Breaking News

Ticket Rate : ಮಂಗಳೂರು-ಕಾಸರಗೋಡು ಬಸ್ ಟಿಕೆಟ್ ದರ ಹೆಚ್ಚಳ !

ಮಂಗಳೂರು : ಮಂಗಳೂರು–ಕಾಸರಗೋಡು ಮಾರ್ಗದ ಕುಂಬಳ ಟೋಲ್ ಗೇಟ್‌ನಲ್ಲಿ ಅಧಿಕೃತವಾಗಿ ಟೋಲ್ ಸಂಗ್ರಹ ಆರಂಭವಾಗುವ ಮೊದಲೇ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಬಸ್‌ಗಳ ಟಿಕೆಟ್ ದರವನ್ನು ಹೆಚ್ಚಿಸಿದೆ. ಮಂಗಳವಾರ ಬೆಳಗ್ಗೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟೋಲ್ ಶುಲ್ಕವನ್ನು ಸೇರಿಸಿ ಪರಿಷ್ಕೃತ ದರ ವಸೂಲಿ ಮಾಡಲಾಗುತ್ತಿದೆ. ಆದರೆ ಇದೇ ಮಾರ್ಗದಲ್ಲಿ ಸಂಚರಿಸುವ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ–ಕೇರಳ) ಬಸ್‌ಗಳಲ್ಲಿ ಇದುವರೆಗೆ ಟಿಕೆಟ್ ದರ ಹೆಚ್ಚಳ ಮಾಡಿಲ್ಲ. ಈ ಹಿಂದೆ ಕುಂಭಳದಿಂದ ಮಂಗಳೂರುವರೆಗೆ ಟಿಕೆಟ್ ದರ ₹67 ಆಗಿದ್ದರೆ, ಇದೀಗ ಅದನ್ನು ₹75ಕ್ಕೆ ಹೆಚ್ಚಿಸಲಾಗಿದೆ. ರಾಜಹಂಸ ಸೇವೆಗಳ ಟಿಕೆಟ್ ದರವನ್ನು ₹80ರಿಂದ ₹90ಕ್ಕೆ ಹೆಚ್ಚಿಸಲಾಗಿದೆ.

ಸಾಮಾನ್ಯ ಕರ್ನಾಟಕ ಸಾರಿಗೆ ಬಸ್‌ಗಳ ಟಿಕೆಟ್ ದರವನ್ನು ₹7 ಹೆಚ್ಚಿಸಲಾಗಿದ್ದು, ಈ ಹೊಸ ದರಗಳನ್ನು ಮಂಗಳವಾರದಿಂದಲೇ ಜಾರಿಗೆ ತರಲಾಗಿದೆ. ಇದರಿಂದ ಪ್ರಯಾಣಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Advertisement

ಟೋಲ್ ವಿನಾಯಿತಿಗೆ ಮನವಿ

ಮನವಿಪತ್ರದಲ್ಲಿ, ಕಾಸರಗೋಡು–ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಬಸ್‌ಗಳು ಸಂಪೂರ್ಣವಾಗಿ ಸರ್ವೀಸ್ ರಸ್ತೆಗಳಲ್ಲಿ ಮಾತ್ರ ಸಂಚರಿಸುತ್ತಿದ್ದು, ಕುಂಬಳ ಟೋಲ್ ಗೇಟ್ ದಾಟುವ ಸಮಯ ಹೊರತುಪಡಿಸಿ ರಾಷ್ಟ್ರೀಯ ಹೆದ್ದಾರಿಯನ್ನು ಬಳಸುವುದೇ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಟೋಲ್ ವಿನಾಯಿತಿ ನೀಡದಿದ್ದಲ್ಲಿ, ಆರ್ಥಿಕ ಹೊರೆ ಪ್ರಯಾಣಿಕರ ಮೇಲೆ ಬಿದ್ದು ಟಿಕೆಟ್ ದರ ಹೆಚ್ಚಳ ಅನಿವಾರ್ಯವಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.

ಕೇರಳ ಬಸ್‌ಗಳಲ್ಲಿ ದರ ಏರಿಕೆ ಇಲ್ಲ
ಇದೇ ಮಾರ್ಗದಲ್ಲಿ ಕೇರಳ ಕೆಎಸ್‌ಆರ್‌ಟಿಸಿ ಬಸ್‌ಗಳೂ ಸಂಚರಿಸುತ್ತಿದ್ದರೂ, ಟೋಲ್ ಕಾರಣ ನೀಡಿ ಇನ್ನೂ ಟಿಕೆಟ್ ದರ ಹೆಚ್ಚಿಸಲಾಗಿಲ್ಲ.

ಇದನ್ನೂ ಓದಿ : Belthangady : ಸುಮಂತ್ ಸಾವು ಪ್ರಕರಣ: ಕುಟುಂಬಸ್ಥರ ನೆರವಿಗೆ ದಾವಿಸಿದ ಮೋಂತಿಮಾರು ಆರ್.ಎಸ್.ಬಿ. ಸಂಘ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು