ಪಯೋಂಗ್ಯಾಂಗ್: ಉತ್ತರ ಕೊರಿಯಾದಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ಆದರೆ, ಅವರು ಪಡೆದ ಮತಗಳ ಪ್ರಮಾಣ ಈಗ ಇಡೀ ವಿಶ್ವದ ಗಮನ ಸೆಳೆದಿದೆ. ಕಿಮ್ ಅವರು ಬರೋಬ್ಬರಿ ಶೇ. 99.93ರಷ್ಟು ಮತಗಳನ್ನು ಪಡೆಯುವ ಮೂಲಕ ತಮ್ಮ ಅಧಿಕಾರವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ.
ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮಗಳ ಪ್ರಕಾರ, ದೇಶದ ಬಹುತೇಕ ಎಲ್ಲಾ ಮತದಾರರು ಕಿಮ್ ಜಾಂಗ್ ಉನ್ ಪರವಾಗಿಯೇ ಮತ ಚಲಾಯಿಸಿದ್ದಾರೆ. ಕೇವಲ ಶೇ. 0.07ರಷ್ಟು ಮತಗಳು ಮಾತ್ರ ವಿರೋಧವಾಗಿ ಬಿದ್ದಿವೆ ಎನ್ನಲಾಗಿದೆ. ಕಿಮ್ ವಿರುದ್ಧ ಮತ ಚಲಾಯಿಸಿದ ಅಥವಾ ಮತದಾನದಿಂದ ದೂರ ಉಳಿದ ಆ 18,000 ಮತದಾರರ ಗತಿ ಏನಾಗಬಹುದು? ಎಂಬ ಬಗ್ಗೆ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. “ಆ 18,000 ಜನರು ಈಗ ಎಲ್ಲಿದ್ದಾರೆ?” ಎಂದು ನೆಟ್ಟಿಗರು ವ್ಯಂಗ್ಯವಾಗಿ ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಮೇಲೆ ಪಾಕ್ ವೈಮಾನಿಕ ದಾಳಿ: ಭಾರತದ ಬೆಂಬಲ ಕೋರಿದ ಕ್ರಿಕೆಟ್ ತಾರೆ ಅಲ್ಲಾ ಘಜನ್ಫರ್!
ಉತ್ತರ ಕೊರಿಯಾದಲ್ಲಿ ಚುನಾವಣೆ ಎನ್ನುವುದು ಕೇವಲ ಔಪಚಾರಿಕ ಪ್ರಕ್ರಿಯೆಯಾಗಿದ್ದು, ಅಲ್ಲಿ ಅಭ್ಯರ್ಥಿಗಳನ್ನು ಸರ್ಕಾರವೇ ಆಯ್ಕೆ ಮಾಡುತ್ತದೆ. ಮತದಾರರು ಕೇವಲ ‘ಹೌದು’ ಅಥವಾ ‘ಇಲ್ಲ’ ಎಂದು ಗುರುತು ಮಾಡಬೇಕಿರುತ್ತದೆ. ಆದರೆ ‘ಇಲ್ಲ’ ಎಂದು ಹೇಳುವುದು ಅಲ್ಲಿ ಅಪಾಯಕಾರಿ ಎಂಬ ಮಾತಿದೆ.ಕಿಮ್ ಜಾಂಗ್ ಉನ್ ಅವರ ಈ “ಅತಿಮಾನುಷ” ಗೆಲುವು ಪ್ರಜಾಪ್ರಭುತ್ವದ ಅಣಕ ಎಂದು ಜಾಗತಿಕ ರಾಜಕೀಯ ವಿಶ್ಲೇಷಕರು ಟೀಕಿಸುತ್ತಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

