ಅಹಮದಾಬಾದ್: ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ 2026ರ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಆಟಗಾರರಿಗೆ ಮತ್ತು ತಂಡಕ್ಕೆ ಸಿಗಲಿರುವ ಬೃಹತ್ ಮೊತ್ತದ ಬಹುಮಾನಗಳ ವಿವರ ಪ್ರಕಟವಾಗಿದೆ.
ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಐಸಿಸಿ ಭರ್ಜರಿ 3 ಮಿಲಿಯನ್ ಡಾಲರ್ (ಸುಮಾರು 27.48 ಕೋಟಿ ರೂಪಾಯಿ) ನಗದು ಬಹುಮಾನ ನೀಡಿದೆ. ಫೈನಲ್‌ನಲ್ಲಿ ಸೋಲೊಪ್ಪಿಕೊಂಡ ನ್ಯೂಜಿಲೆಂಡ್ ತಂಡಕ್ಕೆ 1.6 ಮಿಲಿಯನ್ ಡಾಲರ್ (ಸುಮಾರು 14.65 ಕೋಟಿ ರೂಪಾಯಿ) ಲಭಿಸಿದೆ. ಐಸಿಸಿ ಈ ಬಾರಿ ಒಟ್ಟು 13.5 ಮಿಲಿಯನ್ ಡಾಲರ್ (ಸುಮಾರು 113 ಕೋಟಿ ರೂ.) ಬಹುಮಾನದ ನಿಧಿಯನ್ನು ಘೋಷಿಸಿತ್ತು. ಇದು ಕಳೆದ ಬಾರಿಗಿಂತ ಶೇ. 20ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಗೆಲುವಿನ ಸಂಭ್ರಮದ ನಡುವೆ ಇಶಾನ್ ಕಿಶನ್ ಕಣ್ಣೀರು: “ಈ ವಿಶ್ವಕಪ್ ನನ್ನ ಅಗಲಿದ ಸಹೋದರಿಗೆ ಅರ್ಪಣೆ”
ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರನಿಗೆ ಕೇವಲ ನಗದು ಮಾತ್ರವಲ್ಲದೆ, ದುಬಾರಿ ಉಡುಗೊರೆಗಳು ಸಿಗಲಿವೆ. ಐಸಿಸಿ ವತಿಯಿಂದ ವಿಶೇಷ ಪದಕ ಅಥವಾ ಟ್ರೋಫಿ ನೀಡಲಾಗುತ್ತದೆ. ಪ್ರಾಯೋಜಕರಿಂದ ಅತ್ಯಾಧುನಿಕ SUV ಕಾರು (ಅಥವಾ ಎಲೆಕ್ಟ್ರಿಕ್ ವಾಹನ), ಐಷಾರಾಮಿ ವಾಚ್ ಮತ್ತು ಇತರ ಬೆಲೆಬಾಳುವ ಗಿಫ್ಟ್‌ಗಳು ಸಿಗಲಿವೆ ಎಂದು ವರದಿಗಳು ತಿಳಿಸಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

