ಮಂಗಳೂರು: ಮಂಗಳೂರು ಮತ್ತು ಬೆಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆ ಹೊಸ ಲೇಟ್ ನೈಟ್ ವಿಮಾನ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ.
ಮಾರ್ಚ್ 10ರಿಂದ ಈ ಹೊಸ ಸೇವೆ ಪ್ರಾರಂಭವಾಗಲಿದ್ದು, ಪ್ರತಿದಿನ ರಾತ್ರಿ ವೇಳೆಯಲ್ಲಿ ವಿಮಾನ ಸಂಚಾರ ನಡೆಯಲಿದೆ. ವಿಮಾನ IX 5971 ಬೆಂಗಳೂರು ವಿಮಾನ ನಿಲ್ದಾಣದಿಂದ ರಾತ್ರಿ 9.25ಕ್ಕೆ ಹೊರಟು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 10.40ಕ್ಕೆ ತಲುಪಲಿದೆ.

ಇದನ್ನೂ ಓದಿ: ಉಡುಪಿಯಲ್ಲಿ ಬೀದಿ ನಾಯಿಗಳಿಗೆ ಹೊಸ ‘ಮನೆ’: ಹಲವು ಎಕರೆ ಜಮೀನು ಮೀಸಲು
ಇನ್ನೊಂದೆಡೆ ವಾಪಸಿ ವಿಮಾನ IX 5972 ಮಂಗಳೂರಿನಿಂದ ರಾತ್ರಿ 11.10ಕ್ಕೆ ಹೊರಟು, ಬೆಂಗಳೂರಿಗೆ ರಾತ್ರಿ 12.20ಕ್ಕೆ ತಲುಪಲಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರ ಪ್ರಕಾರ, ಈ ವಿಮಾನ ಸೇವೆ ಮಾರ್ಚ್ 10ರಿಂದ ಮಾರ್ಚ್ 28ರವರೆಗೆ ಕಾರ್ಯನಿರ್ವಹಿಸಲಿದೆ. ಈ ಸೇವೆಯಿಂದ ವಿಶೇಷವಾಗಿ ಉದ್ಯೋಗ ಹಾಗೂ ವ್ಯವಹಾರ ಸಂಬಂಧಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

