Breaking News

ಇರಾನ್ ಕ್ಷಿಪಣಿ ದಾಳಿ: ಕುವೈತ್‌ನಲ್ಲಿರುವ ಅಮೆರಿಕ ಸೇನಾ ನೆಲೆ ಧ್ವಂಸ? ನೂರಾರು ಸೈನಿಕರು ಸಾವು ಎಂದ ಇರಾನ್

ಕುವೈತ್/ಟೆಹ್ರಾನ್: ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಗೆ (Operation Epic Fury) ಪ್ರತಿಯಾಗಿ ಇರಾನ್ ಈಗ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಭೀಕರ ಪ್ರಹಾರ ನಡೆಸಿದೆ. ಕುವೈತ್‌ನಲ್ಲಿರುವ ಅಲ್-ಸಲೇಂ (Ali Al-Salem) ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರಿ ಸಾವು-ನೋವು ಸಂಭವಿಸಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.ಇರಾನ್‌ನ IRGC ಪ್ರಕಾರ, ಕುವೈತ್‌ನಲ್ಲಿರುವ ಅಮೆರಿಕದ ಅಲ್-ಸಲೇಂ ವಾಯುನೆಲೆ ಮತ್ತು ಅಬುಧಾಬಿಯ ಅಲ್-ದಫ್ರಾ ನೆಲೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಈ ದಾಳಿಯಲ್ಲಿ ಅಮೆರಿಕದ ನೂರಾರು ಸೈನಿಕರು ಹತರಾಗಿದ್ದಾರೆ ಎಂದು ಇರಾನ್ ಹೇಳಿಕೊಂಡಿದೆ. ಅಲ್ಲದೆ, ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆಯು ಈ ಕ್ಷಿಪಣಿಗಳನ್ನು ತಡೆಯಲು ವಿಫಲವಾಗಿದೆ ಎಂದು ಲೇವಡಿ ಮಾಡಿದೆ.ಪರಮೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಗೆ ಪ್ರತಿಯಾಗಿ ಈ ‘ದೊಡ್ಡ ಪ್ರಮಾಣದ ಪ್ರತೀಕಾರ’ (Crushing Response) ನಡೆಸಲಾಗುತ್ತಿದೆ ಎಂದು ಇರಾನ್ ಘೋಷಿಸಿದೆ.

Advertisement

ಇದನ್ನೂ ಓದಿ: ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಫಿನಿಶ್: ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ!

ಇರಾನ್‌ನ ಈ ದಾವೆಯನ್ನು ಅಮೆರಿಕದ ಪೆಂಟಗನ್ ತಳ್ಳಿಹಾಕಿದೆ. ಕುವೈತ್ ಮತ್ತು ಇತರ ನೆಲೆಗಳ ಮೇಲೆ ದಾಳಿ ನಡೆದಿರುವುದು ನಿಜವಾದರೂ, ಯಾವುದೇ ಅಮೆರಿಕದ ಸೈನಿಕರು ಸಾವನ್ನಪ್ಪಿಲ್ಲ ಎಂದು ವಾಷಿಂಗ್ಟನ್ ಸ್ಪಷ್ಟಪಡಿಸಿದೆ. ಬಹುತೇಕ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಲಾಗಿದೆ ಮತ್ತು ಕೇವಲ ಆಸ್ತಿಪಾಸ್ತಿಗೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ಅಮೆರಿಕ ಹೇಳಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು