Breaking News

ಪುತ್ತೂರು: ಫೆ.26 ರಂದು ವಿದ್ಯುತ್ ವ್ಯತ್ಯಯ

ಪುತ್ತೂರು: ಪುತ್ತೂರು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಫೆ.26 ರಂದು ವಿದ್ಯುತ್ ವ್ಯತ್ಯಯವಾಗಲಿದೆ.

110/33/11 ಕೆವಿ ಪುತ್ತೂರು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಕಬಕ, ನಗರ, ಬಲ್ನಾಡು (ಕೆದಿಲ), ದರ್ಬೆ, ಕೆಮ್ಮಾಯಿ (ಇಂಡಸ್ಟ್ರಿಯಲ್), ಉಪ್ಪಿನಂಗಡಿ ಓಲ್ಡ್ ಹಾಗೂ ರಾಮಕುಂಜ ಫೀಡರ್‌ಗಳಲ್ಲಿ ಫೆಬ್ರವರಿ 26 ರಂದು ಪೂರ್ವಾಹ್ನ 09:30 ರಿಂದ ಅಪರಾಹ್ನ 05:30 ಗಂಟೆಯವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ಪ್ರಕಟಣೆ ತಿಳಿಸಿದೆ.

Advertisement

ಇದನ್ನೂ ಓದಿ: ಕೊಡಗು: ಅಪರಿಚಿತ ವ್ಯಕ್ತಿ ಹಾರಿಸಿದ ಗುಂಡು ತಾಗಿ ವ್ಯಕ್ತಿ ಗಂಭೀರ

ಈ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ನಗರ, ಬನ್ನೂರು, ಕೊಡಿಪ್ಪಾಡಿ, ಪಟ್ಟೂರು, ಮುರ, ಕಬಕ, ವಿದ್ಯಾಪುರ ಸೇರಿದಂತೆ ಕೆಎಸ್‌ಆರ್‌ಟಿಸಿ ಪ್ರದೇಶ, ಟ್ಯಾಕ್ಸಿ ಸ್ಟ್ಯಾಂಡ್, ದೇವಣ್ಣ ಕಿಣಿ ಬಿಲ್ಡಿಂಗ್, ರೂಪಾ ಕಾಂಪ್ಲೆಕ್ಸ್, ಅಕ್ಷಯ ಮೋಟಾರ್ಸ್ ಸಿಟಿ ಸೆಂಟರ್, ಕಲ್ಲಾರೆ, ದರ್ಬೆ ಸರ್ಕಲ್, ಅಶ್ವಿನಿ ಹೋಟೆಲ್, ಬೀರಮಲೆ, ಮಕ್ಕಳ ಮಂಟಪ, ಹನುಮಾನ್ ಮಿಲ್, ಐಬಿ, ಸಿಟಿಒ ರಸ್ತೆ, ಎ.ಪಿ.ಎಂ.ಸಿ ರಸ್ತೆ, ಸಾಮೆತ್ತಡ್ಕ, ಎಂ.ಟಿ ರಸ್ತೆ, ಚಿಕ್ಕಪುತ್ತೂರು, ಮಡಿವಾಳಕಟ್ಟೆ, ಬಲ್ನಾಡು, ನವನಗರ, ಪಡೀಲು, ಸಾಲ್ಮರ, ಬೀರ್ನಹಿತ್ತು, ಕೆಮ್ಮಾಯಿ, ಕೃಷ್ಣನಗರ, ಆನೆಮಜಲು, ಹಲಂಗ, ಸೇಡಿಯಾಪು, ಕೋಡಿಂಬಾಡಿ, ಮಠಂತಬೆಟ್ಟು, ಶಾಂತಿನಗರ, ದಾರಂದಕುಕ್ಕು, ಚಿಕ್ಕಮುನ್ನೂರು, ಬೆಳ್ಳಿಪಾಡಿ, ಹಿರೇಬಂಡಾಡಿ, ಕೊಯಿಲ ಹಾಗೂ ರಾಮಕುಂಜ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.

ಮತ್ತಷ್ಟು ಸುದ್ದಿಗಳಿಗಾಗ ಇಲ್ಲಿ‌ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು