ಮುಂಬೈನ ಕಫ್ ಪರೇಡ್ ಪ್ರದೇಶದಲ್ಲಿ ಅತ್ಯಂತ ಅವಮಾನಿಯ ಘಟನೆಯೊಂದು ನಡೆದಿದೆ. ಇಡೀ ಮನುಷ್ಯ ಜನ್ಮವೇ ತಲೆ ತಗ್ಗಿಸುವ ಘಟನೆಗೆ ಮುಂಬೈ ಸಾಕ್ಷಿಯಾಗಿದೆ. 20 ವರ್ಷದ ಮೂಕ ಮತ್ತು ಕಿವುಡ ಯುವತಿ (ವಿಕಲಚೇತನ)ಯನ್ನು ಅತ್ಯಾಚಾರ ಎಸಗಿದ್ದಾರೆ. 2025ರ ಸೆಪ್ಟೆಂಬರ್‌ನಲ್ಲಿ ಯುವತಿಯು ತನ್ನ ಅಜ್ಜಿಯ ಬಳಿ ಹೊಟ್ಟೆ ನೋವಿನ ಬಗ್ಗೆ ಹೇಳಿದ್ದಾಳೆ. ಆಕೆಯನ್ನು ಮುಂಬೈನ ಕಾಮಾ ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಐದು ತಿಂಗಳ ಗರ್ಭಿಣಿ ಎಂಬ ವಿಷಯ ಬೆಳಕಿಗೆ ಬಂದಿತ್ತು. ಆಸ್ಪತ್ರೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಯುವತಿಗೆ ಮಾತನಾಡಲು ಬಾರದ ಕಾರಣ ಹಾಗೂ ಕಿವಿ ಕೇಳದ ಕಾರಣ, ಆಕೆ ಸಂಜ್ಞೆಗಳ ಮೂಲಕ ಸ್ಪಷ್ಟವಾಗಿ ಮಾಹಿತಿ ನೀಡದ ಕಾರಣ ಪೊಲೀಸರಿಗೆ ಆರೋಪಿಯನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು.ಪೊಲೀಸರು ಈ ಪ್ರಕರಣದಲ್ಲಿ ಕುಟುಂಬದವರು, ನೆರೆಹೊರೆಯವರು ಸೇರಿದಂತೆ ಸುಮಾರು 17 ಜನ ಶಂಕಿತ ಪುರುಷರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದರು. ಜನವರಿ 27, 2026 ರಂದು ಬಂದ ವಿಧಿವಿಜ್ಞಾನ ವರದಿಯಲ್ಲಿ, ಭ್ರೂಣದ ಡಿಎನ್‌ಎ ಯುವತಿಯ ಸ್ವಂತ ತಂದೆಯ ಡಿಎನ್‌ಎಗೆ ಹೊಂದಿಕೆಯಾಗಿದೆ.

ಡಿಎನ್‌ಎ ವರದಿ ಬಂದ ನಂತರ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಆರಂಭದಲ್ಲಿ ಆತ ತನ್ನ ಮಗಳ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ವಾದಿಸಿದ್ದಲ್ಲದೆ, ದೂರು ದಾಖಲಿಸಲು ನಿರಾಕರಿಸಿದ್ದ. ಆದರೆ ವೈಜ್ಞಾನಿಕ ಸಾಕ್ಷ್ಯವು ಆತನ ಕೃತ್ಯವನ್ನು ಸಾಬೀತುಪಡಿಸಿದೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪೋಕ್ಸೋ (POCSO) ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಲಾಗಿದೆ.ಈ ಘಟನೆಯು ಸಮಾಜದಲ್ಲಿ ರಕ್ಷಕರೇ ಭಕ್ಷಕರಾಗುತ್ತಿರುವ ಕ್ರೌರ್ಯಕ್ಕೆ ಕನ್ನಡಿ ಹಿಡಿದಿದೆ. ಮುಂಬೈ ಪೊಲೀಸರು ಈ ವೈಜ್ಞಾನಿಕ ತನಿಖೆಯ ಮೂಲಕ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

