Breaking News

ವ್ಯಕ್ತಿಗೆ ಡಿಕ್ಕಿ ಹೊಡೆದು ಅರ್ಧ ಕಿ.ಮೀ. ದೂರದವರೆಗೆ ಎಳೆದೊಯ್ದ ಕಾರು ಚಾಲಕ

Bengaluru Car Accident Viral video G1 News Photo

ಬೆಂಗಳೂರಿನಲ್ಲಿ ಮತ್ತೊಂದು ಭಯಾನಕ ರಸ್ತೆ ಗಲಾಟೆ (Road Rage) ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಕಾರಿನ ಬಾನೆಟ್ ಮೇಲೆ ಸುಮಾರು ಅರ್ಧ ಕಿಲೋಮೀಟರ್ ದೂರದವರೆಗೆ ಎಳೆದೊಯ್ದ ಘಟನೆ ನಡೆದಿದೆ. ಬೆಂಗಳೂರಿನ ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಮದ್ರಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಒಂದು ಸರಕು ಸಾಗಣಿಕಾ ವಾಹನ ಮತ್ತು ಎಸ್‌ಯುವಿ (SUV) ಕಾರಿನ ನಡುವೆ ಸಣ್ಣದಾಗಿ ವಾಹನ ಟಚ್ ಆಗಿತ್ತು. ಈ ವಿಚಾರವಾಗಿ ಇಬ್ಬರು ಚಾಲಕರ ನಡುವೆ ತೀವ್ರ ವಾಗ್ವಾದ ನಡೆದಿದೆ.

ವಾಗ್ವಾದದ ವೇಳೆ ಕಾರು ಹೋಗುವುದನ್ನು ತಡೆಯಲು ಸರಕು ವಾಹನದ ಚಾಲಕ ಎಸ್‌ಯುವಿ ಕಾರಿನ ಬಾನೆಟ್ ಮೇಲೆ ಹತ್ತಿದ್ದಾನೆ. ಆದರೆ, ಆಕ್ರೋಶಗೊಂಡ ಎಸ್‌ಯುವಿ ಚಾಲಕ ಕಾರನ್ನು ನಿಲ್ಲಿಸದೆ ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಆತನನ್ನು ಬಾನೆಟ್ ಮೇಲೆಯೇ ಹೊತ್ತೊಯ್ದಿದ್ದಾನೆ.ವಾಗ್ವಾದದ ವೇಳೆ ಕಾರು ಹೋಗುವುದನ್ನು ತಡೆಯಲು ಸರಕು ವಾಹನದ ಚಾಲಕ ಎಸ್‌ಯುವಿ ಕಾರಿನ ಬಾನೆಟ್ ಮೇಲೆ ಹತ್ತಿದ್ದಾನೆ. ಆದರೆ, ಆಕ್ರೋಶಗೊಂಡ ಎಸ್‌ಯುವಿ ಚಾಲಕ ಕಾರನ್ನು ನಿಲ್ಲಿಸದೆ ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಆತನನ್ನು ಬಾನೆಟ್ ಮೇಲೆಯೇ ಹೊತ್ತೊಯ್ದಿದ್ದಾನೆ.

Advertisement

ಇದನ್ನೂ ಓದಿ: 1 ಸಾವಿರ ರೂ.ಗೆ ಪತ್ನಿಯನ್ನೇ ಮಾರಿದ ಪತಿ! ಬಳಿಕ ನಡೆದಿದ್ದೇ ಅಮಾನವೀಯ ಕೃತ್ಯ

ದಾರಿಹೋಕರು ಈ ಭಯಾನಕ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋದಲ್ಲಿ ವ್ಯಕ್ತಿ ಜೀವ ಉಳಿಸಿಕೊಳ್ಳಲು ಬಾನೆಟ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದು ಮತ್ತು ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಸನ್ನೆ ಮಾಡುತ್ತಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಸ್‌ಯುವಿ ಕಾರನ್ನು ಜಪ್ತಿ ಮಾಡಿದ್ದಾರೆ ಮತ್ತು ಚಾಲಕನನ್ನು ಬಂಧಿಸಿದ್ದಾರೆ. ಇಂತಹ ರಸ್ತೆ ಗಲಾಟೆಗಳ ವಿರುದ್ಧ ಶೂನ್ಯ ಸಹಿಷ್ಣುತೆ (Zero Tolerance) ಹೊಂದಿದ್ದು, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಈಸ್ಟ್ (DCP East) ಎಚ್ಚರಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು