ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಐತಿಹಾಸಿಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಟಿ20 ವಿಶ್ವಕಪ್ ಇತಿಹಾಸದ ನಾಕೌಟ್ ಹಂತದಲ್ಲಿ (ಸೆಮಿಫೈನಲ್ ) ಅತಿ ಹೆಚ್ಚು ತಂಡದ ಮೊತ್ತ ದಾಖಲಿಸಿದ ಕೀರ್ತಿಗೆ ಭಾರತ ತಂಡ ಪಾತ್ರವಾಗಿತ್ತು. ಇದೀಗ ಪೈನಲ್ನಲ್ಲಿ ಮತ್ತೆ ಅದೇ ಸಾಧನೆಯನ್ನು ಮಾಡಿದೆ. ಭಾರತದ ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಕಿವೀಸ್ ಬೌಲರ್‌ಗಳನ್ನು ಮನಬಂದಂತೆ ಎದುರಿಸಿದ್ದಾರೆ.
ಪವರ್‌ಪ್ಲೇನ ಮೊದಲ 6 ಓವರ್‌ಗಳಲ್ಲಿ 92 ರನ್ ಚಚ್ಚಿದ್ದಾರೆ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚಿನ ಪವರ್‌ಪ್ಲೇ ಸ್ಕೋರ್ ಎಂಬ ದಾಖಲೆಗೆ ಪಾತ್ರವಾಗಿದೆ. ಈ ಮೂಲಕ 2024ರಲ್ಲಿ ವೆಸ್ಟ್ ಇಂಡೀಸ್ ತಂಡ ಅಫ್ಘಾನಿಸ್ತಾನ ವಿರುದ್ಧ ಗಳಿಸಿದ್ದ 92/1 ರನ್‌ಗಳ ದಾಖಲೆಯನ್ನು ಭಾರತ ಸರಿಗಟ್ಟಿದೆ.

ಟೂರ್ನಿಯುದ್ದಕ್ಕೂ ಫಾರ್ಮ್‌ಗಾಗಿ ಪರದಾಡಿದ್ದ ಅಭಿಷೇಕ್ ಶರ್ಮಾ, ಫೈನಲ್ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಚಲನ ಮೂಡಿಸಿದರು. ಇದು ಟಿ20 ವಿಶ್ವಕಪ್‌ನ ನಾಕೌಟ್ ಹಂತದಲ್ಲಿ ದಾಖಲಾದ ಅತಿ ವೇಗದ ಅರ್ಧಶತಕವಾಗಿದೆ. ಅಂತಿಮವಾಗಿ ಅಭಿಷೇಕ್ 21 ಎಸೆತಗಳಲ್ಲಿ 52 ರನ್ (6 ಫೋರ್, 3 ಸಿಕ್ಸ್) ಗಳಿಸಿ ಔಟಾದರು.
ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಉತ್ತಮ ಪ್ರದರ್ಶನ:
ಭರ್ಜರಿ ಫಾರ್ಮ್ ಮುಂದುವರಿಸಿದ ಸಂಜು, 44 ಎಸೆತಗಳಲ್ಲಿ 89 ರನ್ (ಸಿಕ್ಸರ್‌ಗಳ ಸುರಿಮಳೆ) ಸಿಡಿಸಿದರು. ಇದು ಅವರ ಸತತ ಮೂರನೇ ಅರ್ಧಶತಕವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಇಶಾನ್ 23 ಎಸೆತಗಳಲ್ಲಿ 54 ರನ್ ಗಳಿಸಿದರು. ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ತಂಡವೊಂದರ ಟಾಪ್-3 ಬ್ಯಾಟರ್‌ಗಳು (ಅಭಿಷೇಕ್, ಸಂಜು, ಇಶಾನ್) ಒಂದೇ ಇನಿಂಗ್ಸ್‌ನಲ್ಲಿ 50+ ರನ್ ಗಳಿಸಿದ ಅಪರೂಪದ ದಾಖಲೆ ನಿರ್ಮಾಣವಾಯಿತು.
ಇದನ್ನೂ ಓದಿ: ಅಭಿಷೇಕ್ ಶರ್ಮಾ ವಿಶ್ವ ದಾಖಲೆ: ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅತಿ ವೇಗದ ಅರ್ಧಶತಕ!
ಭಾರತಕ್ಕೆ ದೊಡ್ಡ ಮೊತ್ತ:
ಅಂತಿಮವಾಗಿ ಶಿವಂ ದುಬೆ ಅವರ ಸಿಡಿಲಬ್ಬರದ ಬ್ಯಾಟಿಂಗ್ (ಕೊನೆಯ ಓವರ್‌ನಲ್ಲಿ 24 ರನ್) ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 255/5 ರನ್ ಗಳಿಸಿದೆ. ಇದು ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ದಾಖಲಾದ ಗರಿಷ್ಠ ಮೊತ್ತವಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

