Breaking News

WPL GG vs UP: ಸೋಫಿ ಡಿವೈನ್ ಅರ್ಧಶತಕ, ಯುಪಿ ವಾರಿಯರ್ಸ್‌ ವಿರುದ್ಧ‌ ಗೆದ್ದ ಗುಜರಾತ್

WPL GG vs UP Sophie Devine's half-century helps UP Warriors beat Gujarat Giants

ವಡೋದರ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರಿಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್‌ ವಿರುದ್ಧ ಗುಜರಾತ್ ಜೈಂಟ್ಸ್ ೪೫ ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ೨೦ ಓವರ್‌ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೧೫೩ ರನ್ ಕಲೆ ಹಾಕಿತು. ತಂಡದ ಪರ ಸೋಫಿ ಡಿವೈನ್ ಅವರು ಅರ್ಧಶತಕ ಸಿಡಿಸಿದರು. ಎದುರಿಸಿದ ೪೨ ಎಸೆತಗಳಲ್ಲಿ ೨ ಬೌಂಡರಿ ಹಾಗೂ ೩ ಸಿಕ್ಸರ್‌ಗಳನ್ನು ಸಿಡಿಸಿ ಒಟ್ಟು ೫೦ ರನ್ ಗಳಿಸಿ ಅಜೇಯರಾಗಿ ಉಳಿದರು.

Advertisement

ಇನ್ನುಳಿದಂತೆ, ಬೆತ್ ಮೂನಿ ೩೮, ಡ್ಯಾನಿ ವ್ಯಾಟ್ ಹಾಡ್ಜ್ ೧೪, ಅನುಷ್ಕಾ ಬ್ರಿಜ್‌ಮೋಹನ್ ಶರ್ಮಾ ೧೪, ಅಶ್ಲೀ ಗಾರ್ಡ್ನರ್ ೫, ಭಾರ್ತಿ ಫುಲ್ಮಾಲಿ ೫, ಕನಿಕಾ ಅಹುಜಾ ೬, ಕಾಶ್ವೀ ಗೌತಮ್ ೧೧, ರೇಣುಕಾ ಸಿಂಗ್ ೧ ರನ್ ಗಳಿಸಿದರು.

ಇದನ್ನೂ ಓದಿ: NZ vs IND T-20: ಅಭಿಷೇಕ್ ಅಬ್ಬರಕ್ಕೆ ಒಲಿದ ಜಯ

೧೫೪ ರನ್‌ಗಳ ಗುರಿ ಬೆನ್ನತ್ತಿದ ವಾರಿಯರ್ಸ್, ೧೭.೩ ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ೧೦೮ ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಫೋಬೆ ಲಿಚ್‌ಫೀಲ್ಡ್ ೩೨, ಕ್ಲೋಯ್ ಟ್ರಯಾನ್ ೩೦ ಹಾಗೂ ಮೆಗ್‌ಲ್ಯಾನಿಂಗ್ ೧೪ ರನ್ ಬಾರಿಸಿದರು. ಇನ್ನುಳಿದಂತೆ, ಹರ್ಲೀನ್ ಡಿಯೋಲ್ ೩, ದೀಪ್ತಿ ಶರ್ಮಾ ೪, ಶ್ವೇತಾ ಸೆಹ್ರಾವತ್ ೩, ಆಶಾ ಸೋಭಾನ ೭, ಸೋಫಿ ಎಕ್ಲೆಸ್ಟೋನ್, ಶಿಖಾ ಪಾಂಡೆ ಮತ್ತು ಕ್ರಾಂತಿ ಗೌಡ್ ತಲಾ ೧ ರನ್ ಬಾರಿಸಿದರು.

ಜೈಂಟ್ಸ್ ಪರ, ರಾಜೇಶ್ವರಿ ಗಾಯಕ್ವಾಡ್ ೩ ವಿಕೆಟ್ ಕಬಳಿಸಿದರೆ, ರೇಣುಕಾ ಸಿಂಗ್ ಮತ್ತು ಸೋಫಿ ಡಿವೈನ್ ತಲಾ ೨ ವಿಕೆಟ್ ಪಡೆದರು, ಕಾಶ್ವೀ ಗೌತಮ್, ಅಶ್ಲೀ ಗಾರ್ಡ್ನರ್ ತಲಾ ೧ ವಿಕೆಟ್ ಪಡೆದರು. ವಾರಿಯರ್ಸ್ ಪರ ಕ್ರಾಂತಿಗೌಡ ಮತ್ತು ಸೋಫಿ ಎಕ್ಲೆಸ್ಟೋನ್ ತಲಾ ೨ ವಿಕೆಟ್ ಪಡೆದರೆ, ದೀಪ್ತಿ ಶರ್ಮಾ, ಕ್ಲೋಯ್ ಟ್ರಯಾನ್ ತಲಾ ೧ ವಿಕೆಟ್ ಪಡೆದರು. ರಾಜೇಶ್ವರಿ ಗಾಯಕ್ವಾಡ್‌ ಪ್ಲೇಯರ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿ ಪಡೆದುಕೊಂಡರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು