Breaking News

ಸಾನಿಯಾ ಚಾಂದೋಕ್ ಕೈಹಿಡಿದ ಅರ್ಜುನ್; ಮುಂಬೈನಲ್ಲಿ ಜರುಗಿದ ಅದ್ದೂರಿ ವಿವಾಹ!

ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನ ಪ್ರತಿಷ್ಠಿತ ‘ದ ಸೇಂಟ್ ರೆಜಿಸ್’ (The St. Regis) ಹೋಟೆಲ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ತಮ್ಮ ಬಾಲ್ಯದ ಗೆಳತಿ, ಉದ್ಯಮಿ ಸಾನಿಯಾ ಚಾಂದೋಕ್ ಅವರೊಂದಿಗೆ ಅರ್ಜುನ್ ಸಪ್ತಪದಿ ತುಳಿದಿದ್ದಾರೆ.

ಈ ಸಮಾರಂಭಕ್ಕೆ ಕ್ರಿಕೆಟ್ ಲೋಕದ ದಿಗ್ಗಜರಾದ ಎಂ.ಎಸ್. ಧೋನಿ, ರಾಹುಲ್ ದ್ರಾವಿಡ್, ಇರ್ಫಾನ್ ಪಠಾಣ್, ಸುರೇಶ್ ರೈನಾ ಮತ್ತು ಮುಂಬೈ ಇಂಡಿಯನ್ಸ್ ತಂಡದ ಹಲವು ಸಹ ಆಟಗಾರರು ಸಾಕ್ಷಿಯಾದರು. ರಾಜಕೀಯ ಗಣ್ಯರಾದ ನಾರಾ ಲೋಕೇಶ್ ಮತ್ತಿತರರು ಪಾಲ್ಗೊಂಡು ನವದಂಪತಿಗಳನ್ನು ಆಶೀರ್ವದಿಸಿದರು. ಮಾರ್ಚ್ 3 ರಂದು ಮೆಹಂದಿ ಸಮಾರಂಭ ನೆರವೇರಿದ್ದು, ಸಾರಾ ತೆಂಡೂಲ್ಕರ್ ಸೇರಿದಂತೆ ಕುಟುಂಬದ ಸದಸ್ಯರು ಸಂಭ್ರಮಿಸಿದರು. ಇದಕ್ಕೂ ಮುನ್ನ ಗುಜರಾತ್‌ನ ಜಾಮ್‌ನಗರದಲ್ಲಿ ಅಂಬಾನಿ ಕುಟುಂಬದ ಆತಿಥ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದಿದ್ದವು.

Advertisement

ಇದನ್ನೂ ಓದಿ: Finn Allen: ಸ್ಫೋಟಕ ಶತಕದೊಂದಿಗೆ ಹಲವು ದಾಖಲೆಗಳನ್ನು ಬರೆದ ಫಿನ್ ಅಲೆನ್

ಸಾನಿಯಾ ಅವರು ಮುಂಬೈನ ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಹಾಗೂ ಯಶಸ್ವಿ ಉದ್ಯಮಿ. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪದವಿ ಪಡೆದಿದ್ದು, ಸಾರಾ ತೆಂಡೂಲ್ಕರ್ ಅವರ ಅತ್ಯಂತ ಆಪ್ತ ಗೆಳತಿಯೂ ಹೌದು.ಕಳೆದ ಫೆಬ್ರವರಿಯಲ್ಲಿ ಸಚಿನ್ ತೆಂಡೂಲ್ಕರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಮದುವೆಗೆ ಆಹ್ವಾನ ನೀಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು