ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚೊಚ್ಚಲ ಚುನಾವಣೆಯಲ್ಲಿ ಸತೀಶ್ಚಂದ್ರ ಎಸ್. ಆರ್. ನೇತೃತ್ವದ ತಂಡ 12 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.
ಸಹಕಾರಿಯ ಆಡಳಿತ ಮಂಡಳಿಯ ಒಟ್ಟು 12 ಸ್ಥಾನಗಳಿಗೆ ಸತೀಶ್ಚಂದ್ರ ನೇತೃತ್ವದ ತಂಡದಿಂದ 12 ಮಂದಿ ಹಾಗೂ ಸುನಿಲ್ ಬೋರ್ಕರ್ ತಂಡದಿಂದ 7 ಮಂದಿ ಕಣಕ್ಕಿಳಿದಿದ್ದರು. ಈ ಪೈಕಿ ಹಿಂದುಳಿದ (2A) ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆ ಉಮೇಶ್ ಪ್ರಭು ಕುಂಟಿಹಿತ್ಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಆ ಮೂಲಕ ಸತೀಶ್ಚಂದ್ರ ತಂಡಕ್ಕೆ ಮೊದಲ ಗೆಲುವು ಸಿಕ್ಕಿತ್ತು.

ಉಳಿದ 11 ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಸತೀಶ್ಚಂದ್ರ ನೇತೃತ್ವದ ತಂಡದ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ತಂಡದ ಎದುರಾಳಿ ಸ್ಪರ್ಧಿಗಳಾಗಿ ಸುನಿಲ್ ಬೋರ್ಕರ್ ನೇತೃತ್ವದಲ್ಲಿ ಕಣಕ್ಕಿಳಿದ 7 ಮಂದಿ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಚುನಾವಣಾಧಿಕಾರಿ ತ್ರಿವೇಣಿ ಅವರು ಫಲಿತಾಂಶ ಘೋಷಿಸಿದರು.
ಒಟ್ಟು ಮತಚಲಾವಣೆ: 1039

ಸತೀಶ್ಚಂದ್ರ ತಂಡದ ಅಭ್ಯರ್ಥಿಗಳು ಪಡೆದ ಮತಗಳು
ಸತೀಶ್ಚಂದ್ರ ಎಸ್.ಆರ್- 807
ಹರೀಶ್ ಬೋರ್ಕರ್ ಕತ್ತಲಕಾನ- 720
ರಾಜಗೋಪಾಲ್ ಬಾಳೆಗುಳಿ- 742
ರವೀಶ ಪೊಸವಳಿಕೆ- 785
ವಿ.ವಸಂತ ಶಂಕರ್- 820
ವೇದವ್ಯಾಸ ಕಟ್ಟೆ- 773
ಸಂಜೀವ ನಾಯಕ್ ಸುಳ್ಯ- 750
ಚಂದ್ರಶೇಖರ ಭಟ್ ಮುಂಡುಗಾರು- 831
ದಯಾನಂದ ನಾಯಕ್ ಕುಂಟಿಕಾನ- 773
ದೇವಕಿ ಎಚ್. ನಾಯಕ್ ವಾಗ್ಲೆ ಸಂಟ್ಯಾರು- 769
ರಂಜಿತಾ ಆರ್. ಪ್ರಭು ಗೊಳಿತ್ತಡಿ- 796
ಸುನಿಲ್ ಬೋರ್ಕರ್ ತಂಡದ ಅಭ್ಯರ್ಥಿಗಳು ಪಡೆದ ಮತಗಳು
ಸುನಿಲ್ ಬೋರ್ಕರ್ ಮುಂಡಕೊಚ್ಚಿ- 270
ಸುಬ್ರಹ್ಮಣ್ಯ ಕೆ.- 188
ಎಸ್.ರಾಧಾಕೃಷ್ಣ ನಾಯಕ್ ದಾಸನಕಜೆ- 242
ಜಯರಾಮ್ ಪಿ.- 264
ಪ್ರಕಾಶ್ ಪಂಜಿಗಾರು- 237
ಶ್ರೀಧರ್ ಪಿ.- 201
ಅರುಣ ಎಸ್- 324

