Breaking News

International : ಯೆಮೆನ್‌ನಲ್ಲಿ ವೈಮಾನಿಕ ದಾಳಿ : ಹಲವು ಯೋಧರ ಸಾವು

ಯೆಮೆನ್ : ರಿಯಾದ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಬೆಂಬಲಿತ ಪ್ರತ್ಯೇಕತಾವಾದಿ ಗುಂಪಿನ ನಡುವಿನ ಉದ್ವಿಗ್ನತೆಯ ತೀವ್ರತೆಯನ್ನು‌ಹೆಚ್ಚಿಸಿದ್ದು ಅಬುಧಾಬಿ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಬೆನ್ನಲ್ಲೇ ದಾಳಿಗಳು ನಡೆದಿದ್ದು, ಹಲವು ಸಾವು ನೋವುಗಳ ಬಗ್ಗೆ ವರದಿಯಾಗಿದೆ.

ಕನಿಷ್ಠ 20 ಹೋರಾಟಗಾರರು ಮೃತ ;

Advertisement

ಸೌದಿ ಅರೇಬಿಯಾ ನೇತೃತ್ವದ ಒಕ್ಕೂಟದ ವೈಮಾನಿಕ ದಾಳಿಯಿಂದ ಯೆಮೆನ್‌ನ ದಕ್ಷಿಣ ಪರಿವರ್ತನಾ ಮಂಡಳಿಯ ಕನಿಷ್ಠ 20 ಹೋರಾಟಗಾರರು ಶುಕ್ರವಾರ ಮೃತಪಟ್ಟಿದ್ದು, ಇದು ಯೆಮೆನ್‌ನ ಪೂರ್ವ ಗವರ್ನರೇಟ್ ಗಳಲ್ಲಿ ಮೈತ್ರಿಗಳು ಮತ್ತು ಹೆಚ್ಚುತ್ತಿರುವ ಪೈಪೋಟಿಯ ನಡುವೆ ನಡೆದಿದೆ ಎಂದು ಹೇಳಲಾಗಿದೆ.

ಮಿಲಿಟರಿ ನೆಲೆಗಳ ಮೇಲೆ ಸಮ್ಮಿಶ್ರ ವಿಮಾನಗಳು ದಾಳಿ ;

ಯೆಮನ್‌ನ ಏಡನ್ ವಿಮಾನ ನಿಲ್ದಾಣ ಮತ್ತು ಹದ್ರಾಮೌಟ್ ಪ್ರಾಂತ್ಯದ ಸೀಯುನ್‌ನಲ್ಲಿರುವ ವಿಮಾನ ನಿಲ್ದಾಣದ ಮೇಲೆ ವೈಮಾನಿಕ ದಾಳಿಗಳು ನಡೆದಿವೆ. ಈ ದಾಳಿಗಳಿಂದಾಗಿ 24 ಗಂಟೆಗಳ ಕಾಲ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹಡ್ರಾಮೌಟ್ ನಲ್ಲಿರುವ ಎಸ್ ಟಿಸಿ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆದಿದೆ. ಅಲ್-ಖಾಶಾ ಮತ್ತು ಸೆಯುನ್ ನಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ಸಮ್ಮಿಶ್ರ ವಿಮಾನಗಳು ದಾಳಿ ನಡೆಸಿದ ಪರಿಣಾಮ 20 ಯುಎಇ ಬೆಂಬಲಿತ ಪ್ರತ್ಯೇಕತಾವಾದಿ ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಎಸ್ ಟಿಸಿ ಮಿಲಿಟರಿ ಮೂಲಗಳು ದೃಢಪಡಿಸಿವೆ.

ಹದ್ರಾಮೌಟ್‌ನಲ್ಲಿರುವ ಮಿಲಿಟರಿ ತಾಣಗಳನ್ನು ನಿಯಂತ್ರಿಸಲು ಸೌದಿ ಪರ ಪಡೆಗಳು ನಡೆಸಿದ ಕಾರ್ಯಾಚರಣೆಯ ನಂತರ ಈ ದಾಳಿಗಳು ನಡೆದಿವೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಎಸ್ ಟಿಸಿ ಮೂಲಗಳು ತಿಳಿಸಿವೆ. ಸಾರಿಗೆ ಸಚಿವಾಲಯವು ಅಧಿಕೃತವಾಗಿ ವಿಮಾನ ನಿಲ್ದಾಣವನ್ನು ಮುಚ್ಚಿರುವುದಾಗಿ ಘೋಷಿಸಿಲ್ಲ ಎಂಬುದು ತಿಳಿದು ಬಂದಿದೆ.

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು