Breaking News

T20 ವಿಶ್ವಕಪ್ 2026 ಸೆಮಿಫೈನಲ್: ಐಸಿಸಿಯಿಂದ ಹೊಸ ನಿಯಮ ಜಾರಿ

ಮುಂಬೈ: ಟಿ20 ವಿಶ್ವಕಪ್ 2026ರ ಕ್ಲೈಮ್ಯಾಕ್ಸ್ ಹಂತ ಶುರುವಾಗಿದ್ದು, ನಾಲ್ಕು ಬಲಿಷ್ಠ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಈ ನಿರ್ಣಾಯಕ ಪಂದ್ಯಗಳಿಗಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ವಿಶೇಷವಾಗಿ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದರೆ ಫಲಿತಾಂಶ ನಿರ್ಧರಿಸುವ ಮಾನದಂಡವನ್ನು ಬದಲಾಯಿಸಲಾಗಿದೆ. ಸಾಮಾನ್ಯ ಟಿ20 ಪಂದ್ಯಗಳಲ್ಲಿ ಡಕ್ವರ್ತ್ ಲೂಯಿಸ್ (DLS) ನಿಯಮದಡಿ ಫಲಿತಾಂಶ ನೀಡಲು ಎರಡೂ ತಂಡಗಳು ಕನಿಷ್ಠ 5 ಓವರ್‌ಗಳನ್ನು ಆಡಿರಬೇಕು. ಆದರೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಈ ಮಿತಿಯನ್ನು 10 ಓವರ್‌ಗಳಿಗೆ ಏರಿಸಲಾಗಿದೆ. ಅಂದರೆ ಪಂದ್ಯ ಪೂರ್ಣಗೊಳ್ಳಲು ಎರಡೂ ತಂಡಗಳು ತಲಾ 10 ಓವರ್ ಆಡುವುದು ಕಡ್ಡಾಯ.

ಪಂದ್ಯವನ್ನು ಅದೇ ದಿನ ಪೂರ್ಣಗೊಳಿಸಲು ಐಸಿಸಿ 90 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಿದೆ. ಒಂದು ವೇಳೆ ನಿಗದಿತ ದಿನದಂದು ಪಂದ್ಯ ಸಾಧ್ಯವಾಗದಿದ್ದರೆ ಅಥವಾ ಅರ್ಧಕ್ಕೆ ನಿಂತರೆ, ಮರುದಿನ ‘ರಿಸರ್ವ್ ಡೇ’ ನಲ್ಲಿ ಪಂದ್ಯ ಮುಂದುವರಿಯಲಿದೆ.

Advertisement

ಮೀಸಲು ದಿನದಂದು ಕೂಡ ಮಳೆಯಿಂದಾಗಿ 10 ಓವರ್‌ಗಳ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಸೂಪರ್-8 ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ (Top Rank) ಪಡೆದ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ.

ಇದನ್ನೂ ಓದಿ: ಭಾರತದ ಭರ್ಜರಿ ಜಯಕ್ಕೆ ಪಾಕ್ ಆಂಕರ್ ಕಂಗಾಲು! ಸಿಟ್ಟಿನಲ್ಲಿ ಎಲ್‌ಇಡಿ ಟಿವಿ ಪುಡಿಪುಡಿ ಮಾಡಿದ ವಿಡಿಯೋ ವೈರಲ್

ಸೆಮಿಫೈನಲ್ ವೇಳಾಪಟ್ಟಿ:

ಸೆಮಿಫೈನಲ್ 1 (ಮಾರ್ಚ್ 4): ದಕ್ಷಿಣ ಆಫ್ರಿಕಾ vs ನ್ಯೂಜಿಲೆಂಡ್ (ಈಡನ್ ಗಾರ್ಡನ್ಸ್, ಕೋಲ್ಕತ್ತಾ)

ಸೆಮಿಫೈನಲ್ 2 (ಮಾರ್ಚ್ 5): ಭಾರತ vs ಇಂಗ್ಲೆಂಡ್ (ವಾಂಖೆಡೆ ಸ್ಟೇಡಿಯಂ, ಮುಂಬೈ)

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು