ಶಾಲೆಯ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಹಾಯ ಹಸ್ತ : ರೋಟರಿ ಕ್ಲಬ್ ಬಿ.ಸಿ ರೋಡ್ ಘಟಕ

ಬಂಟ್ವಾಳ : ರೋಟರಿ ಕ್ಲಬ್ ನ ಬಿಸಿ ರೋಡ್ ಘಟಕವು ಶಾಲೆಯ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಯಾವಾಗಲೂ ಸಹಾಯ ಹಸ್ತವನ್ನು ನೀಡುತ್ತಲೇ ಇರುತ್ತದೆ. ಇದೀಗ ಸರಕಾರಿ ಪ್ರೌಢಶಾಲೆ ಕೊಯ್ಲಾದಲ್ಲಿ ಶಾಲಾ ಕಚೇರಿಗೆ ಅಗತ್ಯವಾಗಿರುವ ಒಂದು ಕಂಪ್ಯೂಟರ್, ಒಂದು ಯುಪಿಎಸ್ ಮತ್ತು ಒಂದು ಪ್ರಿಂಟರನ್ನು ಕೊಡುಗೆಯಾಗಿ ನೀಡಿದೆ.

ಈ ಕೊಡುಗೆಯನ್ನು ಬಂಟ್ವಾಳ ಮಾಮಂತೂರು ದಿವಂಗತ ರಾಮಣ್ಣ ರೈ ಅವರ ಸ್ಮರಣಾರ್ಥ ಅವರ ಪುತ್ರಿಯರಾದ ಶಿಲ್ಪ ರೈ ಹಾಗೂ ಕೃಪಾ ಶೆಟ್ಟಿ ಇವರು ರೋಟರಿ ಕ್ಲಬ್ ನ ಜೊತೆಗೂಡಿ ಶಾಲೆಗೆ ಹಸ್ತಾಂತರಿಸಿರುತ್ತಾರೆ.

Advertisement

ಇದನ್ನೂ ಓದಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಆಯ್ಕೆ

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಬಸ್ತಿ ಮಾಧವ ಶೆಣೈ, ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಬಾಳಿಗ, ರೊಟರಿಯನ್ ಹಾಗೂ ಮಾಜಿ ಅಧ್ಯಕ್ಷರಾದ ನಾರಾಯಣ ಹೆಗ್ಡೆ, ದಿವಂಗತ ರೊ.ರಾಮಣ್ಣ ರೈ ಅವರ ಪುತ್ರಿಯರು ಶ್ರೀಮತಿ ಶಿಲ್ಪಾ ರೈ ಹಾಗೂ ಕೃಪಾ ಶೆಟ್ಟಿ ಹಾಗೂ ಅಳಿಯ ದಿವೇಶ್ ಶೆಟ್ಟಿ,‌ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು, ನಿವೃತ್ತ ಶಿಕ್ಷಕರಾದ ರೊl ರಮೇಶ್ ಮಯ್ಯ ಉಪಸ್ಥಿತರಿದ್ದರು

Advertisement

ಇದನ್ನೂ ಓದಿ : ಸ್ವಸ್ತಿಕ್‌ ಪ್ರೀಮಿರ್‌ ಲೀಗ್-1‌ ಕ್ರಿಕೆಟ್‌ ಟೂರ್ನಮೆಂಟ್:‌ ನವೀನ್‌ ಶೆಟ್ಟಿ ತಂಡ ಚಾಂಪಿಯನ್

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು