Breaking News

T20 Worldcup: ಟಾಮ್ ಬ್ಯಾಂಟನ್ ಅರ್ಧಶತಕ, ಇಂಗ್ಲೆಂಡ್ ತಂಡಕ್ಕೆ ಸುಲಭ ಜಯ

ಕೋಲ್ಕತ್ತ: ಟಾಮ್ ಬ್ಯಾಂಟನ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಸ್ಕಾಟ್ಲೆಂಡ್ ತಂಡದ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಇಲ್ಲಿನ ಈಡನ್ಸ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

Advertisement

ಇದನ್ನೂ ಓದಿ: ಬೆಂಗಳೂರು: ವೈಟ್ ಆಟೋದಲ್ಲಿ ಬಂದಿಳಿದ ಕಾರ್ಲ್ ಪೀ! ಟೆಕ್ ಹಬ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಕಂಪನಿ!

ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡ 19.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು. ತಂಡದ ಪರ ನಾಯಕ ರಿಚ್ಚಿ ಬೆರ್ರಿಂಗ್‌ಟನ್ 49, ಮೈಕಲ್ ಜೋನ್ಸ್ 33, ಟಾಮ್ ಬ್ರೂಸ್ 24, ಒಲಿವರ್ ಡೇವಿಡ್ಸನ್ 20 ರನ್ ಗಳಿಸಿದರು.

ಇಂಗ್ಲೆಂಡ್ ಪರ ಆದಿಲ್ ರಶೀದ್ 3, ಜೋಫ್ರ ಆರ್ಚರ್ ಮತ್ತು ಲಿಯಾಮ್ ಡೇವಿಡ್ಸನ್ ತಲಾ 2, ಜೇಮಿ ಓವರ್‌ಟನ್ ಮತ್ತು ಸ್ಯಾಮ್ ಕರನ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಟಾಮ್ ಬ್ಯಾಂಟನ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 18.2 ಓವರ್‌ಗಳಲ್ಲಿ 5 ವಿಕೆಟದ ಕಳೆದುಕೊಂಡು ಗುರಿ ತಲುಪಿತು.

ಟಾಮ್ ಬ್ಯಾಂಟನ್ 41 ಎಸೆತಗಳಲ್ಲಿ 63, ಜಾಕೊಬ್ ಬೆಥೆಲ್ 32, ಸ್ಯಾಮ್ ಕರನ್ 28 ಮತ್ತು ವಿಲ್ ಜಾಕ್ಸ್ 16 ರನ್ ಗಳಿಸಿದರು. ಸ್ಕಾಟ್ಲೆಂಡ್ ಪರ ಬ್ರಂಡನ್ ಮೆಕ್‌ಮುಲ್ಲನ್ ಬ್ರಾಡ್ ಕ್ಯೂರಿ, ಬ್ರಾಡ್ ವ್ಹೀಲ್, ಮೈಕಲ್ ಲೀಸ್ಕ್, ಒಲಿವರ್ ಡೇವಿಡ್ ಸನ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು