“ನಮ್ಮನ್ನು ಹತ್ತಿಕ್ಕಿದ ವ್ಯಕ್ತಿಗಾಗಿ ನೀವು ಯಾಕೆ ಕಣ್ಣೀರಿಡುತ್ತಿದ್ದೀರಿ?”: ಭಾರತೀಯ ಮುಸ್ಲಿಮರನ್ನು ಅಣಕಿಸಿ ಟೀಕಿಸಿದ ಇರಾನ್ ಮಹಿಳೆಯರು

ಟೆಹ್ರಾನ್: ಇರಾನ್‌ನ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ಸುದ್ದಿಯ ನಂತರ, ಭಾರತದ ಕಾಶ್ಮೀರ ಮತ್ತು ಲಕ್ನೋದಂತಹ ಭಾಗಗಳಲ್ಲಿ ಮಹಿಳೆಯರು ಬೀದಿಗಿಳಿದು ಕಣ್ಣೀರಿಡುತ್ತಾ, ಸೇಡಿನ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಆದರೆ, ಈ ವಿಡಿಯೋಗಳನ್ನು ಇರಾನ್‌ನ ಮಹಿಳೆಯರೇ ಅಣಕಿಸುತ್ತಿರುವುದು ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಇರಾನ್‌ನಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಮತ್ತು ಖಮೇನಿ ಅವರ ಕಠಿಣ ಇಸ್ಲಾಮಿಕ್ ಆಡಳಿತದಿಂದ ನೊಂದಿರುವ ಮಹಿಳೆಯರು, ಭಾರತೀಯ ಮಹಿಳೆಯರ ನಡೆಯನ್ನು ಟೀಕಿಸುತ್ತಿದ್ದಾರೆ. “ನಮ್ಮನ್ನು ಹತ್ತಿಕ್ಕಿದ ವ್ಯಕ್ತಿಗಾಗಿ ನೀವು ಯಾಕೆ ಕಣ್ಣೀರಿಡುತ್ತಿದ್ದೀರಿ?” ಎಂದು ಅವರು ಪ್ರಶ್ನಿಸುತ್ತಿದ್ದಾರೆ.

2022ರಲ್ಲಿ ಇರಾನ್‌ನಲ್ಲಿ ನಡೆದ ‘ಮಹ್ಸಾ ಅಮಿನಿ’ ಪ್ರತಿಭಟನೆಯನ್ನು ಉಲ್ಲೇಖಿಸುತ್ತಿರುವ ಅಲ್ಲಿನ ಮಹಿಳೆಯರು, “ನಮಗೆ ಸಿಗದ ಸ್ವಾತಂತ್ರ್ಯವನ್ನು ಆಚರಿಸುವ ಬದಲು, ನೀವು ಒಬ್ಬ ಸರ್ವಾಧಿಕಾರಿಯ ಪರವಾಗಿ ನಿಂತಿರುವುದು ಆಶ್ಚರ್ಯಕರ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.

ಶೋಕ ವ್ಯಕ್ತಪಡಿಸುತ್ತಿರುವ ಭಾರತೀಯ ಮುಸ್ಲಿಮರು ಖಮೇನಿ ಅವರನ್ನು ಒಬ್ಬ ಧಾರ್ಮಿಕ ನಾಯಕ ಮತ್ತು ಇಸ್ಲಾಮಿಕ್ ಶಕ್ತಿಯ ಸಂಕೇತವಾಗಿ ನೋಡುತ್ತಿದ್ದಾರೆ. ಇದು ಕೇವಲ ಧಾರ್ಮಿಕ ಭಾವನೆಯೇ ಹೊರತು ರಾಜಕೀಯವಲ್ಲ ಎಂಬುದು ಇವರ ವಾದ.

ಇದನ್ನೂ ಓದಿ: ಅಬುಧಾಬಿಯಿಂದ ದೆಹಲಿಗೆ ಬಂದಿಳಿದ ಮೊದಲ ವಿಮಾನ; ದುಬೈನಲ್ಲಿ ಸಿಲುಕಿದವರಿಗೆ ಬಿಡುಗಡೆ ಭಾಗ್ಯ!

ಇಲ್ಲಿದೆ ನೋಡಿ ವಿಡಿಯೋ:

ಈ ಘಟನೆಯು ಇಸ್ಲಾಂ ಧರ್ಮದೊಳಗಿನ ಶಿಯಾ-ಸುನ್ನಿ ಪಂಗಡಗಳ ವಿಚಾರಧಾರೆಗಳು ಮತ್ತು ವಿಭಿನ್ನ ದೇಶಗಳಲ್ಲಿನ ಮುಸ್ಲಿಂ ಸಮುದಾಯದ ಸಾಮಾಜಿಕ ದೃಷ್ಟಿಕೋನಗಳ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದೆ. ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಇರಾನ್ ಮೂಲದ ಬಳಕೆದಾರರು ಭಾರತೀಯ ಮಹಿಳೆಯರ ವಿಡಿಯೋಗಳನ್ನು ಶೇರ್ ಮಾಡಿ, “ಸತ್ಯ ತಿಳಿಯದೆ ಭಾವೋದ್ವೇಗಕ್ಕೆ ಒಳಗಾಗಬೇಡಿ” ಎಂಬ ಸಂದೇಶಗಳನ್ನು ರವಾನಿಸುತ್ತಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ