“ಇದು ಕ್ರಿಕೆಟ್ ಮೇಲಿರುವ ಹುಚ್ಚು ಅಭಿಮಾನ”: ಭಾರತ ವಿಶ್ವಕಪ್​​​​​​​ ಗೆಲುವನ್ನು ನಡು ರಸ್ತೆಯಲ್ಲಿ ಸಂಭ್ರಮಿಸಿದ ಅಭಿಮಾನಿ

ಅಹಮದಾಬಾದ್: ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಗುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಆದರೆ, ಈ ಸಂಭ್ರಮದ ನಡುವೆ ವ್ಯಕ್ತಿಯೊಬ್ಬರು ರಸ್ತೆಯ ಮಧ್ಯೆ ಅಕ್ಷರಶಃ ಭಾವನೆಗಳ ಮೇಲೆ ಹತೋಟಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಭಾರತ ತಂಡ ಗೆಲ್ಲುತ್ತಿದ್ದಂತೆ ರಸ್ತೆಗಿಳಿದ ಈ ಅಭಿಮಾನಿ, ವಾಹನ ಸಂಚಾರದ ನಡುವೆಯೇ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ರಸ್ತೆಯ ಮೇಲೆ ಮಲಗಿ ಉರುಳಾಡುತ್ತಾ, ಕೂಗಾಡುತ್ತಾ ವಿಲಕ್ಷಣವಾಗಿ ಸಂಭ್ರಮಿಸಿದ್ದಾರೆ. ಈತನ ವಿಚಿತ್ರ ನೃತ್ಯ ಮತ್ತು ಸಂಭ್ರಮದಿಂದಾಗಿ ರಸ್ತೆಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಯಿತು. ಪಕ್ಕದಲ್ಲೇ ಇದ್ದವರು ಇದನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈಗ ಇಂಟರ್ನೆಟ್‌ನಲ್ಲಿ “ಕ್ರೇಜಿ ಅಭಿಮಾನಿ” ಎಂಬ ಶೀರ್ಷಿಕೆಯಡಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಸೋಲಿನ ಕ್ಷಣ: ಪತ್ನಿಯರಿಂದ ಅಪ್ಪುಗೆಯ ಧೈರ್ಯ; ಲಿಪ್‌ಕಿಸ್ ಕೊಟ್ಟ ಕಿವೀಸ್‌ನ ಫಿಲಿಪ್ಸ್, ಸೋಧಿ- ವಿಡಿಯೋ ವೈರಲ್

ಇಲ್ಲಿದೆ ನೋಡಿ ವಿಡಿಯೋ:

ಕೆಲವರು “ಇದು ಕ್ರಿಕೆಟ್ ಮೇಲಿರುವ ಹುಚ್ಚು ಅಭಿಮಾನ” ಎಂದು ಬೆಂಬಲಿಸಿದರೆ, ಇನ್ನೂ ಕೆಲವರು “ಸಂಭ್ರಮವಿರಲಿ ಆದರೆ ಸಾರ್ವಜನಿಕರಿಗೆ ತೊಂದರೆಯಾಗಬಾರದು” ಎಂದು ಕಿವಿಮಾತು ಹೇಳುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು