ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ದೀರ್ಘ ಕಾಲದವರೆಗೆ ಮುಂದುವರೆದರೆ ಭಾರತಕ್ಕೆ ತೈಲ ಕೊರತೆ ಕಾಡುವ ಸಾಧ್ಯತೆ ಇದೆ. ಈ ನಡುವೆ, ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಸುಂಕಾಸ್ತ್ರ ಪ್ರಯೋಗದ ಸಂದರ್ಭದಲ್ಲಿ ಭಾರತಕ್ಕೆ ಕಡಿಮೆ ಬೆಲೆಗೆ ಕಚ್ಚಾ ತೈಲ ಒದಗಿಸುತ್ತಿದ್ದ ಸಾಂಪ್ರದಾಯಿಕ ಆಪ್ತಮಿತ್ರ ರಾಷ್ಟ್ರ ರಷ್ಯಾ ಇದೀಗ ಇರಾನ್-ಇಸ್ರೇಲ್, ಅಮೆರಿಕ ಯುದ್ಧದ ಸಂದರ್ಭದಲ್ಲೂ ಭಾರತದ ಕೈಹಿಡಿದಿದೆ. ತೈಲ ಕೊರತೆಯಾಗದಂತೆ ನೋಡಿಕೊಳ್ಳುವ ಭರವಸೆಯನ್ನೂ ನೀಡಿದೆ.
ಹೌದು, ಪ್ರಸ್ತುತ ಸುಮಾರು 9.5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ರಷ್ಯಾ ಭಾರತಕ್ಕೆ ಕಳುಹಿಸಿದ್ದು, ತೈಲ ಹೊತ್ತ ಹಡಗುಗಳು ಭಾರತೀಯ ಸಮುದ್ರ ಪ್ರದೇಶದ ಸಮೀಪಿಸಿವೆ. ಇವುಗಳನ್ನು ಕೆಲವು ವಾರಗಳಲ್ಲಿ ಭಾರತಕ್ಕೆ ತಲುಪಿಸುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಭಾರತಕ್ಕೆ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಆತಂಕ ಹೆಚ್ಚಾಗಿದೆ. ದೇಶದಲ್ಲಿ ಇರುವ ಕಚ್ಚಾ ತೈಲ ಸಂಗ್ರಹವು ಕೇವಲ ಸುಮಾರು 25 ದಿನಗಳ ಬೇಡಿಕೆಯನ್ನು ಮಾತ್ರ ಪೂರೈಸುವಷ್ಟು ಇದೆ. ಇದೇ ವೇಳೆ ಡೀಸೆಲ್, ಪೆಟ್ರೋಲ್ ಮತ್ತು ಎಲ್‌ಪಿಜಿ ಸೇರಿದಂತೆ ಇಂಧನಗಳ ಸಂಗ್ರಹವೂ ಮಿತವಾಗಿದೆ.
ಮಧ್ಯಪ್ರಾಚ್ಯದ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ 10 ರಿಂದ 15 ದಿನಗಳಲ್ಲಿ ಸರಬರಾಜಿನಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಪರ್ಯಾಯ ತೈಲ ಮೂಲಗಳನ್ನು ಹುಡುಕುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಭಾರತದ ಒಟ್ಟು ತೈಲ ಆಮದುಗಳಲ್ಲಿ ಸುಮಾರು ಶೇ.40 ತೈಲವು ಹೋರ್ಮುಜ್ ಸಮುದ್ರ ಮಾರ್ಗದ ಮೂಲಕ ಬರುತ್ತದೆ. ಆದರೆ ಇತ್ತೀಚೆಗೆ ಇರಾನ್ ಮತ್ತು ಅಮೆರಿಕಾ-ಇಸ್ರೇಲ್ ನಡುವಿನ ದಾಳಿಗಳ ಹಿನ್ನೆಲೆ ಈ ಪ್ರಮುಖ ಮಾರ್ಗದಲ್ಲಿ ಹಡಗು ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಪ್ರಸ್ತುತ ಭಾರತೀಯ ರಿಫೈನರಿಗಳು ದಿನಕ್ಕೆ ಸುಮಾರು 5.6 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುತ್ತಿವೆ. ಜನವರಿಯಲ್ಲಿ ಭಾರತಕ್ಕೆ ರಷ್ಯಾದಿಂದ ಆಗಿದ್ದ ತೈಲ ಆಮದು ಪ್ರತಿದಿನಕ್ಕೆ ಸುಮಾರು 1.1 ಮಿಲಿಯನ್ ಬ್ಯಾರೆಲ್ ಇಳಿಕೆಯಾಗಿತ್ತು. ಇದು ೨೦೨೨ರ ನವೆಂಬರ್ ನಂತರದ ಕನಿಷ್ಠ ಮಟ್ಟವಾಗಿದೆ. ಆದರೆ ಫೆಬ್ರವರಿಯಲ್ಲಿ ಮತ್ತೆ ರಷ್ಯಾದ ಪಾಲು ಸುಮಾರು 30 ಶೇಕಡಾವರೆಗೆ ಏರಿಕೆಯಾಗಿದೆ ಎಂದು ಉದ್ಯಮದ ಅಂಕಿಅಂಶಗಳು ಸೂಚಿಸುತ್ತವೆ.
ಇದೀಗ ರಷ್ಯಾ ತೈಲಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ಹಿಂದಿನಂತೆ ಹೆಚ್ಚಿನ ರಿಯಾಯಿತಿ ದೊರಕುವ ಸಾಧ್ಯತೆ ಕಡಿಮೆಯಾಗಬಹುದು ಎಂದು ಉದ್ಯಮ ಮೂಲಗಳು ಹೇಳಿವೆ.
ಎಲ್‌ಎನ್‌ಜಿ ಪೂರೈಕೆಗೂ ರಷ್ಯಾ ಸಿದ್
ಇದಕ್ಕೂ ನಡುವೆ ಮಧ್ಯಪ್ರಾಚ್ಯ ಸಂಘರ್ಷ ವಿಸ್ತರಿಸಿದ ಪರಿಣಾಮವಾಗಿ ಕತಾರ್ ತನ್ನ ಎಲ್‌ಎನ್‌ಜಿ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವ ಹಿನ್ನೆಲೆಯಲ್ಲಿ, ರಷ್ಯಾ ಭಾರತಕ್ಕೆ ದ್ರವೀಕೃತ ನೈಸರ್ಗಿಕ ಅನಿಲವನ್ನು ಕೂಡ ಪೂರೈಸಲು ಸಿದ್ಧವಾಗಿದೆ ಎಂದು ತಿಳಿದುಬಂದಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

