Republic Day : ಗಣರಾಜ್ಯೋತ್ಸವ ಪೆರೇಡ್ ಟಿಕೆಟ್ ಮಾರಾಟ ಇಂದು (ಜ.05) ಆರಂಭ

ದೆಹಲಿ : ಇಂದಿನಿಂದ, ಅಂದರೆ ಜನವರಿ 5, 2026ರಿಂದ, ಗಣರಾಜ್ಯೋತ್ಸವ ಪೆರೇಡ್ ಹಾಗೂ ಬೀಟಿಂಗ್ ರಿಟ್ರೀಟ್‌ನ ಪೂರ್ಣ ಅಭ್ಯಾಸ ಮತ್ತು ಮುಖ್ಯ ಸಮಾರಂಭಗಳ ಟಿಕೆಟ್ ಮಾರಾಟ ಅಧಿಕೃತವಾಗಿ ಆರಂಭವಾಗಿದೆ. ಗಣರಾಜ್ಯೋತ್ಸವ ಪೆರೇಡ್ ಜನವರಿ 26ರಂದು, ಅದಕ್ಕೆ ಸಂಬಂಧಿಸಿದ ಬೀಟಿಂಗ್ ರಿಟ್ರೀಟ್ ಪೂರ್ಣ ಅಭ್ಯಾಸ ಜನವರಿ 28ರಂದು ಮತ್ತು ಬೀಟಿಂಗ್ ರಿಟ್ರೀಟ್ ಸಮಾರಂಭ ಜನವರಿ 29ರಂದು ನಡೆಯಲಿದೆ.

ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಸ್ಕೃತಿ ಪ್ರದರ್ಶನಗೊಳ್ಳಲಿದ್ದು, ಅವುಗಳ ಪರಂಪರೆ ಹಾಗೂ ಸಾಧನೆಗಳನ್ನು ಪ್ರತಿಬಿಂಬಿಸಲಿವೆ. ಜೊತೆಗೆ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ದಳಗಳು ತಮ್ಮ ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಲಿವೆ.

Advertisement

ಇದನ್ನೂ ಓದಿ : Aramboor : ಅರಂಬೂರಿನ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಮೃತ್ಯು

ಟಿಕೆಟ್ ಬೆಲೆ ವಿವರ ;
ಜನವರಿ 26 (ಗಣರಾಜ್ಯೋತ್ಸವ ಪೆರೇಡ್):
ರೂ. 100
ರೂ. 20
ಜನವರಿ 28 (ಬಿಟಿಂಗ್ ರಿಟ್ರೀಟ್ ಪೂರ್ಣ ಅಭ್ಯಾಸ):
ರೂ. 20
ಜನವರಿ 29 (ಬಿಟಿಂಗ್ ರಿಟ್ರೀಟ್ ಸಮಾರಂಭ):
ರೂ. 100
ಈ ಮೂರು ಕಾರ್ಯಕ್ರಮಗಳ ಟಿಕೆಟ್‌ಗಳು ಜನವರಿ 5ರಿಂದ ಜನವರಿ 14ರವರೆಗೆ, ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಲಭ್ಯವಿರುತ್ತವೆ. ದಿನದ ಕೋಟಾ ಮುಗಿಯುವವರೆಗೆ ಮಾತ್ರ ಮಾರಾಟ ನಡೆಯಲಿದೆ. ಟಿಕೆಟ್‌ಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ರೀತಿಯಲ್ಲಿ ಖರೀದಿಸಬಹುದು. ಗಣರಾಜ್ಯೋತ್ಸವದ ಭವ್ಯ ಪೆರೇಡ್ ಹಾಗೂ ಬೀಟಿಂಗ್ ರಿಟ್ರೀಟ್‌ನ ಅದ್ಭುತ ಕ್ಷಣಗಳನ್ನು ನೇರವಾಗಿ ಕಣ್ತುಂಬಿಕೊಳ್ಳಲು ಆಸಕ್ತರು ಸಮಯಕ್ಕೆ ಸರಿಯಾಗಿ ಟಿಕೆಟ್ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

Advertisement

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

 

News Source : Times Now

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು