪಿಸಿವೆ. 2032ರೊಳಗೆ ದ್ವೈಪಕ್ಷೀಯ ವ್ಯಾಪಾರವನ್ನು 200 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚಿಸಲು ಒಪ್ಪಂದ. (MSMEಗಳು, ಡಿಜಿಟಲ್ ಟ್ರೇಡ್ ಕಾರಿಡಾರ್ ಮತ್ತು ಹೊಸ ಮಾರುಕಟ್ಟೆ ಪ್ರವೇಶಕ್ಕೆ ಒತ್ತು), ತಂತ್ರಾತ್ಮಕ ರಕ್ಷಣಾ ಸಹಭಾಗಿತ್ವಕ್ಕೆ ಉದ್ದೇಶಪತ್ರ (Letter of Intent) ಸಹಿ – ಇದರಲ್ಲಿ ಅಡ್ವಾನ್ಸ್ ಟೆಕ್ನಾಲಜಿ, ಸೈಬರ್ ಸುರಕ್ಷತೆ, ವಿಶೇಷ ಸೇನಾ ಕಾರ್ಯಾಚರಣೆ, ತರಬೇತಿ ಮತ್ತು ಉಗ್ರವಾದ ವಿರೋಧಿ ಕ್ರಮಗಳು ಸೇರಿವೆ. HPCL ಮತ್ತು ADNOC ಗ್ಯಾಸ್ ನಡುವೆ ಎಲ್‌ಎನ್‌ಜಿ (LNG) ಸರಬರಾಜು ಒಪ್ಪಂದ, ನಾಗರಿಕ ಅಣುಶಕ್ತಿ ಸಹಕಾರ ವಿಸ್ತರಣೆಗೂ ಒಪ್ಪಂದ ಮಾಡಿರುವುದು ವರದಿಯಾಗಿದೆ.

ಗುಜರಾತ್‌ಗೆ ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ
ಗುಜರಾತ್‌ನ ಧೋಲೇರಾ ಪ್ರದೇಶ ಮತ್ತು GIFT Cityಗೆ ಸಂಬಂಧಿಸಿದಂತೆ ಮಹತ್ವದ ಹೂಡಿಕೆ ಚೌಕಟ್ಟು ರೂಪಿಸಲಾಗಿದೆ. ಈ ಯೋಜನೆಗಳಲ್ಲಿ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಗ್ರೀನ್‌ಫೀಲ್ಡ್ ಬಂದರು, ಸ್ಮಾರ್ಟ್ ನಗರ ಯೋಜನೆ, ರೈಲು ಸಂಪರ್ಕ, ಇಂಧನ ಮೂಲಸೌಕರ್ಯ ಅದರ ಜೊತೆಗೆ, ಭಾರತದಲ್ಲಿ ಡೇಟಾ ಸೆಂಟರ್‌ಗಳು, ಸೂಪರ್ ಕಂಪ್ಯೂಟಿಂಗ್ ಕ್ಲಸ್ಟರ್‌ಗಳು ಮತ್ತು ಹಣಕಾಸು ಸೇವೆಗಳ ಕ್ಷೇತ್ರದಲ್ಲೂ ಯುಎಇ ಹೂಡಿಕೆ ಪರಿಶೀಲಿಸಲಿದೆ.

ಇದನ್ನೂ ಓದಿ : Bellary: ಮಾಜಿ ಶಾಸಕ ಶ್ರೀರಾಮುಲು ವಿರುದ್ಧ ಪೋಕ್ಸೋ ಪ್ರಕರಣ

===

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು