ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಆಚರಣೆಗಳಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇಂದು ಕೆಂಪುಕೋಟೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೋದಿ ಅವರು ರಾಜಸ್ಥಾನಿ ಶೈಲಿಯಲ್ಲಿ ಮಿಂಚಿದ್ದಾರೆ.
ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಗಳಂದು ಮೋದಿ ಅವರು ವಿಶೇಷವಾಗಿ ಕಾಣಿಸಿಕೊಳ್ಳುವ ಮೂಲಕ ಭಾರತದ ಸಾಂಪ್ರದಾಯಿಕ ಉಡುಗೆ ತೊಡುಗೆ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಪ್ರಾದೇಶಿಕ ಪರಂಪರೆಯನ್ನು ಜಗತ್ತಿಗೆ ಪಸರಿಸುತ್ತಿದ್ದಾರೆ.

ಇದನ್ನೂ ಓದಿ: 2026ರ ಗಣರಾಜ್ಯೋತ್ಸವ: ಸಂವಿಧಾನದ ಹೆಮ್ಮೆ ಮತ್ತು ಭಾರತದ ಏಕತೆಯ ಪ್ರತೀಕ
ಹೌದು, ಈ ಬಾರಿ ರಾಜಸ್ಥಾನಿ ಶೈಲಿಯ ಸಫಾ ಅಥವಾ ಪಗ್ಡಿ ಎಂದು ಕರೆಯುವ ಗಾಢ ಕೆಂಪು, ಸಾಸಿವೆ ಹಳದಿ ಮತ್ತು ಹಸಿರು ಬಣ್ಣಗಳನ್ನೊಳಗೊಂಡ ಪೇಟವನ್ನು ಧರಿಸಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸಿದ್ದಾರೆ.
ಕಳೆದ ವರ್ಷದ ಗಣರಾಜ್ಯೋತ್ಸವದಂದು ಮೋದಿ ಅವರು ಕಂದು ಬಣ್ಣದ ಪೂರ್ಣ ತೋಳಿನ ಬಂಧಗಲಾ, ಬಹು ಬಣ್ಣದ ಪೇಟ ಧರಿಸಿದ್ದರು. 2024ರಲ್ಲಿ ಬಹು ವರ್ಣದ ರಾಜಸ್ಥಾನಿ ಪೇಟವನ್ನು ಧರಿಸಿದ್ದರು. 2022ರಲ್ಲಿ ಉತ್ತರಾಖಂಡದ ಸಾಂಪ್ರದಾಯಿಕ ಟೋಪಿ ಧರಿಸಿದ್ದರು. 2021ರಲ್ಲಿ ಗುಜರಾತ್ನ ಜಾಮ್ನಗರದ ರಾಜಮನೆತನದಿಂದ ಉಡುಗೊರೆಯಾಗಿ ನೀಡಿದ್ದ ಬೂದು ಬಣ್ಣದ ಜಾಕೆಟ್, ಕುರ್ತಾ ಮತ್ತು ಪೈಜಾಮ ಧರಿಸಿದ್ದರು.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

