ಬಿರ್ಲಾ ಕಂಪನಿಗೆ 16,600 ಕೋಟಿ ರೂ.ಗೆ ಮಾರಾಟವಾಯ್ತು RCB ತಂಡ!

ಐಪಿಎಲ್ 2025ರ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ದಾಖಲೆಯ ಬೆಲೆಗೆ ಮಾರಾಟವಾಗುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ. ಬರೋಬ್ಬರಿ ₹16,600 ಕೋಟಿ (1.78 ಬಿಲಿಯನ್ ಡಾಲರ್) ಮೊತ್ತಕ್ಕೆ ಈ ಫ್ರಾಂಚೈಸಿಯನ್ನು ಪ್ರಮುಖ ಹೂಡಿಕೆದಾರರ ಒಕ್ಕೂಟವು ಖರೀದಿಸಿದೆ.

ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಅಮೆರಿಕದ ಖಾಸಗಿ ಇಕ್ವಿಟಿ ದೈತ್ಯ ಬ್ಲ್ಯಾಕ್‌ಸ್ಟೋನ್ (Blackstone) ಈ ತಂಡವನ್ನು ಜಂಟಿಯಾಗಿ ಖರೀದಿಸಿವೆ. ಈ ಮೊತ್ತವು ಐಪಿಎಲ್ ಇತಿಹಾಸದಲ್ಲೇ ಒಂದು ಫ್ರಾಂಚೈಸಿಗೆ ನೀಡಲಾದ ಅತ್ಯಧಿಕ ಮೊತ್ತವಾಗಿದೆ. ಈ ಮೂಲಕ ಆರ್‌ಸಿಬಿ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ತಂಡಗಳ ಸಾಲಿಗೆ ಸೇರಿದೆ.

Advertisement

ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ಮೆಗಾ ಡೀಲ್: 15,286 ಕೋಟಿ ರೂ.ಗೆ ಮಾರಾಟವಾಯ್ತು ರಾಜಸ್ಥಾನ ರಾಯಲ್ಸ್!

ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು ಈ ಹೊಸ ಮಾಲೀಕತ್ವದ ಅಡಿಯಲ್ಲಿ ತಂಡದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಒಪ್ಪಂದದಲ್ಲಿ ಆರ್‌ಸಿಬಿ ಪುರುಷರ ತಂಡದ ಜೊತೆಗೆ ಡಬ್ಲ್ಯೂಪಿಎಲ್ (WPL) ಮಹಿಳಾ ತಂಡವೂ ಸೇರಿದೆ.ಪ್ರಸ್ತುತ ಮಾಲೀಕರಾದ ಡಿಯಾಜಿಯೊ ಸಂಸ್ಥೆಯಿಂದ ಈ ಬದಲಾವಣೆಯು ಐಪಿಎಲ್ 2026ರ ಸೀಸನ್ ಮುಗಿದ ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ.

ಕ್ರಿಕೆಟ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು