ಹಳೆಯ ವರುಷಕ್ಕೆ ವಿದಾಯ ಹೇಳಿ ಹೊಸ ವರುಷವನ್ನು ಸಂಭ್ರಮದಿಂದ ಆಚರಿಸುತ್ತಿರುವ ಬೈಕ್ ಪ್ರೇಮಿಗಳಿಗೆ ಬಿಗ್ ಶಾಕ್ ನೀಡಲು ಟ್ರಯಂಪ್ ಮೋಟರ್ ಸೈಕಲ್ಸ್ ಸಜ್ಜಾಗಿದೆ.
1902 ರಲ್ಲಿ ಸ್ಥಾಪನೆಯಾದ ಟ್ರಯಂಪ್ ಮೋಟಾರ್ ಸೈಕಲ್ಸ್ 120 ವರ್ಷಗಳ ಇತಿಹಾಸವನ್ನು ಹೊಂದಿದೆ. ಯು.ಕೆ., ಥೈಲ್ಯಾಂಡ್, ಬ್ರೆಜಿಲ್ ಮತ್ತು ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಇದು ಹೊಂದಿದೆ. 2023ರಲ್ಲಿ ಟ್ರಯಾಂಪ್ ಬಚಾವು ಆಟೋ ಜೊತೆಗೆ ಪಾಲುದಾರಿಕೆಯಲ್ಲಿ ಭಾರತವನ್ನು ಪ್ರವೇಶ ಮಾಡಿತ್ತು.

ಜಾಗತಿಕ ಮಟ್ಟದಲ್ಲಿ ಮೋಟಾರ್ ಸೈಕಲ್ ಬ್ರಾಂಡ್ ಆಗಿರುವ ಟ್ರಯಂಪ್ ಮೋಟರ್ ಸೈಕಲ್ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮಾಡೆಲ್‌ಗಳ ಬೆಲೆ ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದೆ.
ಟ್ರಯಂಪ್ ಸ್ಪೀಡ್ 400 ಮತ್ತು ಸ್ಪೀಡ್ ಟಿ4 ಬೈಕ್ ಗಳ ಮೇಲೆ ವಿಶೇಷ ಹಬ್ಬದ ಬೆಲೆಯನ್ನು ಕೂಡ ನೀಡಿತ್ತು. ಆದರೆ ಇದೀಗ ಹೊಸ ವರ್ಷಕ್ಕೆ ಬೆಲೆ ಏರಿಸಲು ಸಜ್ಜಾಗಿದೆ.
ಬೆಲೆ ಏರಿಕೆ ಎಷ್ಟು ಎಂಬುದರ ಬಗ್ಗೆ ಟ್ರಯಂಪ್ ಮೋಟರ್ ಸೈಕಲ್ ಹಂಚಿಕೊಂಡಿಲ್ಲ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೌಲ್ಯ ಕುಸಿತವು ಬೆಲೆ ಏರಿಕೆಗೆ ಕಾರಣವಾಗಿದೆ ಎಂಬ ಮಾಹಿತಿ ಮೂಲಗಳು ತಿಳಿಸಿವೆ.

