ಹೊಸದಿಲ್ಲಿ : ಎಕ್ಸ್ ಖಾತೆಯಲ್ಲಿ ಬಳಕೆದಾರರು ತಮ್ಮದೇ ಆದ ಪ್ರೊಫೈಲ್ ರಚಿಸಿ, ಕಿರು ಸಂದೇಶಗಳು (ಪೋಸ್ಟ್ಗಳು), ಚಿತ್ರ, ವೀಡಿಯೊ ಮತ್ತು ಲೈವ್ ವಿಷಯಗಳನ್ನು ಹಂಚಿಕೊಳ್ಳುವ ವೈಯಕ್ತಿಕ ಅಥವಾ ಅಧಿಕೃತ ಖಾತೆಯಾಗಿದೆ. ರಾಜಕೀಯ ನಾಯಕರು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾನ್ಯ ಜನರು ಇಲ್ಲಿ ಸಕ್ರಿಯರಾಗಿರುತ್ತಾರೆ.
ಅಶ್ಲೀಲ, ಕಾನೂನು ಬಾಹಿರ ವಿಷಯಗಳನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದರೆ ಕಾನೂನು ಕ್ರಮ ;

ಇದೀಗ ಮೈಕ್ರೋಬ್ಲಾಗಿಂಗ್ ‘ಎಕ್ಸ್’ನಲ್ಲಿ ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕಲು ಕೇಂದ್ರ ಸರಕಾರವು ನೋಟಿಸ್ ನೀಡಿದ ಬೆನ್ನಿಗೇ ಅಂತಹ ವಿಷಯಗಳನ್ನು ಪೋಸ್ಟ್ ಮಾಡುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುವುದು ಎಂದು ಉದ್ಯಮಿ ಎಲಾನ್ ಮಸ್ಕ್ ಒಡೆತನದ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಕೃತಕ ಬುದ್ದಿಮತ್ತೆ (ಎಐ) ಆಧಾರಿತ ‘ಗೋಕ್’ ಬಳಸುವವರು ಅಶ್ಲೀಲ, ಕಾನೂನು ಬಾಹಿರ ವಿಷಯಗಳನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದರೆ ಕಾನೂನು ಕ್ರಮ ಮೇಲಿನ ಎದುರಿಸಬೇಕಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ : ಕಂ ಗೆಟ್ ಮಿ: ಟ್ರಂಪ್ಗೆ ಸವಾಲು ಹಾಕಿದ್ದೇ ವೆನೆಜುವೆಲಾದ ಅಧ್ಯಕ್ಷರಿಗೆ ಮುಳುವಾಯ್ತ?
ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಮಹಿಳೆಯರ ಅಶ್ಲೀಲ ಫೋಟೊಗಳನ್ನು ರಚಿಸಲು ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಎಐ ಅಪ್ಲಿಕೇಶನ್ ‘ಗೋಕ್’ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕುರಿತು ಹೇಳಿಕೆ ನೀಡಲಾಗಿತ್ತು.
ಅಲ್ಲದೇ ಈ ಸಲುವಾಗಿ, ಮಕ್ಕಳ ದೌರ್ಜನ್ಯಕ್ಕೆ ಉತ್ತೇಜನ ನೀಡುವಂತಹ ಫೋಟೊ, ವಿಡಿಯೊಗಳನ್ನು ಪೋಸ್ಟ್ ಮಾಡುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುತ್ತದೆ ಎಂದು ಕಂಪನಿ ಎಚ್ಚರಿಸಿದೆ. ಜೊತೆಗೆ ಈ ಕುರಿತು ಕ್ರಮ ಕೈಗೊಂಡ ಬಗ್ಗೆ ವಿವರವನ್ನು 72 ಗಂಟೆಯೊಳಗೆ ಸಲ್ಲಿಸುವಂತೆ ಸಚಿವಾಲಯವು ಸಂಸ್ಥೆಗೆ ಸೂಚಿಸಿದೆ ಕಳೆದ ಜ.2 ರಂದು ಐಟಿ ಸಚಿವಾಲಯವು ಎಐ ಅಪ್ಲಿಕೇಶನ್ ಪ್ರೋಕ್ನಿಂದ ರಚಿಸಲಾಗುವ ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯವನ್ನು ತಕ್ಷಣ ತೆಗೆದುಹಾಕುವಂತೆ, ಇಲ್ಲದಿದ್ದರೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನೀಡಿತ್ತು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ.
ವಾಟ್ಸಪ್: 7353833811, ಇ-ಮೇಲ್- g1newsdpt@gmail.com

