ಬೆಂಗಳೂರು : ಭಾರತದ ಐಟಿ ರಾಜಧಾನಿ ಎಂದೇ ಕರೆಸಿಕೊಳ್ಳುವ ಬೆಂಗಳೂರು, ಈಗ ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚು ಟ್ರಾಫಿಕ್ ದಟ್ಟಣೆ ಹೊಂದಿದ ನಗರ ಎಂಬ ಅಹಿತಕರ ದಾಖಲೆ ಬರೆದಿದೆ. 2023ರಲ್ಲಿ ಆರನೇ ಸ್ಥಾನದಲ್ಲಿದ್ದ ಬೆಂಗಳೂರು, 2024ರಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದು, ಇದೀಗ 2025ರಲ್ಲಿ ನೇರವಾಗಿ ಎರಡನೇ ಸ್ಥಾನಕ್ಕೇರಿದೆ. ರಾಜ್ಯ ಸರ್ಕಾರ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಬೆಂಗಳೂರನ್ನು “ಭವಿಷ್ಯದ ನಗರ” ಎಂದು ಪ್ರಚಾರ ಮಾಡುತ್ತಿದ್ದರೂ, ದಿನನಿತ್ಯ ಟ್ರಾಫಿಕ್‌ನಲ್ಲಿ ಸಿಲುಕುತ್ತಿರುವ ನಾಗರಿಕರಿಗೆ ಇದು ಭಿನ್ನವಾದ ಅನುಭವವಾಗಿದೆ.
ಪೀಕ್ ಅವರ್‌ನಲ್ಲಿ ಸಂಚಾರ ಗತಿ ಕುಸಿತ
ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಪೀಕ್ ಅವರ್ ಸಮಯದಲ್ಲಿ ಸಂಚಾರದ ವೇಗ ಮತ್ತಷ್ಟು ಕುಸಿತ ಕಂಡಿದೆ. ಪ್ರಸ್ತುತ 10 ಕಿ.ಮೀ ದೂರವನ್ನು ತಲುಪಲು ಸರಾಸರಿ 36 ನಿಮಿಷಕ್ಕಿಂತ ಹೆಚ್ಚು ಸಮಯ ಬೇಕಾಗುತ್ತಿದೆ. ಇದರಿಂದ ದಿನನಿತ್ಯದ ಕಚೇರಿ ಮತ್ತು ವ್ಯಾಪಾರ ಪ್ರಯಾಣವೂ ಜನರಿಗೆ ದೊಡ್ಡ ಸಮಯ ನಷ್ಟವಾಗಿ ಪರಿಣಮಿಸಿದೆ.
ವರ್ಷಕ್ಕೆ 168 ಗಂಟೆಗಳ ಸಮಯ ಟ್ರಾಫಿಕ್‌ಗೆ ಬಲಿ ; ಬೆಂಗಳೂರಿನ ಸರಾಸರಿ ಪ್ರಯಾಣಿಕರು ವರ್ಷಕ್ಕೆ 168 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಕಳೆದುಕೊಳ್ಳುತ್ತಿದ್ದಾರೆ. ಇದು ದಿನಕ್ಕೆ ಎರಡು ಬಾರಿ 10 ಕಿ.ಮೀ ದೂರವನ್ನು ಪೀಕ್ ಅವರ್‌ನಲ್ಲಿ ಪ್ರಯಾಣಿಸುವವರ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ.

168 ಗಂಟೆಗಳು ಎಂದರೆ, 10,080 ನಿಮಿಷಗಳು ಅಥವಾ ಸುಮಾರು ಏಳು ಸಂಪೂರ್ಣ ದಿನಗಳು ಅಂದರೆ, ಒಂದು ವರ್ಷದಲ್ಲಿ ಒಂದು ವಾರದಷ್ಟು ಅಮೂಲ್ಯ ಸಮಯವನ್ನು ನಾಗರಿಕರು ಕೇವಲ ರಸ್ತೆ ಮೇಲೆಯೇ ಕಳೆದುಕೊಳ್ಳುತ್ತಿರುವ ಸ್ಥಿತಿ ಉಂಟಾಗಿದೆ. ಮೇ 17: 2025ರ ಅತ್ಯಂತ ಕೆಟ್ಟ ಟ್ರಾಫಿಕ್ ದಿನ 2025ರ ಮೇ 17 (ಶನಿವಾರ) ರಂದು ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಗರಿಷ್ಠ ಮಟ್ಟ ತಲುಪಿದ್ದು, ಅದು 101% ಎಂದು ದಾಖಲಾಗಿದೆ. ಆ ದಿನ ಸಂಜೆ ಪೀಕ್ ಅವರ್‌ನಲ್ಲಿ ಕೇವಲ 2.5 ಕಿ.ಮೀ ಸಾಗಲು 15 ನಿಮಿಷಗಳ ಸಮಯ ಬೇಕಾಯಿತು. ಇದಕ್ಕೆ ಭಾರೀ ಮಳೆ, ಮರಗಳ ಕುಸಿತ ಹಾಗೂ ಹಾಳಾದ ಮೂಲಸೌಕರ್ಯ ಈ ತೀವ್ರ ಸಂಚಾರ ದಟ್ಟಣೆಗೆ ಪ್ರಮುಖ ಕಾರಣಗಳಾಗಿದ್ದವು.
ಇದನ್ನೂ ಓದಿ : ಪುತ್ತೂರು: 31ರೊಳಗೆ ಮದುವೆ ನಡೆಯದಿದ್ದರೆ ಫೆ.7ರಂದು ನಾಮಕರಣ – ಪ್ರತಿಭಾ ಕುಳಾಯಿ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

