Breaking News

Puttur Kambala: ಪ್ರಸಿದ್ಧ ಪುತ್ತೂರು ಕಂಬಳದ ಫಲಿತಾಂಶ ಇಲ್ಲಿದೆ

Here are the results of the Puttur Kambala

ಪುತ್ತೂರು: 33ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ತೆರೆಬಿದ್ದಿದೆ. ಜ.24ರಂದು ಆರಂಭವಾದ ಕಂಬಳವು ಜ.25ರಂದು ತಡರಾತ್ರಿ ಮುಕ್ತಾಯಗೊಂಡಿತು. ಸ್ಪರ್ಧೆಯಲ್ಲಿ ಒಟ್ಟು 157 ಜೊತೆ ಕೋಣಗಳು ಭಾಗವಹಿಸಿದ್ದವು. ವಿಜೇತ ತಂಡಗಳ ಹೆಸರು ಇಲ್ಲಿದೆ.

ಕನಹಲಗೆ

Advertisement

ಕನಹಲಗೆ ಸ್ಪರ್ಧೆಯಲ್ಲಿ ಒಟ್ಟು 9 ಜೊತೆ ಕೋಣಗಳು ಭಾಗವಹಿಸಿದ್ದು, ಈ ಪೈಕಿ ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ ಅವರು ಓಡಿಸಿದ ಬೈಂದೂರು ಸಸಿಹಿತ್ಲು ವೆಂಕಟಪೂಜಾರಿ ಅವರ ಹಾಗೂ ತೆಕ್ಕಟೆ ಸುಧೀರ್ ದೇವಾಡಿಗ ಅವರು ಓಡಿಸಿದ ಬೋಳೀರ ತ್ರಿಶಾಲ್ ಕೆ.ಪೂಜಾರಿ ಅವರ ಕೋಣಗಳು ಆರೂವರೆ ಕೋಲು ನಿಶಾನೆಗೆ ನೀರು ಚಿಮ್ಮಿಸಿವೆ.

ಹಗ್ಗ ಹಿರಿಯ

ಹಗ್ಗ ಹಿರಿಯದಲ್ಲಿ 18 ಜೊತೆ ಕೋಣಗಳು ಭಾಗವಹಿಸಿದ್ದು, ಚೆನ್ನಯ ಕರೆಯಲ್ಲಿ ಬಾರಾಡಿ ನತೇಶ್ ಸಪಲಿಗ ಓಡಿಸಿದ ಅತ್ತೂರು ಮನ್ಮಥ ಜೆ.ಶೆಟ್ಟಿ ಬಿ. ರವರ ಕೋಣಗಳು ಪ್ರಥಮ ಸ್ಥಾನ ಪಡೆದರೆ, ಕೋಟಿ ಕರೆಯಲ್ಲಿ ಕಕ್ಕೆ ಪದವು ಪೆಂರ್ಗಾಲು ಕೃತಿಕ್ ಗೌಡ ಓಡಿಸಿದ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್‌ರವರ ಕೋಣಗಳು ದ್ವಿತೀಯ ಪ್ರಶಸ್ತಿ ಪಡೆಯಿತು.

ಹಗ್ಗ ಕಿರಿಯ

ಹಗ್ಗ ಕಿರಿಯ ವಿಭಾಗದಲ್ಲಿ 25 ಜೊತೆ ಕೋಣಗಳು ಭಾಗವಹಿಸಿದ್ದು ಅದರಲ್ಲಿ ಕೋಟಿ ಕರೆಯಲ್ಲಿ ಕಡಂದಲೆ ರೋಹಿತ್ ಪಾಣಾರ ಓಡಿಸಿದ ಕಡಂದಲೆ ಮೂಡಾಯಿಬೆಟ್ಟು ವಿಶ್ವನಾಥ ನಿವಾಸ ಕಾಳು ಪಾಣರರವರ ಕೋಣಗಳು ಪ್ರಥಮ ಪಡೆದರೆ, ಚೆನ್ನಯ ಕರೆಯಲ್ಲಿ ಮಂದಾರ್ತಿ ಶೀರೂರು ಮುದ್ದುಮನೆ ಭರತ್ ನಾಯ್ಕ ಅವರು ಓಡಿಸಿದ ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿರವರ ಕೋಣಗಳು ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: ಪುತ್ತೂರು ಕಂಬಳ : 125ಮೀ ಓಡಿ ಗಮನ ಸೆಳೆದ ಸುಳ್ಯದ 73ರ ವೃದ್ಧ

ಅಡ್ಡಹಲಗೆ

ಅಡ್ಡ ಹಲಗೆಯಲ್ಲಿ 6 ಜೊತೆ ಕೋಣಗಳು ಭಾಗವಹಿಸಿದ್ದು, ಅದರಲ್ಲಿ ಚೆನ್ನಯ ಕರೆಯಲ್ಲಿ ಭಟ್ಕಳ ಹರೀಶ್ ಓಡಿಸಿದ ನಾರಾವಿ ರಕ್ಷಿತ್ ಜೈನ್‌ರವರ ಕೋಣಗಳು ಪ್ರಥಮ, ಕೋಟಿ ಕರೆಯಲ್ಲಿ ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ ಓಡಿಸಿದ ಉಡುಪಿ ಕೊರಂಗ್ರಪ್ಪಾಡಿ ಪಡುಮನೆ ವೀರ್‌ಕರ್ಣ ಪ್ರಭಾಕರ ಹೆಗ್ಡೆರವರ ಕೋಣಗಳು ದ್ವಿತೀಯ ಪ್ರಶಸ್ತಿ ಪಡೆದುಕೊಂಡಿವೆ.

ನೇಗಿಲು ಹಿರಿಯ

ನೇಗಿಲು ಹಿರಿಯದಲ್ಲಿ 24 ಜೊತೆ ಕೋಣಗಳು ಭಾಗವಹಿಸಿದ್ದು, ಚೆನ್ನಯ ಕರೆಯಲ್ಲಿ ಕುಂದಾಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್ ಓಡಿಸಿದ ಮಾಣಿ ನಾಗರಾಜ ಶೆಟ್ಟಿ ಬಿ. ರವರ ಕೋಣಗಳು ಪ್ರಥಮ ಹಾಗೂ ಕೋಟಿ ಕರೆಯಲ್ಲಿ ಸೂರಾಲು ಪ್ರದೀಪ್ ನಾಕ್ ಓಡಿಸಿದ ಮಾಣಿ ನಾಗರಾಜ್ ಶೆಟ್ಟಿ ಎ. ರವರ ಕೋಣಗಳು ದ್ವಿತೀಯ ಸ್ಥಾನ ಪಡೆಯಿತು.

ನೇಗಿಲು ಕಿರಿಯ

ನೇಗಿಲು ಕಿರಿಯದಲ್ಲಿ 25 ಜೊತೆ ಕೋಣಗಳು ಭಾಗವಹಿಸಿದ್ದು, ಚೆನ್ನಯ ಕರೆಯಲ್ಲಿ ವರು ಪಡು ಸಾಂತೂರು ಪ್ರಥ್ವಿ ರಾಜ್ ಪೂಜಾರಿ ಓಡಿಸಿದ ಶ್ರೀ ಪಂಚಲಿಂಗೇಶ್ವರ ಉರುವಾಲು ನಾಕಳಗುತ್ತು ಸದಾನಂದ ಗೌಡರವರ ಕೋಣಗಳು ಪ್ರಥಮ, ಕೋಟಿ ಕರೆಯಲ್ಲಿ ಕುಂದಿ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್ ಓಡಿಸಿದ ಮುನಿಯಾಲು ಉದಯ ಕುಮಾರ್ ಶೆಟ್ಟಿರವರ ಕೋಣಗಳು ದ್ವಿತೀಯ ಪ್ರಶಸ್ತಿ ಪಡೆದುಕೊಂಡಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು